ಕೋಲಾರ: ತಪ್ಪಿಸಿಕೊಂಡ ಕೊರೋನಾ ರೋಗಿ ಹಿಡಿಯಲು 10 ಮಂದಿ ಪೊಲೀಸರ ತಂಡ ರಚನೆ

ಚಿಕಿತ್ಸೆ ಪಡೆಯದೇ ತಪ್ಪಿಸಿಕೊಂಡಿರುವ ಕೊರೋನಾ ರೋಗಿಯನ್ನು ಹಿಡಿಯಲು  ಕೋಲಾರ ಮತ್ತು ಕೆಜಿಎಫ್  ಎಸ್ ಪಿ ಕಾರ್ತಿಕ್ ರೆಡ್ಡಿ ನಿರ್ದೇಶನದಂತೆ 10 ಮಂದಿ ಪೊಲೀಸರ ತಂಡ ರಚನೆ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಚಿಕಿತ್ಸೆ ಪಡೆಯದೇ ತಪ್ಪಿಸಿಕೊಂಡಿರುವ ಕೊರೋನಾ ರೋಗಿಯನ್ನು ಹಿಡಿಯಲು  ಕೋಲಾರ ಮತ್ತು ಕೆಜಿಎಫ್  ಎಸ್ ಪಿ ಕಾರ್ತಿಕ್ ರೆಡ್ಡಿ ನಿರ್ದೇಶನದಂತೆ 10 ಮಂದಿ ಪೊಲೀಸರ ತಂಡ ರಚನೆ ಮಾಡಲಾಗಿದೆ.

ಇದರ ಸೋಂಕಿತ ವ್ಯಕ್ತಿ ರೋಗ ಹರಡದಂತೆ ತಡೆಯಲು ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪೊಲೀಸರಿಗೂ ವಿಷಯ ಮುಟ್ಟಿಸಲಾಗಿದೆ, ಮಂಡ್ಯ ಮೂಲದ ವ್ಯಕ್ತಿ ಕೋಲಾರದ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ, ಹೋಟೆಲ್ ಸಿಬ್ಬಂದಿಗೆ ಕೊರೋನಾ ಪರೀಕ್ಷೆ ಮಾಡಲಾಗಿತ್ತು. ಆತನ ಗಂಟಲು ದ್ರವ ಪರೀಕ್ಷೆ ಮಾಡಲಾದಾಗ ಆತನಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಜೂನ್ 3 ರಂದು ಬಂಗಾರಪೇಟೆಯ ಹೋಟೆಲ್ ನಲ್ಲಿ ಆತನ ವಿಳಾಸ ಮತ್ತು ಫೋನ್ ನಂಬರ್ ಸಂಗ್ರಹಿಸಲಾಗಿತ್ತು.

ಆದರೆ ಆತ ಆಸ್ಪತ್ರೆಗೆ ಹೋಗಲಿಲ್ಲ, ಆರೋಗ್ಯಾಧಿಕಾರಿಗಳು ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಸತತ ಕರೆ ಮಾಡಿದಾಲೂ ಆಥನ ಫೋನ್ ಸ್ವಿಚ್ಛ್ ಆಫ್ ಇದ್ದ ಕಾರಣ ಅವರು ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

ಕೊರೋನಾ ಸೋಂಕಿತ ರೋಗಿ ಪತ್ತೆ ಹಚ್ಚಲು ಕೋಲಾರ ಜಿಲ್ಲಾಧಿಕಾರಿ ಸತ್ಯಾಭಾಮಾ ಎಸ್ ಪಿ ಕಾರ್ತಿಕ್ ಮತ್ತು ಸುಜೇತಾ ಸಲ್ಮಾನ್ ಸಭೆ ನಡೆಸಿ, ಆತನ ಸಹೋದರಿಯಿಂದ ಫೋಟೋ ಸಂಗ್ರಹಿಸಿ ಆತನನ್ನು ಹಿಡಿಯಲು ತಂಡ ರಚಿಸಿದ್ದಾರೆ

ಕೋಲಾರ ಗಡಿ ಜಿಲ್ಲೆಯಾಗಿರುವುದರಿಂದ  ತಮಿಳುನಾಡು ಮತ್ತು ಆಂಧ್ರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಎರಡು ರಾಜ್ಯಗಳ ಪೊಲೀಸರು ಸಹ ರೋಗಿ ಪತ್ತೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೆವಿ ಶರತ್ ಚಂದ್ರ ತಿಳಿಸಿದ್ದಾರೆ.

ಒಂದು ವೇಳೆ ಆತ ಪತ್ತೆಯಾದರೇ ಆತ ಎಲ್ಲೆಲ್ಲಿ ಸಂಚರಿಸಿದ್ದ ಎಂಬುದನ್ನು ಪತ್ತೆ ಹಚ್ಚುವುದೇ  ದೊಡ್ಡ ಸವಾಲಾಗಿದೆ. ಆತ ಎಲ್ಲೆಲ್ಲಿ ಪ್ರಯಾಣಿಸಿದ್ದ ಯಾರನ್ನು ಸಂಪರ್ಕಿಸಿದ್ದ ಅವರನ್ನೆಲ್ಲಾ ಕ್ವಾರಂಟೈನ್ ಗೆ ಒಳಪಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ನಾಪತ್ತೆಯಾಗಿರುವ ರೋಗಿ ಜೂನ್ 2 ರಂದು ಬಂಗಾರಪೇಟೆಲ್ಲಿ ಮತ್ತು ಜೂನ್ 3 ರಂದು ಕೋಲಾರದಲ್ಲಿ ಕಾಣಿಸಿಕೊಂಡಿದ್ದ ಅದಾದ ನಂತರ ಆತ ಎಲ್ಲಿಗೆ ಹೋಗಿದ್ದ ಎಂಬುದು ತಿಳಿದಿಲ್ಲ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com