ಕೊರೋನಾ ಚಿಕಿತ್ಸೆ ದಿನವೊಂದಕ್ಕೆ 20 ಸಾವಿರ ರೂ.: ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳ ಹೊಸ ಪ್ರಸ್ತಾವನೆ

ಕೊರೋನಾ ಚಿಕಿತ್ಸೆ ದಿನವೊಂದರ ದರವನ್ನು 20 ಸಾವಿರ ರೂಗೆ ಏರಿಕೆ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳು ರಾಜ್ಯಸರ್ಕಾರಕ್ಕೆ ಮನವಿ ಮಾಡಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಚಿಕಿತ್ಸೆ ದಿನವೊಂದರ ದರವನ್ನು 20 ಸಾವಿರ ರೂಗೆ ಏರಿಕೆ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳು ರಾಜ್ಯಸರ್ಕಾರಕ್ಕೆ ಮನವಿ ಮಾಡಿವೆ.

ಪ್ರಸ್ತುತ ಕೊರೋನಾ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ 10 ಸಾವಿರ ರೂಗಳನ್ನು ನಿಗದಿಪಡಿಸಲಾಗಿದ್ದು, ಈ ದರವನ್ನು 20 ಸಾವಿರ ರೂಗೆ ಏರಿಕೆ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ಬೇಡಿಕೆ ಇಟ್ಟಿವೆ. ಮೂಲಗಳ ಪ್ರಕಾರ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ವಾರ್ಡಿಗೆ 10 ಸಾವಿರ ರೂ ಮತ್ತು ವಿಶೇಷ ಮತ್ತು ಐಸಿಯು ವಾರ್ಡ್ ಗಳಿಗೆ 20 ಸಾವಿರ ರೂ ದರ ನಿಗದಿ ಮಾಡುವಂತೆ ಬೇಡಿಕೆ ಸಲ್ಲಿಸಿವೆ.

ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರಗಳು 10 ಸಾವಿರ ರೂಗಳಿಂದ 23 ಸಾವಿರ ರೂಗಳ ವರೆಗೆ ದರ ನಿಗದಿ ಮಾಡಿವೆ. ಅದೇ ರೀತಿ ಕರ್ನಾಟಕದಲ್ಲೂ ದರ ನಿಗದಿ ಮಾಡುವಂತೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಸಲ್ಲಿಸಿವೆ. 

ಮಹಾರಾಷ್ಟ್ರದಲ್ಲಿ ಪ್ರತ್ಯೇಕ ಸಾಮಾನ್ಯ ವಾರ್ಡ್ ಗೆ ದಿನವೊಂದಕ್ಕೆ4 ಸಾವಿರ ರೂಗ ನಿಗದಿ ಮಾಡಲಾಗಿದ್ದು, ವಿಂಟಿಲೇಟರ್ ರಹಿತ ಐಸಿಯುಗೆ 7500 ಮತ್ತು ವಿಂಟಿಲೇಟರ್ ಸಹಿತ ಐಸಿಯುಗೆ 9000 ಸಾವಿರ ರೂನಿಗದಿ ಮಾಡಲಾಗಿತ್ತು. ಓರ್ವ ಕೊರೋನಾ ರೋಗಿಯ ಚಿಕಿತ್ಸೆಗೆ ಸುಮಾರು 3.5 ಲಕ್ಷ ರೂ ವೆಚ್ಚವಾಗಲಿದ್ದು, ಇದಲ್ಲಿ ಪಿಪಿಇ ಕಿಟ್ ಗಳು, ಎನ್ 95 ಮಾಸ್ಕ್ ಗಳು, ಸ್ಯಾನಿಟೈಸರ್ ಗಳು, ಔಷಧಿಗಳು, ಕೋವಿಡ್ ಕಟ್ಟಡಕ್ಕೆ ಬಳಕೆ ಮಾಡುವ ವಸ್ತುಗಳು, ಸಿಬ್ಬಂದಿಗಳ ವೇತನ, ತನಿಖಾ ಅಥವಾ ಪರೀಕ್ಷಾ ವೆಚ್ಚಗಳು, ರೋಗಿ ಮತ್ತು ಸಿಬ್ಬಂದಿಗಳ ಊಟ, ಸಾರಿಗೆ ಮತ್ತು ಇತರೆ ವೆಚ್ಚಗಳು ಸೇರಿವೆ.

