ಗಂಗಾವತಿ: ಐವತ್ತು ಲಕ್ಷ ವೆಚ್ಚವಾದರೂ ಕಾಣದ ಅಭಿವೃದ್ಧಿ: ವಂತಿಗೆ ಸಂಗ್ರಹಿಸಿ ಕೆರೆ ಹೂಳೆತ್ತಲು ರೈತರ ಯತ್ನ!

ಕೆರೆಯ ಅಭಿವೃದ್ಧಿಗೆಂದು ಸರಕಾರ ಐವ್ವತ್ತು ಲಕ್ಷ ರೂಪಾಯಿ ಮಂಜೂರು ಮಾಡಿದರೂ, ಅಭಿವೃದ್ಧಿ ಕಾಣದ ಹಿನ್ನೆಲೆ ಅಸಮಧಾ‌ನಗೊಂಡ ರೈತರು ಇದೀಗ ವಿಭಿನ್ನ ಹಾದಿ ಹಿಡಿದಿದ್ದಾರೆ‌. 
ಕೆರೆ ಹೂಳೆತ್ತಲು ರೈತರ ಯತ್ನ
ಕೆರೆ ಹೂಳೆತ್ತಲು ರೈತರ ಯತ್ನ

ಗಂಗಾವತಿ: ಕೆರೆಯ ಅಭಿವೃದ್ಧಿಗೆಂದು ಸರಕಾರ ಐವ್ವತ್ತು ಲಕ್ಷ ರೂಪಾಯಿ ಮಂಜೂರು ಮಾಡಿದರೂ, ಅಭಿವೃದ್ಧಿ ಕಾಣದ ಹಿನ್ನೆಲೆ ಅಸಮಧಾ‌ನಗೊಂಡ ರೈತರು ಇದೀಗ ವಿಭಿನ್ನ ಹಾದಿ ಹಿಡಿದಿದ್ದಾರೆ‌. 

ಇಲಾಖೆ ಅಧಿಕಾರಿಗಳ ಅಲಕ್ಷ್ಯ ಹಾಗೂ ಚುನಾಯಿತರ ಬೇಜವಬ್ದಾರಿಗೆ ಬೇಸತ್ತ ರೈತರು ಸ್ವಯಂ ಪ್ರೇರಣೆಯಿಂದ ಕೆರೆಯ ಹೂಳು ಎತ್ತಲು ಮುಂದಾದ ಘಟನೆ ತಾಲ್ಲೂಕಿನ ಸಂಗಾಪುರದಲ್ಲಿ ನಡೆದಿದೆ.

ಸಂಗಾಪುರ ಗ್ರಾಮದ ಹೊರ ವಲಯದಲ್ಲಿರುವ ಪುರಾತನ ಕಾಲದ ಲಕ್ಷ್ಮಿನಾರಾಯಣ ಕೆರೆ (ಸಂಗಾಪುರ ಟ್ಯಾಂಕ್) ಯ ಹೂಳು ಎತ್ತಲು ರೈತರು ವಂತಿಗೆ ಸಂಗ್ರಹಿಸಿ ಹಾಗೂ ಶ್ರಮದಾನ ಮಾಡುವ ಮೂಲಕ ಮುಂದಾದರು. ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು ಇನ್ನೂರೈವತ್ತು ಎಕರೆ ಜಮೀನು ನೀರಾವರಿಗೆ ಒಳಪಟ್ಟಿದೆ. ಆದರೆ ಹೂಳು ತುಂಬುತ್ತಿರುವ ಪರಿಣಾಮ ನೀರಿಲ್ಲದೆ ಹೊಲಗದ್ದೆಗಳಿಗೆ ತೊಂದರೆಯಾಗುತ್ತಿರುವುದರಿಂದ ಸ್ವತಃ ರೈತರು ಪ್ರತಿ ಎಕರೆಗೆ ತಲಾ ಮುನ್ನೂರು ರೂಪಾಯಿಯಂತೆ ಹಣ ಸಂಗ್ರಹಿಸಿ ಹೂಳು ಎತ್ತಲು ಮುಂದಾದರು. ಈ ಮೂಲಕ ಕೆರೆಯ ಹೂಳು ಎತ್ತುವಲ್ಲಿ ಅತ್ತ ಅಧಿಕಾರಿಗಳು ಇತ್ತ ಚುನಾಯಿತರು ವಹಿಸುತ್ತಿರುವ ಅಲಕ್ಷ್ಯಕ್ಕೆ ಪಾಠ ಕಲಿಸಲು ರೈತರು ಮುಂದಾಗಿದ್ದಾರೆ.

ವರದಿ: ಶ್ರೀನಿವಾಸ .ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com