ಲಾಕ್‌ಡೌನ್‌ನಲ್ಲಿ ಮಾಲಿನ್ಯ ಕಡಿಮೆ, ಪ್ರಕೃತಿ ಪುನಶ್ಚೇತನಕ್ಕೆ ಇದು ಸದಾವಕಾಶ: ಸಿಎಂ ಬಿಎಸ್ ಯಡಿಯೂರಪ್ಪ

ಕೋವಿಡ್-19 ತಡೆಗಟ್ಟಲು ಲಾಕ್‍ಡೌನ್ ಮಾಡಿದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗಿದೆ. ಮನುಷ್ಯನಿಗೆ ತೊಂದರೆಯಾದೂ ಪ್ರಕೃತಿ ಪುನಶ್ಛೇತನಗೊಳ್ಳಲು ಇದೊಂದು ಸದಾವಕಾಶವಾಯಿತು.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕೋವಿಡ್-19 ತಡೆಗಟ್ಟಲು ಲಾಕ್‍ಡೌನ್ ಮಾಡಿದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗಿದೆ. ಮನುಷ್ಯನಿಗೆ ತೊಂದರೆಯಾದೂ ಪ್ರಕೃತಿ ಪುನಶ್ಛೇತನಗೊಳ್ಳಲು ಇದೊಂದು ಸದಾವಕಾಶವಾಯಿತು.

ಹಸಿರು ನಮ್ಮ ಉಸಿರಾದಾಗ ಮಾತ್ರ ವಿಶ್ವ ಪರಿಸರ ದಿನಾಚರಣೆ ಅರ್ಪೂರ್ಣವಾಗಿರುತ್ತದೆ.ಈ ದಿಸೆಯಲ್ಲಿ ನಾವೆಲ್ಲಾ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಭಾಷಣ ಮಾಡಿದ‌ ಸಿಎಂ,ಸಮಸ್ತ ಜನತೆಗೆ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.“ಜೀವ ವೈವಿಧ್ಯ”ಈ ವರ್ಷದ ಘೋಷವಾಕ್ಯವಾ ಗಿರುವುದು ಅತ್ಯಂತ ಔಚಿತ್ಯಪೂರ್ಣ.

ಜೀವ ವೈವಿಧ್ಯತೆ ಇದ್ದರಷ್ಟೆ ಪ್ರಕೃತಿಯ ಸಮತೋಲನ ಸಾಧ್ಯ. ಪ್ರಾಣಿ, ಪಕ್ಷಿಗಳು,ಗಿಡಮರಗಳು ,ಸಸ್ಯ ಸಂಪತ್ತು, ಪರ್ವತಗಳು, ಜಲಚರಗಳೆಲ್ಲವೂ ನಮ್ಮ ಬದುಕಿನ ಭಾಗಗಳೇ.ಗಾಳಿ, ನೀರು, ಭೂಮಿ,ಆಕಾಶ, ಸ್ವಚ್ಛವಾಗಿದ್ದರೆ ಮಾತ್ರ ನಮ್ಮ ಜೀವನ ಆರೋಗ್ಯ ವಾಗಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com