ಜೂನ್ 5ರಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಆದೇಶ ಅಪ್ರಸ್ತುತ: ಸರ್ಕಾರಕ್ಕೆ ಪತ್ರ ಬರೆದ ಶಿಕ್ಷಕರು

ಜೂನ್.5ರಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಆದೇಶ ಅಪ್ರಸ್ತುತವಾದದ್ದು ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜೂನ್.5ರಿಂದ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಆದೇಶ ಅಪ್ರಸ್ತುತವಾದದ್ದು ಎಂದು ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. 

ಈ ಹಿಂದೆ ಆದೇಶ ಹೊರಡಿಸಿದ್ದ ಶಿಕ್ಷಣ ಇಲಾಖೆಯು, ಶಾಲೆ ಪುನರಾರಂಭ ಕುರಿತು ಪೋಷಕರೊಂದಿಗೆ ಮಾತುಕತೆ ನಡೆಸಿ, ಪ್ರತಿಕ್ರಿಯೆ ಸಂಗ್ರಹಿಸುವುದಕ್ಕೂ ಮುನ್ನ ಶಿಕ್ಷಕರು ಶಾಲೆಗಳಿಗೆ ಜೂನ್.5 ರಂದು ಕರ್ತವ್ಯಕ್ಕೆ ಹಾಜರಾಗಿ, ಆಡಳಿತದ ಜವಾಬ್ದಾರಿಗಳನ್ನು ನಿಭಾಯಿಸಬೇಕೆಂದು ಹೇಳಿತ್ತು.
 
ಈ ಆದೇಶಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ವಿರೋಧ ವ್ಯಕ್ತಪಡಿಸಿದ್ದು, ಆದೇಶ ಪ್ರಸ್ತುತವಾದದ್ದು ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕೆ ಜಿ. ಜಗದೀಶ್ ಅವರಿಗೆ ಪತ್ರ ಬರೆದಿರುವ ಸಂಘವು, ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಿ ಎಂಬುದು ಅಪ್ರಸ್ತುತವಾದದ್ದು. ಈಗಾಗಲೇ ರಾಜ್ಯ ಹಲವು ಶಾಲೆಗಲನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾರ್ಪಡಿಸಲಾಗಿದೆ. ಇದೀಗ ಆ ಕೇಂದ್ರಗಳನ್ನು ಸಂಪೂರ್ಣವಾಗಿ ಹಾಗೂ ಸೂಕ್ತ ರೀತಿಯಲ್ಲಿ ಸ್ಯಾನಿಟೈಸ್ ಮಾಡಬೇಕಾಗಿದೆ. ಅಲ್ಲದೆ, ಸೀಲ್'ಡೌನ್ ಆಗಿರುವ ಪ್ರದೇಶದಿಂದ ಶಿಕ್ಷಕರು ಬರುವುದು ಕಷ್ಟಕರವಾಗಿರುತ್ತದೆ. ಗ್ರಾಮಗಳಿಗೆ ತೆರಳುವುದು ಹಾಗೂ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸುವುದು ಕೂಡ ಕಷ್ಟಕರವಾದದ್ದು. ಗ್ರಾಮೀಣ ಭಾಗದ ಶಿಕ್ಷಕರಿಗೆ ಸಾರಿಗೆ ವ್ಯವಸ್ಥೆಗಳಿರುವುದಿಲ್ಲ. ಹೀಗಾಗಿ ಸರ್ಕಾರ ತನ್ನ ಆದೇಶವನ್ನು ಮರುಪರಿಶೀಲಿಸಬೇಕಿದೆ. ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ಸರ್ಕಾರ ಅನುಕೂಲಕರ ವಾತಾವರಣ ನಿರ್ಮಿಸಬೇಕು. ಆ ಬಳಿಕ ಶಾಲೆ ಆರಂಭವಾದ ಬಳಿಕ ಶಿಕ್ಷಕರು ನೇರವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಬೇಕು ಎಂದು ತಿಳಿಸಿದೆ. 

ತರಗತಿ ಪುನರಾರಂಭಿಸುವ ಕುರಿತು ಪೋಷಕರ ಅಭಿಪ್ರಾಯ ಸಂಗ್ರಹಿಸುವ ವೇಳೆ ಸರ್ಕಾರ ಪೋಷಕರು,ಶಿಕ್ಷಕರು ಮತ್ತು ಶಾಲಾ ಸಮಿತಿ ಸದಸ್ಯರ ನಡುವೆ ಮಾತುಕತೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ತಿಳಿಸಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com