ಬೆಂಗಳೂರು: ಫ್ಯಾನ್ಸಿ ನಂಬರ್ ಆಸೆಗೆ ಬಿದ್ದು  64,000 ರೂ. ಕಳೆದುಕೊಂಡ ಎಂಜಿನಿಯರ್!

ನಿಮಗೆ ಇಷ್ಟವಾಗಿರುವ ಫ್ಯಾನ್ಸಿ ಮೊಬೈಲ್ ಸಂಖ್ಯೆ ಕೊಡಿಸುವುದಾಗಿ  ಸಿವಿಲ್ ಎಂಜಿನಿಯರ್ ಒಬ್ಬನ ಮೊಬೈಲ್ ಗೆ ಸಂದೇಶ ಕಳಿಸಿದ್ದ ಸೈಬರ್ ಕಳ್ಳರು ಆತನಿಂದ ಬರೋಬ್ಬರಿ 64,000 ರು. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಿಮಗೆ ಇಷ್ಟವಾಗಿರುವ ಫ್ಯಾನ್ಸಿ ಮೊಬೈಲ್ ಸಂಖ್ಯೆ ಕೊಡಿಸುವುದಾಗಿ  ಸಿವಿಲ್ ಎಂಜಿನಿಯರ್ ಒಬ್ಬನ ಮೊಬೈಲ್ ಗೆ ಸಂದೇಶ ಕಳಿಸಿದ್ದ ಸೈಬರ್ ಕಳ್ಳರು ಆತನಿಂದ ಬರೋಬ್ಬರಿ 64,000 ರು. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಬೆಂಗಳೂರು  ಚಿನ್ನಸ್ವಾಮಿ ಮೊಡಲಿಯಾರ್ ರಸ್ತೆಯಲ್ಲಿ ವಾಸಿಸುತ್ತಿರುವ 51 ವರ್ಷದ ಎಂಜಿನಿಯರ್, ಮೇ 19 ರಂದು ತನ್ನ ಮೊಬೈಲ್ ನಲ್ಲಿ ಫ್ಯಾಸ್ನಿ ನಂಬರ್ ಕೊಡುವದಾಗಿ ನಂಬುವ ಸಂದೇಶ ಸ್ವೀಕರಿಸಿದ್ದಾರೆ. ಈ ಸಂದೇಶದಲ್ಲಿ ಏರ್‌ಟೆಲ್ ಪ್ಲಾಟಿನಂ ಸಂಖ್ಯೆ 90999 99999 ಮಾರಾಟಕ್ಕಿದೆ ಎಂದು ಹೇಳಲಾಗಿದ್ದು ಈ ಸಂಖ್ಯೆಯನ್ನು ತಮ್ಮದಾಗಿಸಿಕೊಳ್ಳಲು ಎಂಜಿನಿಯರ್ ಸಂದೇಶ ಪಡೆದ ಮೊಬೈಲ್ ಫೋನ್ ಸಂಖ್ಯೆಗೆ ಕರೆ ಮಾಡಿದ್ದಾರೆ.

ಆಗ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ  64,900 ರೂ ಬೇಡಿಕೆ ಇಟ್ಟಿದ್ದಾರೆ. ಇದನ್ನು ನಂಬಿದ ಎಂಜಿನಿಯರ್ ಮೊತ್ತವನ್ನು ಆನ್‌ಲೈನ್‌ನಲ್ಲಿ ಪಾವತಿಸಿದ್ದಾರೆ. ಆದರೆ ಆ ಬಳಿಕ ತಮ್ಮ ಹೊಸ ಸಂಖ್ಯೆಯ ಸಿಮ್ ಕಾರ್ಡಿಗಾಗಿ ಆ ಸಂಖ್ಯೆಗೆ ಕರೆ ಮಾಡಿದಾಗ ಅತ್ತಲಿಂದ ಯಾವ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ, ಅವರು ಏರ್‌ಟೆಲ್ ಸಹಾಯವಾಣಿಯನ್ನು ಸಂಪರ್ಕಿಸಿದಾದ ಕಂಪನಿಯು ಅಂತಹ ಯಾವುದೇ ಸಿಮ್ ಕಾರ್ಡ್ ಮಾರಾಟವನ್ನು ಆಯೋಜಿಸಿಲ್ಲ ಎಂಬ ಉತ್ತರ ಪಡೆದಿದ್ದಾರೆ.

ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಎಂಜಿನಿಯರ್ ಈಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com