ಎಲ್ಲಾ ಶಾಲೆಗಳಲ್ಲೂ ಡಿಜಿಟಲ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಿಲ್ಲ: ಪಠ್ಯಕ್ರಮ ಇಳಿಸುವಂತೆ ಶೇ.92ರಷ್ಟು ಸರ್ಕಾರಕ್ಕೆ ಮುಖ್ಯೋಪಾಧ್ಯಾಯರಿಂದ ಮನವಿ

ಮಹಾಮಾರಿ ಕೊರೋನಾ ವೈರಸ್ ದೇಶದ ಆರ್ಥಿಕತೆ ಮೇಲಷ್ಟೇ ಅಲ್ಲದೆ, ಶಿಕ್ಷಣ ವಲಯದ ಮೇಲೂ ಗಂಭೀರ ಪರಿಣಾಮ ಬೀರತೊಡಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಹೇಗೆ ನಿಭಾಯಿಸುವುದು ಎಂಬುದು ಶಿಕ್ಷಣ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ದೇಶದ ಆರ್ಥಿಕತೆ ಮೇಲಷ್ಟೇ ಅಲ್ಲದೆ, ಶಿಕ್ಷಣ ವಲಯದ ಮೇಲೂ ಗಂಭೀರ ಪರಿಣಾಮ ಬೀರತೊಡಗಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಹೇಗೆ ನಿಭಾಯಿಸುವುದು ಎಂಬುದು ಶಿಕ್ಷಣ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಈಗಾಗಲೇ ಕಳೆದ ಸಾಲಿನ ಎಸ್ಎಸ್ಎಲ್'ಸಿ ಪರೀಕ್ಷೆಯ ಇನ್ನೂ ಬಾಕಿಯಿದೆ. ಈ ನಡುವೆ ಶೈಕ್ಷಣಿಕ ವರ್ಷದ ಚಟುವಟಿಕೆ ಆರಂಭವಾಗುವ ಕಾಲ ಕೂಡ ಬಂದಿದೆ. ಪ್ರಾಥಮಿಕ ಶಾಲೆಗಳ ತರಗತಿ, ಪಾಠ ಬೋಧನೆಯನ್ನು ಅಷ್ಟಾಗಿ ಗಣನೆಗೆ ತೆಗೆದುಕೊಳ್ಳದಿದ್ದರು, ಪ್ರೌಢ ಶಾಲೆಗಳ ತರಗತಿಗಳು ಪ್ರಮುಖವಾಗಿ ಅದರಲ್ಲೂ ಪ್ರಸಕ್ತ ಸಾಲಿನ ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಕಲಿಕೆ, ಪಠ್ಯಕ್ರಮ ಪೂರ್ಣಗೊಳಿಸುವ ಕ್ರಮ ಹೇಗೆ ಎಂಬುದರ ಬಗ್ಗೆಯೇ ಗಂಭೀರ ಚಿಂತನೆಗಳುನಡೆದಿದೆ. 

ಈ ನಡುವೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಸ್ಯೆ ಕುರಿತಂತೆ ಡ್ರೀಮ್ ಎ ಡ್ರೀಮ್ ಎಂಬ ಎನ್'ಜಿಒ ಸಂಸ್ಥೆಯೊಂದು ಸಮೀಕ್ಷೆಯೊಂದನ್ನು ನಡೆಸಿದ್ದು, ಸಮೀಕ್ಷೆಯಲ್ಲಿ ಶೇ.95ರಷ್ಟು ಶಿಕ್ಷಕರು ಪರೀಕ್ಷೆಗಳನ್ನು ಮುಂದೂಡುವಂತೆ ಹಾಗೂ ಪಠ್ಯಕ್ರಮವನ್ನು ಇಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿರುವುದು ತಿಳಿದುಬಂದಿದೆ. 

ಕೊರೋನಾ ಲಾಕ್'ಡೌನ್ ನಿಂದಾಗಿ ಶಾಲೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಬಾಕಿರುವ ಪಠ್ಯಕ್ರಮಗಳನ್ನು ಪೂರ್ಣಗೊಳಿಸದ ಶಾಲೆಗಳು, ವಿದ್ಯಾರ್ಥಿಗಳ ಪರೀಕ್ಷೆ ಕುರಿತು ಆಂತಕಕ್ಕೊಳಗಾಗಿದೆ. 

ಡ್ರೀಮ್ ಎ ಡ್ರೀಮ್ ಎಂಬ ಸಂಸ್ಥೆಯು ರಾಜ್ಯದ 28 ಜಿಲ್ಲೆಗಳಲ್ಲಿರುವ ಒಟ್ಟು 853 ಶಿಕ್ಷಣ ಸಂಸ್ಥೆಗಳನ್ನು ತನ್ನ ಸಮೀಕ್ಷೆಯಲ್ಲಿ ಬಳಸಿಕೊಂಡಿದ್ದು, ಕೊರೋನಾ ವೈರಸ್ ತನ್ನ ಶಿಕ್ಷಣ ವ್ಯವಸ್ಥೆ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದರ ಕುರಿತು ಪರಿಶೀಲನೆ ನಡೆಸಿದೆ.

ಸಮೀಕ್ಷೆಯಲ್ಲಿ ಲಾಕ್ಡೌನ್ ಬಳಿಕ ಶಾಲೆಗಳು ಕಳೆದ 6 ದಿನಗಳಿಂದ ಸಂಪೂರ್ಣವಾಗಿ ಬಂದ್ ಆಗಿದ್ದು, ಇದರಿಂದಾಗಿ ಶಾಲೆಗಳ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಲಾಕ್ಡೌನ್ ಪೂರ್ಣಗೊಂಡ ಬಳಿಕ ಶಾಲೆಗಳಿಗೆ ಸರ್ಕಾರದ ಸಹಾಯದ ಅಗತ್ಯವಿದೆ. ಬಹಳಷ್ಟು ಶಾಲೆಗಳಿಗೆ ಆನ್'ಲೈನ್ ಬೋಧನೆ ಕುರಿತು ಅನುಭವಗಳಿಲ್ಲ. ಆನ್'ಲೈನ್ ಶಿಕ್ಷಣ ಬಂದಿದ್ದೇ ಆದರೆ, ಮುಂದೇನು ಮಾಡಬೇಕೆಂಬುದೇ ಬಹುತೇಕ ಶಾಲೆಗಳಿಗೆ ತಿಳಿದಿಲ್ಲ. ಹೀಗಾಗಿ ಸೇ.92ರಷ್ಟು ಶಾಲೆಗಳ ಮುಖ್ಯ ಶಿಕ್ಷಕರು, ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪಠ್ಯಕ್ರಮವನ್ನೇ ಕಡಿಮೆ ಮಾಡುವಂತೆ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಳ್ಳುತ್ತಿದ್ದಾರೆಂದು ಎನ್‌ಜಿಒದ ಸಂಶೋಧನಾ ನಿರ್ದೇಶಕರಾದ ಶ್ರೀಹರಿ ರವೀಂದ್ರನಾಥ್ ಅವರು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com