ಕೋವಿಡ್‌ 19 ಸೋಂಕು: ಮಹಾರಾಷ್ಟ್ರ ಮೊದಲ ಸ್ಥಾನ, ಕರ್ನಾಟಕ 11ನೇ ಸ್ಥಾನ

ದೇಶಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದರೆ 12ನೇ ಸ್ಥಾನದಲ್ಲಿದ್ದ ಕರ್ನಾಟಕ 11ಕ್ಕೆೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶಾದ್ಯಂತ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದರೆ 12ನೇ ಸ್ಥಾನದಲ್ಲಿದ್ದ ಕರ್ನಾಟಕ 11ಕ್ಕೆೇರಿದೆ.

ರಾಜ್ಯದಲ್ಲಿ ಕೋವಿಡ್‌ 19 ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ರಾಜ್ಯವಾರು ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ 11ನೇ ಸ್ಥಾನಕ್ಕೇರಿದೆ. ಗುರುವಾರ ಮಧ್ಯಾಹ್ನದವರೆಗೂ ರಾಜ್ಯ 12ನೇ ಸ್ಥಾನದಲ್ಲಿದ್ದ ಕರ್ನಾಟಕ ಗುರುವಾರ ಸಂಜೆ ಹೊತ್ತಿಗೆ 287 ಹೊಸ ಸೋಂಕು ಪ್ರಕರಣ ದಾಖಲಾಗುವುದರೊಂದಿಗೆ 11ನೇ ಸ್ಥಾನಕ್ಕೇರಿದೆ. ರಾಜ್ಯದಲ್ಲಿ  ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 4,320ಕ್ಕೆ ಹೆಚ್ಚಳವಾಗಿದ್ದು, ರಾಜ್ಯವಾರು ಪಟ್ಟಿ ಯಲ್ಲಿ ಆಂಧ್ರ ಪ್ರದೇಶವನ್ನು ಹಿಂದಿಕ್ಕಿ ಒಂದು  ಸ್ಥಾನ ಮೇಲೇರಿದೆ. ಬಿಹಾರ 4,420 ಪ್ರಕರಣಗಳೊಂದಿಗೆ 10ನೇ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ 4,112 ಪ್ರಕರಣಗಳೊಂದಿಗೆ 12ನೇ ಸ್ಥಾನದಲ್ಲಿದೆ.

ಸೋಂಕಿತರ ಸಂಖ್ಯೆ 4,320ಕ್ಕೆ ಏರಿಕೆ
ಈ ನಡುವೆ, ಗುರುವಾರದ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟಾರೆ ಕೋವಿಡ್‌ 19 ಸೋಂಕಿತರ ಸಂಖ್ಯೆ 4,320ಕ್ಕೆ ಏರಿಕೆಯಾಗಿದೆ. ಈ ಪೈಕಿ 2,651 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೆ  1,610 ಮಂದಿ ಗುಣ ಮುಖರಾಗಿದ್ದಾರೆ. ಬಾಕಿ 59ರಲ್ಲಿ 57 ಮಂದಿ ಚಿಕಿತ್ಸೆ ಫ‌ಲಕಾರಿ ಯಾಗದೆ, ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.

ಗುರುವಾರದ 257 ಪ್ರಕರಣಗಳಲ್ಲಿ 155 ಮಂದಿ ಹೊರ ರಾಜ್ಯದಿಂದ, ಒಬ್ಬರು  ಹೊರದೇಶದಿಂದ ಬಂದಿದ್ದು, 101ಮಂದಿ ಸ್ಥಳೀಯರಾಗಿದ್ದಾರೆ. ಅತಿ ಹೆಚ್ಚು ಉಡುಪಿಯಲ್ಲಿ 92, ರಾಯಚೂರಲ್ಲಿ 88 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಮಂಡ್ಯ (15), ಹಾಸನ (15) ದಾವಣಗೆರೆ (13)ಹಾಗೂ ಬೆಳಗಾವಿ ಯಲ್ಲಿ (12) ಎರಡಂಕಿಯಷ್ಟು ಪ್ರಕರಣಗಳು ವರದಿಯಾಗಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com