ಕೊವಿಡ್-19: ರಾಜ್ಯದಲ್ಲಿ ಇಂದು ಹೊಸದಾಗಿ 378 ಪ್ರಕರಣ, ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಶನಿವಾರ ಸಹ ಬರೋಬ್ಬರಿ 378 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದ್ದು, ಶನಿವಾರ ಸಹ ಬರೋಬ್ಬರಿ 378 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಕೊರೋನಾದಿಂದ ಇದುವರೆಗೆ 59 ಮಂದಿ ಮೃತಪಟ್ಟಿದ್ದು, 1968 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.

ಇಂದು ಹೊರ ರಾಜ್ಯಗಳಿಂದ ಬಂದ 333 ಹಾಗೂ ಹೊರ ದೇಶಗಳಿಂದ ಬಂದ 8 ಜನರಿಗೆ ಸೋಂಕು ತಗುಲಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಬೀದರ್ ನ 55 ವರ್ಷದ ಮಹಿಳೆ ಮತ್ತು ವಿಜಯಪುರದ 82 ವರ್ಷದ ಮಹಿಳೆ ಮೃತಪಟ್ಟಿದ್ದು, ಒಟ್ಟು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ 11ಕ್ಕೆ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ 5. ಕಲಬುರಗಿ 4, ಧಾರವಾಡ 2 ಮತ್ತು ತುಮಕೂರಿನಲ್ಲಿ ಒಬ್ಬರು ತೀವ್ರಾ ನಿಗಾ ಘಟಕದಲ್ಲಿದ್ದಾರೆ. 

ಇಂದು ಉಡುಪಿಯಲ್ಲಿ 121 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 889 ಕ್ಕೆ ಏರಿಕೆಯಾಗಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.

ಕಲಬುರಗಿಯಲ್ಲಿ 69 ಪ್ರಕರಣಗಳು ಕಂಡು ಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 621ಕ್ಕೆ ಏರಿದೆ. 

ಯಾದಗಿರಿಯಲ್ಲಿ 104 ಮಂದಿ ಸೋಂಕಿತರು ಕಂಡು ಬಂದಿದ್ದು, ಒಟ್ಟು ಸಂಖ್ಯೆ 476ಕ್ಕೆ ಏರಿದೆ. 

452 ಪ್ರಕರಣಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಬೆಂಗಳೂರು ನಗರದಲ್ಲಿ ಇಂದು 18 ಪ್ರಕರಣಗಳು ಪತ್ತೆಯಾಗಿವೆ. 

ದಕ್ಷಿಣ ಕನ್ನಡದಲ್ಲಿ 24, ವಿಜಯಪುರ, ದಾವಣಗೆರೆಯಲ್ಲಿ ತಲಾ 6, ಬೆಳಗಾವಿ 5, ಗದಗ 4, ಮಂಡ್ಯ, ಹಾಸನ, ಹಾವೇರಿ ಧಾರವಾಡದಲ್ಲಿ ತಲಾ 3, ರಾಯಚೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡದಲ್ಲಿ ತಲಾ 2, ಬೀದರ್, ತುಮಕೂರು, ಕೋಲಾರ, ಕೊಪ್ಪಳದಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ. ಇಂದು ಯಾದಗಿರಿಯಲ್ಲಿ 41 ಮಂದಿ ಗುಣಮುಖರಾಗಿದ್ದು, ಕಲಬುರಗಿಲ್ಲಿ 38, ಬೀದರ್ 33, ಮಂಡ್ಯ 24, ಉಡುಪಿ 21, ಚಿಕ್ಕಬಳ್ಳಾಪುರ 19, ಹಾಸನ 16, ದಕ್ಷಿಣ ಕನ್ನಡ 15, ವಿಜಯಪುರ, ಚಿತ್ರದುರ್ಗ ತಲಾ 11 ಮತ್ತು ಉತ್ತರ ಕನ್ನಡದಲ್ಲಿ 9. ಬಳ್ಳಾರಿ 8. ತುಮಕೂರು, ಕೋಲಾರದಲ್ಲಿ ತಲಾ 7. ಬೆಂಗಳೂರು ನಗರ, ಚಿಕ್ಕಮಗಳೂರು ತಲಾ 5, ಧಾರವಾಡ 4. ಬಾಗಲಕೋಟೆ 3, ದಾವಣಗೆರೆ 2 ಮತ್ತು ರಾಮನಗರದಲ್ಲಿ ಒಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com