ಭೂಮಿಯಲ್ಲಿ ಬೆಳೆಯಿಲ್ಲ, ಕೈಯಲ್ಲಿ ಕಾಸಿಲ್ಲ: ಕೊರೋನಾ ಸಂಕಷ್ಟದ ನಡುವೆ ರಾಜ್ಯದ ರೈತರ ಪಾಡು

ಕೊರೋನಾ ವೈರಸ್ ಬಿಕ್ಕಟ್ಟು ಯಾವ ಕೇತ್ರದ ಮೇಲೆ ಪರಿಣಾಮ ಬೀರುವುದನ್ನೂ ಬಿಟ್ಟಿಲ್ಲ. ರೈತರು ಸಹ ಈ ವರ್ಷ ಸಾಕಷ್ಟು ಕಂಗಾಲಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ಬಿಕ್ಕಟ್ಟು ಯಾವ ಕೇತ್ರದ ಮೇಲೆ ಪರಿಣಾಮ ಬೀರುವುದನ್ನೂ ಬಿಟ್ಟಿಲ್ಲ. ರೈತರು ಸಹ ಈ ವರ್ಷ ಸಾಕಷ್ಟು ಕಂಗಾಲಾಗಿದ್ದಾರೆ.

ರಾಯಚೂರಿನ ರೈತ ನಾಗರಾಜು ತಮ್ಮ ಗದ್ದೆಯಲ್ಲಿ ಭತ್ತ ಬೆಳೆದು ಮುಂದಿನ ಬೆಳೆಗೆ ಬೀಜ ಖರೀದಿಸುವ ಮುನ್ನ ಆರ್ಥಿಕತೆ ಹೆಚ್ಚಾಗಿ ಕೈಗೆ ದುಡ್ಡು ಬರಲು ಕಾಯುತ್ತಿದ್ದಾರೆ.

75 ಕೆಜಿ ತೂಕದ ಅಕ್ಕಿಗೆ 1300 ರೂಪಾಯಿಗಳಿಂದ 1,040 ರೂಪಾಯಿಗೆ ಬೆಲೆ ಕುಸಿದಿದ್ದು ಮಾರಾಟ ಮಾಡಲು ಇನ್ನೂ ಸರಿಯಾಗಿ ಮಾರುಕಟ್ಟೆ ತೆರೆದಿಲ್ಲ, ಕಾಯುತ್ತಿರುವುದಾಗಿ ಹೇಳುತ್ತಿದ್ದಾರೆ. ಯಾವುದೇ ಸರ್ಕಾರದ ಸಹಾಯ ಯೋಜನೆಗಳಿಗೆ ನಾಗರಾಜು ಅರ್ಜಿ ಹಾಕಿಲ್ಲ. ಆದರೆ ಕೈಗೆ ಸರಿಯಾಗಿ ಬೆಳೆದ ಬೆಳೆಗೆ ದುಡ್ಡು ಬರುವವರೆಗೆ ಅಕ್ಕಪಕ್ಕದವರ ಗದ್ದೆಗಳಲ್ಲಿ ಕೂಲಿಗೆ ದುಡಿಯುವ ನಿರ್ಧಾರ ಮಾಡಿದ್ದಾರೆ.

ಮುಂದೆ ಖಾರಿಫ್ ಋತುವಿನ ಸಮಯ. ನಾಗರಾಜುವಿನಂತೆ ಕರ್ನಾಟಕದಲ್ಲಿ ಅನೇಕ ರೈತರು ಕೈಯಲ್ಲಿ ದುಡ್ಡಿಲ್ಲದೆ ಬೆಳೆ ಬೆಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ 12 ರಾಜ್ಯಗಳ ಶೇಕಡಾ 85ರಷ್ಟು ಗ್ರಾಮೀಣ ಭಾಗದ ರೈತರು ಮತ್ತು ಶೇಕಡಾ 95ರಷ್ಟು ನಗರ ಪ್ರದೇಶಗಳ ರೈತರು ತಮ್ಮ ಬೆಳೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಿಲ್ಲ.

ಹಲವು ಯೋಜನೆಗಳು ಕಳಪೆಯಾಗಿರುವುದಲ್ಲದೆ, ಇನ್ನು ಹಲವರಿಗೆ ಉದ್ಯೋಗಗಳೇ ಸಿಗುತ್ತಿಲ್ಲ. ಹಲವು ಕಾರ್ಮಿಕರ ಬಳಿ ಉದ್ಯೋಗ ಕಾರ್ಡುಗಳೇ ಇಲ್ಲ. ಹಲವಾರು ಬ್ಯಾಂಕ್ ಖಾತೆಗಳನ್ನು ಸಹ ಹೊಂದಿಲ್ಲ, ಸರ್ಕಾರದಿಂದ ನೇರ ಲಾಭ ವರ್ಗಾವಣೆಗೆ ಅರ್ಜಿ ಸಲ್ಲಿಸಲಿಲ್ಲ ಎಂದು ಸಹ ತಿಳಿದುಬಂದಿದೆ.

ಹೈದರಾಬಾದ್-ಕರ್ನಾಟಕ ಮತ್ತು ಮುಂಬೈ-ಕರ್ನಾಟಕ ಪ್ರದೇಶಗಳಲ್ಲಿನ ಕೃಷಿಕರು, ರೈತ ಮಹಿಳೆಯರು ಎರಡು ತಿಂಗಳ ಲಾಕ್‌ಡೌನ್‌ನಿಂದಾಗಿ ಈ ವರ್ಷ ಅತ್ಯಂತ ಭೀಕರ ಪರಿಸ್ಥಿತಿಯನ್ನು ಎದುರಿಸಿದ್ದಾರೆ, ಅವರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಗಳಿಗೆ ಪ್ರವೇಶವಿಲ್ಲ ಎಂದು ಜನ ಶಕ್ತಿ ಆಂದೋಲನ ಸಂಸ್ಥೆಯ ಆಡಳಿತಾಧಿಕಾರಿ ಮುತ್ತುರಾಜು ಹೇಳುತ್ತಾರೆ.

ರೈತರು ಹಸಿವಿನಿಂದ ದೂರವಿರಲು ತಮ್ಮ ಸ್ವಂತ ಉತ್ಪನ್ನಗಳ ಹೊರತಾಗಿ ಸರ್ಕಾರದಿಂದ ಪಡಿತರವನ್ನು ಅವಲಂಬಿಸಿದ್ದಾರೆ. ಬೆಲೆ ಕುಸಿತದಿಂದಾಗಿ, ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ತೊಂದರೆಯಾಗಿದೆ. ಇನ್ನು ಶೇಕಡಾ 90 ರಷ್ಟು ರೈತರಿಗೆ ಜನ ಧನ್ ಯೋಜನೆ ಮುಂತಾದ ಇತರ ಯೋಜನೆಗಳ ಬಗ್ಗೆ ಅರಿವಿಲ್ಲ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com