ಅಧಿಕಾರಿಗಳಂತೆ ಬಂದು ಶ್ರಮಿಕ ರೈಲಿನಲ್ಲಿ ವಲಸಿಗರಿಂದ ಹಣ ಕಿತ್ತ ದುಷ್ಕರ್ಮಿಗಳು!

ಶ್ರಮಿಕ ರೈಲಿನಲ್ಲಿ ತಮ್ಮ ತಮ್ಮ ತವರಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಬಳಿ ಅಧಿಕಾರಿಗಳಂತೆ ಬಂದಿರುವ ದುಷ್ಕರ್ಮಿಗಳು ಅವರಿಂದ ಹಣ ಕಿತ್ತು ಪರಾರಿಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶ್ರಮಿಕ ರೈಲಿನಲ್ಲಿ ತಮ್ಮ ತಮ್ಮ ತವರಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕರ ಬಳಿ ಅಧಿಕಾರಿಗಳಂತೆ ಬಂದಿರುವ ದುಷ್ಕರ್ಮಿಗಳು ಅವರಿಂದ ಹಣ ಕಿತ್ತು ಪರಾರಿಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. 

ಬಿಹಾರ ಮೂಲಕ ವಲಸೆ ಕಾರ್ಮಿಕರು ಶ್ರಮಿಕ ರೈಲಿನಲ್ಲಿ ಉತ್ತರ ಪ್ರದೇಶದ ಗೋರಾಖ್ಪುರಕ್ಕೆ ತೆರಳಲು ಕಂಠೀರವ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣಕ್ಕೆ ಬಂದಿದ್ದರು. ರೈಲಿನಲ್ಲಿ ಕುಳಿತಿದ್ದ ವಲಸಿಗರ ಬಳಿ ಅಧಿಕಾರಿಗಳಂತೆ ಬಂದ ಕೆಲವರು, ಟಿಕೆಟ್ ಹಣ ನೀಡುವಂತೆ ರೂ.905 ಕೇಳಿದರು. ಈ ವೇಳೆ ಹಲವು ವಲಸಿಗರು ತಮ್ಮ ತಮ್ಮ ಬಳಿಯಿದ್ದ ಹಣವನ್ನು ನೀಡಿದ್ದಾರೆಂದು ತಿಳಿದುಬಂದಿದೆ. 

ಇದೇ ಗುಂಪಿನಲ್ಲಿ ವ್ಯಕ್ತಿಯೊಬ್ಬರು ಎನ್'ಜಿಒ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಎನ್'ಜಿಒ ಸಂಸ್ಥೆಯು ಟ್ವೀಟ್ ಮೂಲಕ ರೈಲ್ವ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. 

ನನ್ನ ಸಂಬಂಧಿಕರಾಗಿರುವ ಸಿಲ್ವ ಶರ್ಮಾ ಎಂಬುವವರು ಎನ್'ಜಿಒ ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೈಲಿನಲ್ಲಿ ಇವರೂ ಕೂಡ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಬಿಳಿ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದ ವ್ಯಕ್ತಿಗಳು ಬಂದು ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೆಲ ವಲಸೆ ಕಾರ್ಮಿಕರು ತಮ್ಮ ತಮ್ಮ ಬಳಿಯಿದ್ದ ಹಣವನ್ನು ಸೇರಿಸಿ ಟಿಕೆಟ್ ಗೆ ಹಣ ನೀಡಿದ್ದಾರೆಂದು ತಿಳಿದುಬಂದಿದೆ. ಹಣ ನೀಡದಿದ್ದರೆ, ರೈಲಿನಿಂದ ಇಳಿಸುವುದಾಗಿ ದುಷ್ಕರ್ಮಗಿಳು ಬೆದರಿಸಿದ್ದರು ಎಂದೂ ತಿಳಿಸಿದ್ದಾರೆಂದು ಸಿಐಎ (ಕಂಪ್ಯಾಷನ್ ಇನ್ ಆ್ಯಕ್ಷನ್) ಎಂಬ ಎನ್'ಜಿಒ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಮ್ಯಾನ್ಯುಯಲ್ ಪ್ರಿನ್ಸ್ ಅವರು ಹೇಳಿಕೊಂಡಿದ್ದಾರೆ. 

ಈ ಬಗ್ಗೆ ರೈಲ್ವೇ ರಕ್ಷಣಾ ಪಡೆಯು ತನಿಘೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ತಿಳಿದುಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com