ಬೆಂಗಳೂರು: ಚಿನ್ನಾಭರಣ ಮಳಿಗೆ ಶಟರ್ ಮುರಿದು 35 ಲಕ್ಷ ರು. ಮೌಲ್ಯದ ಆಭರಣ ಕಳ್ಳತನ

ಚಿನ್ನಾಭರಣ ಮಳಿಗೆಯ ರೋಲಿಂಗ್‌ ಶೆಟರ್‌ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೈಗ್ರೌಂಡ್ಸ್‌ ಠಾಣಾ ವ್ಯಾಪ್ತಿಯ ಶಿವಾನಂದ ವೃತ್ತದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. 
ಕಳ್ಳತನವಾದ ಚಿರಾಗ್ ಮಳಿಗೆ
ಕಳ್ಳತನವಾದ ಚಿರಾಗ್ ಮಳಿಗೆ

ಬೆಂಗಳೂರು: ಚಿನ್ನಾಭರಣ ಮಳಿಗೆಯ ರೋಲಿಂಗ್‌ ಶೆಟರ್‌ ಮುರಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಹೈಗ್ರೌಂಡ್ಸ್‌ ಠಾಣಾ ವ್ಯಾಪ್ತಿಯ ಶಿವಾನಂದ ವೃತ್ತದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. 

ಕುಮಾರ ಪಾರ್ಕ್ ನಲ್ಲಿರುವ ಚಿರಾಗ್‌ ಆಭರಣ ಮಳಿಗೆಯಲ್ಲಿ ಘಟನೆ ನಡೆದಿದ್ದು, ಒಂದು ಕೆ.ಜಿ. ಚಿನ್ನ, 3 ಕೆ.ಜಿ. ಬೆಳ್ಳಿ, ವಜ್ರ ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವಾಗಿದೆ ಎಂದು ಪೊಲೀಸರು ಹೇಳಿದರು.

ಭಾನುವಾರ  ತಡರಾತ್ರಿ ಎರಡು ಗಂಟೆ ಸುಮಾರಿಗೆ ಚಿನ್ನಾಭರಣ ಮಳಿಗೆಯ ರೋಲಿಂಗ್‌ ಶೆಟರ್‌ ಅನ್ನು ಗ್ಯಾಸ್‌ ಕಟರ್‌ ನಿಂದ ಕತ್ತರಿಸಿ, ಒಳ ನುಗ್ಗಿರುವ ಕಳ್ಳರು, ಅಂಗಡಿಯಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಿಸಿ ಕ್ಯಾಮೆರಾ ಒಡೆದು  ಹಾಕಿದ್ದು, ವೈರ್‌ ಕತ್ತರಿಸಿ, ಹಾರ್ಡ್‌ ಡಿಸ್ಕ್ ಧ್ವಂಸ ಮಾಡಿದ್ದಾರೆ. ಮುಖ್ಯ ಲಾಕರ್‌ ಒಡೆಯಲು ಸಾಧ್ಯವಾಗಿಲ್ಲ. ಕೊನೆಗೆ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

ಮಳಿಗೆಯ ಸಿಸಿಕ್ಯಾಮೆರಾದಲ್ಲಿ ಇಬ್ಬರು  ಆರೋಪಿಗಳು  ಹೊರಗೆ ಭದ್ರತೆಯಲ್ಲಿದ್ದು, ಇತರರು ಒಳಗೆ ನುಗ್ಗಿದ್ದಾರೆ.ಇದರಲ್ಲಿ ಅಂಗಡಿ ಸಿಬ್ಬಂದಿ ಕೈವಾಡವನ್ನು ತಳ್ಳಿ ಹಾಕುವಂತಿಲ್ಲ, ಸ್ಥಳಕ್ಕೆ ಧಾವಿಸಿದ ಹೈಗ್ರೌಂಡ್ಸ್‌ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚುಗಾರರ ತಂಡದ ಜತೆ ಪರಿಶೀಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com