ಕೊರೋನಾ ಕಾಲಿಡದ ದಕ್ಷಿಣ ಭಾರತದ ಏಕೈಕ ಜಿಲ್ಲೆ ಚಾಮರಾಜನಗರ: ಕೇಂದ್ರ ಆರೋಗ್ಯ ಸಚಿವರಿಂದ ಪ್ರಶಂಸೆ

ಚಾಮರಾಜನಗರ ಜಿಲ್ಲೆಯು ಕೊರೊನಾ ಮುಕ್ತವಾಗಿ ಮುಂದುವರೆಯುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಜಿಲ್ಲಾಧಿಕಾರಿಯವರಾದ ಡಾ. ಎಂ.ಆರ್. ರವಿ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ
ಚಾಮರಾಜನಗರ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯು ಕೊರೊನಾ ಮುಕ್ತವಾಗಿ ಮುಂದುವರೆಯುತ್ತಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಜಿಲ್ಲಾಧಿಕಾರಿಯವರಾದ ಡಾ. ಎಂ.ಆರ್. ರವಿ ಅವರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ  ರೆಡ್‍ಕ್ರಾಸ್ ವತಿಯಿಂದ ವಿಶ್ವ ಪರಿಸರ ದಿನ ಅಂಗವಾಗಿ ಪೊಲೀಸ್ ಉಪ ಅಧೀಕ್ಷರ ಕಚೇರಿ ಮುಂಭಾಗದಲ್ಲಿ ಹಾಗೂ ಜಿಲ್ಲಾ ಆಸ್ಪತ್ರೆಯ ಅವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದ ಬಳಿಕ  ಮಾಧ್ಯಮ ಪ್ರತಿನಿಧಿಗಳು ದೂರವಾಣಿ ಕರೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೇಳೆ ಈ ವಿಷಯ ತಿಳಿಸಿದರು.

ಗುರುವಾರ  ಸಂಜೆ ಕೇಂದ್ರ ಆರೋಗ್ಯ ಸಚಿವರು ದೂರವಾಣಿ ಮೂಲಕ ಮಾತನಾಡಿ ಚಾಮರಾಜನಗರ ಜಿಲ್ಲೆಯಲ್ಲಿ ಒಂದು ಕೊರೊನಾ ಪ್ರಕರಣ ದಾಖಲಾಗಿಲ್ಲ. ಈ ಮೂಲಕ ಹಸಿರು ವಲಯವನ್ನಾಗಿ ಕಾಪಾಡಿಕೊಂಡಿರುವ ಬಗ್ಗೆ ಜಿಲ್ಲೆಯ ಜನತೆ, ಅಧಿಕಾರಿಗಳು ಹಾಗೂ ನನಗೆ ಶುಭ ಹಾರೈಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com