 ಕೊರೋನಾ ರೋಗಿಗಳಲ್ಲಿ ಮೂರು ವಿಧದ ರೋಗಿಗಳಿದ್ದು, ರೋಗ ಲಕ್ಷಣಗಳಿಲ್ಲದ ರೋಗಿಗಳು, ಅಲ್ಪ ಪ್ರಮಾಣದ ಲಕ್ಷಣಗಳಿರುವ ರೋಗಿಗಳು (ಜ್ವರ ನೆಗಡಿ ತಲೆನೋಲು, ಉಸಿರಾಟದ ಅಲ್ಪ ತೊಂದರೆ) ಮತ್ತು ತೀವ್ರ ತರನಾದ ರೋಗ ಲಕ್ಷಣಗಳಿರುವ ರೋಗಿಗಳು. ಈ ಮೂರನೇ ಮಾದರಿಯ ರೋಗಿಗಳ ಪೈಕಿ ಶೇ.10ರಷ್ಟು ಮಂದಿಗೆ ಹೆಚ್ಚಿನ ತೀವ್ರತೆಯ ಮೇಲ್ವಿಚಾರಣೆ ಮತ್ತು ವೆಂಟಿಲೇಟರ್ ಗಳ ಅವಶ್ಯಕತೆ ಇರುತ್ತದೆ. ವೈದ್ಯಕೀಯ ವಿಮಾ ಕಂಪನಿಗಳು ಮತ್ತು ಇತರೆ ರಾಜ್ಯಗಳಲ್ಲಿ ನಿಗದಿ ಮಾಡಲಾಗಿರುವ ವೆಚ್ಚಕ್ಕಿಂತ ಕಡಿಮೆ ವೆಚ್ಚವನ್ನು ರಾಜ್ಯದಲ್ಲಿ ಪಡೆಯಲಾಗುತ್ತಿದೆ. ಚಿಕಿತ್ಸೆಗೆ ಆಗುವ ಅಸಲಿ ವೆಚ್ಚಕ್ಕಿಂತ ಕಡಿಮೆ ವೆಚ್ಚವನ್ನು ನಾವು ಸರ್ಕಾರದ ಮುಂದೆ ಇಟ್ಟಿದ್ದೇವೆ. ರೋಗಿ ಶುಗರ್, ಕಿಡ್ನಿ ಅಥವಾ ಲಿವರ್, ಕ್ಯಾನ್,ರ್ ರೋಗಿಯಾಗಿದ್ದರೆ ಅವುಗಳಿಗೂ ಚಿಕಿತ್ಸೆ ನೀಡಬೇಕು. ಆಗ ಚಿಕಿತ್ಸಾ ವೆಚ್ಚ ಇನ್ನೂ ಹೆಚ್ಚಾಗುತ್ತದೆ. ಒಂದು ಅಂದಾಜಿನ ಪ್ರಕಾರ ವೆಂಟಿಲೇಟರ್ ನಲ್ಲಿರುವ ರೋಗಿಯ ದಿನವೊಂದರ ಚಿಕಿತ್ಸಾ ವೆಚ್ಚ 30 ಸಾವಿರ ರೂ ಗಡಿ ದಾಟುತ್ತದೆ ಎಂದು ಖಾಸಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಬದ್ದೆ ಮಾತನಾಡಿರುವ ಎಂಎಸ್ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಅಧ್ಯಕ್ಷ ಡಾ. ನರೇಶ್ ಶೆಟ್ಟಿ ಅವರು, ಕೋವಿಡ್ ರೋಗಿಯ ಸಾಮಾನ್ಯ ಚಿಕಿತ್ಸಾ ವೆಚ್ಚವೇ 30 ಸಾವಿರ ದಾಟುತ್ತದೆ. ಐಸಿಯು ರೋಗಿಗಳಿಗೆ ಆ್ಯಂಟಿ ಬಯಾಟಿಕ್ ಗಳ ಬಳಕೆ ಮಾಡಿದರೆ ಈ ವೆಚ್ಚದ ಪ್ರಮಾಣ ಇನ್ನೂ ಹೆಚ್ಚಾಗುತ್ತದೆ. ಒಂದು ವೇಳೆ ಸರ್ಕಾರ ಪಿಪಿಇ ಕಿಟ್ ಗಳ ಸರಬರಾಜು ಮಾಡಿದರೆ ಆಗ ಚಿಕಿತ್ಸಾ ವೆಚ್ಚದ ಕುರಿತೂ ನಿರ್ಧರಿಸಬೇಕು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com