ಬೆಂಗಳೂರು: ಲಾಕ್ ಅಪ್ ನಲ್ಲಿದ್ದ ಆರೋಪಿಗೆ ಕೊರೋನಾ, ಜೆಜೆ ನಗರ ಠಾಣೆಗೆ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ಲಾಕ್ ಅಪ್ ನಲ್ಲಿದ್ದ ಆರೋಪಿಗೆ ಕೊವೀಡ್ -19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಗಜೀವನ್ ಭೀಮಾ ನಗರ ಪೊಲೀಸ್ ಠಾಣೆಯನ್ನು ಶನಿವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಮೂಲಕ  ಸ್ವಚ್ಛಗೊಳಿಸಲಾಯಿತು.
ಜೆಜೆ ನಗರ ಪೊಲೀಸ್ ಠಾಣೆ
ಜೆಜೆ ನಗರ ಪೊಲೀಸ್ ಠಾಣೆ

ಬೆಂಗಳೂರು: ಲಾಕ್ ಅಪ್ ನಲ್ಲಿದ್ದ ಆರೋಪಿಗೆ ಕೊವೀಡ್ -19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಗಜೀವನ್ ಭೀಮಾ ನಗರ ಪೊಲೀಸ್ ಠಾಣೆಯನ್ನು ಶನಿವಾರ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಮೂಲಕ  ಸ್ವಚ್ಛಗೊಳಿಸಲಾಯಿತು.

ಮುಂಜಾಗ್ರತಾ ಕ್ರಮಗಳನ್ನು ಸೋಂಕು ನಿವಾರಕವನ್ನು ಬಳಸಿ ಇಡೀ ಕಟ್ಟಡವನ್ನು ಸ್ವಚ್ಛಗೊಳಿಸಲಾಯಿತು. ಇದರಿಂದಾಗಿ ಠಾಣೆಯ ಹೊರಗಿನ ಆವರಣದಲ್ಲಿ ಸಿಬ್ಬಂದಿ ಕೆಲಸ ಮಾಡುವಂತಾಯಿತು. 

ಲೈಂಗಿಕ ಕಿರುಕುಳ ಆರೋಪದಲ್ಲಿ ಲಾಕ್ ಅಪ್ ನಲ್ಲಿ ಇರಿಸಲಾಗಿದ್ದ ವ್ಯಕ್ತಿಗೆ ಸೋಂಕು ತಗುಲಿದ್ದು, ಸಂತ್ರಸ್ತೆ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಠಾಣೆಯ 20 ಅಧಿಕಾರಿಗಳು ಕೂಡಾ ಕ್ವಾರಂಟೈನ್ ನಲ್ಲಿದ್ದಾರೆ  ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಈ ಮಧ್ಯೆ, ಮೆಯೋ ಹಾಲ್ ಮತ್ತು ಇಡೀ ಆವರಣವನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಲಾಗಿದೆ. 10ನೇ ಹೆಚ್ಚುವರಿ ಮುಖ್ಯ ನಗರ ಮ್ಯಾಜಿಸ್ಟ್ರೇಟ್ ಮುಂದೆ ಜೂನ್ 1ರಂದು ಹಾಜರುಪಡಿಸಲಾಗಿದ್ದ ಆರೋಪಿಗೂ ಕೋವಿಡ್-19 ಸೋಂಕು ತಗುಲಿದೆ. 

ದೈಹಿಕ ವಿಚಾರಣೆ ಸೇರಿದಂತೆ ನ್ಯಾಯಾಲಯ ಶುಲ್ಕ, ಪ್ರಕ್ರಿಯೆ ಶುಲ್ಕ ಇತ್ಯಾದಿಗಳನ್ನು ಭೌತಿಕವಾಗಿ ಸಲ್ಲಿಸಲು ಬಾರ್ ಸದಸ್ಯರಿಗೆ ನೀಡಲಾದ ಎಲ್ಲಾ ಅಪಾಯಿಂಟ್ ಮೆಂಟ್  ರದ್ದುಪಡಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಶುಕ್ರವಾರ ನೋಟಿಸ್ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com