ರಾಜ್ಯಕ್ಕೆ 'ಮಹಾ' ಕಂಟಕ: ಮಹಾರಾಷ್ಟ್ರದಿಂದ ವಾಪಸ್ ಬಂದ ಶೇ.59.28ರಷ್ಟು ಮಂದಿಯಲ್ಲಿ ವೈರಸ್ ಪತ್ತೆ

ರಾಜ್ಯ ಸರ್ಕಾರ ಮಹಾರಾಷ್ಟ್ರ ಸೊಂಕು ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಪತ್ತೆಯಾಗಿರುವ 4,320 ಸೋಂಕಿತ ಪ್ರಕರಣಗಳ ಪೈಕಿ ಶೇ.59.28 ಅಂದರೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದ 2561 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರ ಮಹಾರಾಷ್ಟ್ರ ಸೊಂಕು ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಪತ್ತೆಯಾಗಿರುವ 4,320 ಸೋಂಕಿತ ಪ್ರಕರಣಗಳ ಪೈಕಿ ಶೇ.59.28 ಅಂದರೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದ 2561 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

ರಾಜ್ಯದಲ್ಲಿ ಸ್ಥಳೀಯವಾಗಿ ಹರಡಿರುವುದಕ್ಕಿಂತ ಬಹುಪಾಲು ಅಂತರ್ ರಾಜ್ಯ ಪ್ರಯಾಣಿಕರಿಂದಲೇ ಹೆಚ್ಚು ಸೋಂಕು ಹರಡಿದೆ. ಒಟ್ಟು ಪ್ರಕರಣಗಳ ಪೈಕಿ 2,914 ಮಂದಿ ಅಂತರ್ ರಾಜ್ಯ ಪ್ರಯಾಣಿಕರಾಗಿದ್ದಾರೆ. 

ಉಳಿದಂತೆ ಸೋಂಕಿತರ ಸಂಪರ್ಕದಿಂದ 992, ವಿದೇಶ ಪ್ರಯಾಣಿಕರಿಂದ 131 ಹಾಗೂ ಸಾರಿ (ತೀವ್ರ ಉಸಿರಾಟ ತೊಂದರೆ) ಹಿನ್ನೆಲೆಯವರಿಂದ 70, ಐಎಲ್ಐ (ವಿಷಮಶೀತ ಜ್ವರ ಮಾದರಿ ಕಾಯಿಲೆ) ಹಿನ್ನೆಲೆಯ 46 ಮಂದಿಗೆ ಸೋಂಕು ಹರಡಿದೆ. ಉಳಿದಂತೆ 167 ಮಂದಿಯ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
    
ಈ ನಡುವೆ ಮಹಾರಾಷ್ಟ್ರದಿಂದ ಬಂದಿದ್ದ ಜೆಪಿ ನಗರದ ರಾಗಿಗುಡ್ಡ ಕೊಳಚೆ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳಲ್ಲಿಯೂ ಕೊರೋನಾ ಪತ್ತೆಯಾಗಿದ್ದು, ಇದೀಗ ಆ ಪ್ರದೇಶವನ್ನು ಅಧಿಕಾರಿಗಳು ಸೀಲ್'ಡೌನ್ ಮಾಡಿದ್ದಾರೆ. ಇನ್ನು ಮಲ್ಲೇಶ್ವರದ ಬ್ಯಾಂಕ್ ವೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿಯಲ್ಲೂ ವೈರಸ್ ಪತ್ತೆಯಾಗಿದ್ದು, ಬ್ಯಾಂಕ್'ನ್ನು ಸೀಲ್ಡೌನ್ ಮಾಡಲಾಗಿದೆ. 

ಕೊರೋನಾ ಪತ್ತೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಮಾಡುತ್ತಿಲ್ಲ. ಹೊರ ರಾಜ್ಯದಿಂದ ಬಂದವರಿಗೆ ಪ್ರವೇಶಿಸಲು ಯಾವುದೇ ರಾಜ್ಯಗಳು ನಿರ್ಬಂಧ ಹೇರಬಾರದು ಎಂದು ಪ್ರಧಾನಮಂತ್ರಿಗಳು ತಿಳಿಸಿದ್ದಾರೆ. ರಾಜ್ಯಕ್ಕೆ ಬರುತ್ತಿರುವ ಬಹುತೇಕ ಕಾರ್ಮಿಕರಲ್ಲಿ ಆರಂಭದಲ್ಲಿ ಲಕ್ಷಣ ಕಾಣಿಸುತ್ತಿಲ್ಲ. ಆದರೆ. ತದನಂತರದ ದಿನಗಳಲ್ಲಿ ವೈರಸ್ ದೃಢಪಡುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದು, ಬಿಡುಗಡೆಗೊಂಡ ಜನರಲ್ಲೂ ವೈರಸ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ರಾಜ್ಯ ಸರ್ಕಾರ ಸಾಕಷ್ಟು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದೆ. ಆದರೆ, ಇತರೆ ರಾಜ್ಯಗಳು ಆ ಕೆಲಸವನ್ನು ಮಾಡುತ್ತಿಲ್ಲ. ಕೊರೋನಾ ನೆಗೆಟಿವ್ ಬಂದಿರುವ ವರದಿಗಳೂ ಬೆಳಕಿಗೆ ಬಂದಿವೆ. ಜಾಗದ ಕೊರತೆಯಿದ್ದು, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಿಸಲು ಸಾಧ್ಯವಾಗುತ್ತಿಲ್ಲ. ಮಹಾರಾಷ್ಟ್ರದಿಂದ ಬರುತ್ತಿರುವ ವೈರಸ್ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆರೋಗ್ಯಾಧಿಕಾರಿಗಳಿಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಹೋಲಿಕೆ ಮಾಡಿದರೆ, ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ. ಮಹಾರಾಷ್ಟ್ರದಿಂದ ಬರುತ್ತಿರುವ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಾವು ಅಸಹಾಯಕರಾಗಿದ್ದೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com