ತೆರೆದ ಹಂಪಿ ವಿರೂಪಾಕ್ಷ ದೇವಾಲಯ: ಸ್ಮಾರಕ ವೀಕ್ಷಣೆಗೆ ಇಲ್ಲ ಅವಕಾಶ

ಹಂಪಿಯ ವಿರೂಪಾಕ್ಷ ದೇವಾಲಯ ತೆರೆದಿದ್ದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ, ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕ ವೀಕ್ಷಣೆಗೆ ಪ್ರವಾಸಿಗರು ಇನ್ನೂ  ಕಾಯಬೇಕಾಗಿದೆ.
ಹಂಪಿ  ಸ್ಮಾರಕ
ಹಂಪಿ ಸ್ಮಾರಕ

ಹುಬ್ಬಳ್ಳಿ: ಹಂಪಿಯ ವಿರೂಪಾಕ್ಷ ದೇವಾಲಯ ತೆರೆದಿದ್ದು ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡಲಾಗಿದೆ, ಆದರೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಂಪಿ ಸ್ಮಾರಕ ವೀಕ್ಷಣೆಗೆ ಪ್ರವಾಸಿಗರು ಇನ್ನೂ  ಕಾಯಬೇಕಾಗಿದೆ.ಹಂಪಿಯಲ್ಲಿನ ಸ್ಮಾರಕಗಳನ್ನು ಇನ್ನೂ ಮೂರು ತಿಂಗಳ ಕಾಲ ತೆರೆಯದಿರಲು ಪ್ರವಾಸಿಗರು ಹೆಚ್ಚು ಸಮಯ ಕಾಯಬೇಕಾಗುತ್ತದೆ. ಮುಂದಿನ ಮೂರು ತಿಂಗಳವರೆಗೆ ಪ್ರವಾಸಿಗರಿಗೆ ದೇವಾಲಯ ಸಂಕೀರ್ಣವನ್ನು ತೆರೆಯುವ ಸಾಧ್ಯತೆಯಿಲ್ಲ ಎಂದು  ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರದ (ಎಚ್‌ಡಬ್ಲ್ಯುಎಚ್‌ಎಎಂಎ) ಮೂಲಗಳು ತಿಳಿಸಿವೆ. 

ಇನ್ನೂ ಆರು ತಿಂಗಳು ಹಂಪಿ ತೆರೆಯುವ ಉದ್ದೇಶವಿರಲಿಲ್ಲ, ಆದರೆ ಸರ್ಕಾರದ ನಿರ್ಧಾರಕ್ಕೆ ನಾವು ಮನ್ನಣೆ ನೀಡಬೇಕಾಗಿದೆ, ಸರ್ಕಾರ ದೇವಾಲಯ ತೆರೆಯಲು ಅನುಮತಿ ನೀಡಿದೆ ಆದರೆ ಸ್ಮಾರಕ ತೆರೆಯಲು ಯಾವುದೇ ಸೂಚನೆ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಂಪಿಯ ಬಡವಿ ಲಿಂಗ ದೇವಾಲಯವನ್ನು ಲಾಕ್ ಡೌನ್ ಸಮಯದಲ್ಲೂ ತೆರೆದು ದೈನಂದಿನ ಪೂಜಾ ಕಾರ್ಯ ಕೈಗೊಳ್ಳಲಾಗಿತ್ತು. ಕಲ್ಲಿನ ರಥ ಸೇರಿದಂತೆ ಉಳಿದಂತೆ ತುಂಗಭದ್ರ ನದಿ ದಂಡೆ ಮೇಲಿನ ಹಲವು ಸ್ಮಾರಕಗಳ ದರ್ಶನಕ್ಕೆ ಇನ್ನೂ ಕೆಲ ದಿನಗಳ ಕಾಲ ಅವಕಾಶವಿಲ್ಲ ಎಂದು ಹೇಳಿದ್ದಾರೆ,

ಟೇಕ್‌ಅವೇಗಳಿಗೆ ಅನುಮತಿ ನೀಡಿದ್ದರೂ, ಪ್ರವಾಸಿಗರಿಲ್ಲದ ಕಾರಣ ಹಂಪಿಯ ಸುತ್ತಮುತ್ತಲಿನ ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿವೆ. ಮೈಸೂರು ಗೋಕರ್ಣ ಸೇರಿದಂತೆ ಅತಿ ಹೆಚ್ಚಿನ ಪ್ರವಾಸಿಗರನ್ನು ಹಂಪಿ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com