ಮಂಗಳೂರು: ಪಿಪಿಇ ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸುವ ಬಸ್ ಕಂಡಕ್ಟರ್!

ಕೋವಿಡ್-19 ಭೀತಿಯಿಂದಾಗಿ ಕರ್ತವ್ಯ ನಿರತ ಬಸ್ ಕಂಡಕ್ಟರ್ ಒಬ್ಬರು ಪಿಪಿಇ ( ಪರ್ಸನಲ್ ಪ್ರೊಟೆಕ್ಟೀವ್ ಇಕ್ವೆಪ್ ಮೆಂಟ್)  ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ
ಪಿಪಿಇ ರಕ್ಷ ಕವಚದಲ್ಲಿರುವ ಬಸ್ ಕಂಡಕ್ಟರ್
ಪಿಪಿಇ ರಕ್ಷ ಕವಚದಲ್ಲಿರುವ ಬಸ್ ಕಂಡಕ್ಟರ್

ಮಂಗಳೂರು: ಕೋವಿಡ್-19 ಭೀತಿಯಿಂದಾಗಿ ಕರ್ತವ್ಯ ನಿರತ ಬಸ್ ಕಂಡಕ್ಟರ್ ಒಬ್ಬರು ಪಿಪಿಇ ( ಪರ್ಸನಲ್ ಪ್ರೊಟೆಕ್ಟೀವ್ ಇಕ್ವೆಪ್ ಮೆಂಟ್)  ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಕೋವಿಡ್-19 ಲಾಕ್ ಡೌನ್ ನಾಲ್ಕನೇ ಹಂತದ ಸಂದರ್ಭದಲ್ಲಿ ರಾಜ್ಯಸರ್ಕಾರ ಬಸ್ ಸೇವೆಗಳ ಪುನರ್ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಶಕ್ತಿ ನಗರ ಮಾರ್ಗದಲ್ಲಿನ ಬಸ್ ವೊಂದರ ಕಂಡಕ್ಟರ್ ಈ ರೀತಿಯಲ್ಲಿ ಪಿಪಿಇ ರಕ್ಷಾ ಕವಚದೊಂದಿಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.

ಕೊರೋನಾ ಕರ್ತವ್ಯ ನಿರತ ವೈದ್ಯರು, ನರ್ಸ್ ಗಳು ಪಿಪಿಇ- ರಕ್ಷ ಕವಚ ಧರಿಸುವುದು ಸಾಮಾನ್ಯ. ಆದರೆ, ಬಸ್ ಕಂಡಕ್ಟರ್  ತಲೆಗೆ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿನ್ಸ್, ಏಪ್ರಾನ್ ಹಾಕಿಕೊಳ್ಳುವ ಮೂಲಕ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದಾರೆ. ಈ ಮೂಲಕ ಸೋಂಕು ಹರಡದಂತೆ ಕಂಡಕ್ಟರ್ ಮುಂಜಾಗ್ರತೆ ವಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com