ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ರೂ.4,313 ಕೋಟಿ ಜಿಎಸ್'ಟಿ ಪರಿಹಾರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಕಾಯ್ದೆಯನ್ವಯ ಆದಾಯ ನಷ್ಟ ಪರಿಹಾರವಾಗಿಕೇಂದ್ರ ಸರ್ಕಾರವು ರಾಜ್ಯಕ್ಕೆ ಮೂರು ತಿಂಗಳ ಬಾಕಿ ಮೊತ್ತ ರೂ.4,313 ಕೋಟಿ ಅನುದಾನ ಬಿಡುಗಡೆ ಮಾಡಿದೆ. 2019ರ ಡಿಸೆಂಬರ್ ತಿಂಗಳಿನಿಂದ 2020ರ ಫೆಬ್ರವರಿ ತಿಂಗಳವರೆಗಿನ ಆದಾಯ ನಷ್ಟದ ಪರಿಹಾರವನ್ನು ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಕಾಯ್ದೆಯನ್ವಯ ಆದಾಯ ನಷ್ಟ ಪರಿಹಾರವಾಗಿಕೇಂದ್ರ ಸರ್ಕಾರವು ರಾಜ್ಯಕ್ಕೆ ಮೂರು ತಿಂಗಳ ಬಾಕಿ ಮೊತ್ತ ರೂ.4,313 ಕೋಟಿ ಅನುದಾನ ಬಿಡುಗಡೆ ಮಾಡಿದೆ. 2019ರ ಡಿಸೆಂಬರ್ ತಿಂಗಳಿನಿಂದ 2020ರ ಫೆಬ್ರವರಿ ತಿಂಗಳವರೆಗಿನ ಆದಾಯ ನಷ್ಟದ ಪರಿಹಾರವನ್ನು ನೀಡಿದೆ. 

3 ತಿಂಗಳ ಅವಧಿಯಲ್ಲ ರಾಜ್ಯ ಎದುರಿಸಿದ ಆದಾಯ ನಷ್ಟದ ಪರಿಹಾರ ಒದಗಿಸಲಾಗಿದೆಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. 

2017ರ ಜು.1ರಂದು ಜಾರಿಯಾದ ಜಿಎಸ್'ಟಿ ಕಾಯ್ದೆಯಂತೆ 5 ವರ್ಷಗಳ ಕಾಲ ಕೇಂದ್ರವು ರಾಜ್ಯಗಳಿಗೆ ಆದಾಯ ನಷ್ಟದ ಪರಿಹಾರವನ್ನು ನೀಡಲಿದೆ. ಲಾಕ್'ಡೌನ್ ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯಕ್ಕೆ ಇದು ನೆರವಾಗಲಿದೆ. 

ರಾಜ್ಯ ಸರ್ಕಾರಕ್ಕೆ ಬಿಡುಗಡೆಯಾದ ಒಟ್ಟು ಪರಿಹಾರಕ್ಕಿಂತ ಕಡಿಮೆ ಇದ್ದರೆ ನಂತರ ಹಂತದಲ್ಲಿ ರಾಜ್ಯದ ಆದಾಯದ ಕಾರ್ಯಕ್ಷಮತೆಯ ಸುಧಾರಣೆಗೆ ಇದೇ ರೀತಿಯ ವಿಧಾನ ಅನುಸರಿಸಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಗೃಹ ಸಚಿವರೂ ಆಗಿರುವ ಜಿಎಸ್'ಟಿ ಸಮಿತಿ ಸದಸ್ಯ ಬಸವರಾಜ ಬೊಮ್ಮಾಯಿ, ಕಳೆದ ಫೆಬ್ರವರಿವರೆಗಿನ ಮೂರು ತಿಂಗಳ ಅವಧಿಯ ಜಿಎಸ್'ಟಿ ಬಾಕಿ ಬಿಡುಗಡೆಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಮನವಿ ಮಾಡಿದ್ದರು. ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಜಿಎಸ್'ಟಿ ಮೊತ್ತ ರೂ.1800 ಕೋಟಿ ಬರಬೇಕಾಗಿದೆ. ಅದು ಮುಂದಿನ ಜುಲೈ ತಿಂಗಳಿನಲ್ಲಿ ಬರಬಹುದು ಎಂದು ತಿಳಿಸಿದ್ದಾರೆ. 

ಜಿಎಸ್'ಟಿ ಹೊರತಪಡಿಸಿ, 15ನೇ ಹಣಕಾಸು ಆಯೋಗವು ಈ ಹಿಂದೆ ಶಿಫಾರಸು ಮಾಡಿದ್ದ ವಿಶೇಷ ಅನುದಾನದಲ್ಲಿಯೂ ಕೂಡ ರೂ.5,495 ಕೋಟಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಿದ್ದು, ರಾಜ್ಯಸರ್ಕಾರ ಹಣ ಬಿಡುಗಡೆ ನಿರೀಕ್ಷೆಯಲ್ಲಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರ ಹಣಕಾಸು ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com