ಮಳೆ ಮುನ್ಸೂಚನೆ ನೀಡುವ ಮೇಘ ಸಂದೇಶ ಮೊಬೈಲ್ ಆ್ಯಪ್: ಲೋಕಾರ್ಪಣೆ ಮಾಡಿದ ಸಚಿವ ಆರ್. ಅಶೋಕ

ಬೆಂಗಳೂರು ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ  ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು ಮೇಘ ಸಂದೇಶ ಎಂಬ  ಮೊಬೈಲ್‌ ಆ್ಯಪ್ ಹಾಗೂ ವೆಬ್‌ಸೈಟನ್ನು ಸಚಿವ ಆರ್ .ಅಶೋಕ ಇಂದು ಲೋಕಾರ್ಪಣೆ ಮಾಡಿದರು.
ಆಪ್ ಲೋಕಾರ್ಪಣೆ ಮಾಡಿದ ಸಚಿವ ಆರ್ ಅಶೋಕ ಮತ್ತಿತರರು
ಆಪ್ ಲೋಕಾರ್ಪಣೆ ಮಾಡಿದ ಸಚಿವ ಆರ್ ಅಶೋಕ ಮತ್ತಿತರರು

ಬೆಂಗಳೂರು: ಕಂದಾಯ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ ನಗರ ಪ್ರದೇಶ ಪ್ರವಾಹ ನಿರ್ವಹಣೆ ಸನ್ನದ್ಧತೆ ಕಾರ್ಯಾಗಾರವನ್ನು ಕಂದಾಯ ಸಚಿವ ಆರ್. ಅಶೋಕ್  ಉದ್ಘಾಟಿಸಿ, ಬೆಂಗಳೂರು ನಗರದ ನಿಗದಿತ ವಲಯವಾರು ಪ್ರದೇಶಕ್ಕೆ ಅನ್ವಯವಾಗುವ  ಮಳೆ ಮುನ್ಸೂಚನೆ, ಪ್ರವಾಹ ಮುನ್ನೆಚ್ಚರಿಕೆಗಳನ್ನು ನೀಡಲು ಬೆಂಗಳೂರು ಮೇಘ ಸಂದೇಶ ಎಂಬ  ಮೊಬೈಲ್‌ ಆಪ್‌ ಹಾಗೂ ವೆಬ್‌ಸೈಟನ್ನು ಲೋಕಾರ್ಪಣೆ ಮಾಡಿದರು.

ಯಲಹಂಕದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್. ಅಶೋಕ,  ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ನೈಸರ್ಗಿಕ ವಿಕೋಪಗಳು ಪದೇ ಪದೇ  ಸಂಭವಿಸುತ್ತಿದ್ದು, ಈ ನೈಸರ್ಗಿಕ ವಿಕೋಪಗಳಲ್ಲಿ ನಗರ ಪ್ರವಾಹವೂ ಒಂದು. ತೀವ್ರತರ ಭೂ ಬಳಕೆಯಿಂದಾಗಿ ಪ್ರಮುಖ ನಗರ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಪ್ರತಿ  ಮಳೆಗಾಲದಲ್ಲೂ ಮರುಕಳಿಸುತ್ತಿರುವುದನ್ನು ಕಾಣಬಹುದಾಗಿದೆ ಎಂದರು. 

ಬೆಂಗಳೂರು ನಗರ ಪ್ರದೇಶವೂ ಸಹ ಪ್ರತಿ ವರ್ಷ ಮಳೆಗಾಲದಲ್ಲಿ ಪ್ರವಾಹಕ್ಕೆ  ತುತ್ತಾಗುತ್ತಿದೆ. ನಗರೀಕರಣದ ಭಾಗವಾಗಿ ನಗರ ಪ್ರದೇಶದ ಬಹಳಷ್ಟು ಭೂ ಭಾಗವನ್ನು  ಕಾಂಕ್ರೀಟ್‌ ಆವರಿಸುತ್ತಿರುವುದರಿಂದ ಮಳೆ ನೀರು ಇಂಗಲು ಸ್ಥಳಾವಕಾಶವಿಲ್ಲದೆ ಮೇಲ್ಮೈ  ಹರಿವು ಹೆಚ್ಚಾಗುತ್ತಿದೆ. ರಾಜಕಾಲುವೆಗಳ ಹರಿವು ಸಾಮರ್ಥ್ಯದ ಕೊರತೆಯಿಂದಾಗಿ ಅಥವಾ ಮಳೆ ನೀರು  ಹರಿಯುವ ಕಾಲುವೆಗಳಲ್ಲಿ ಹೂಳು ತುಂಬಿರುವುದು ಅಥವಾ ಘನತ್ಯಾಜ್ಯ ಶೇಖರಣೆಯಿಂದಾಗಿ ಮಳೆ ನೀರು  ಕಾಲುವೆಗಳಿಂದ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಸಾಮಾನ್ಯವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com