ಕೋಲಾರದಿಂದ ತಪ್ಪಿಸಿಕೊಂಡಿದ್ದ ಕೊರೋನಾ ಸೋಂಕಿತ ಆಂಧ್ರಪ್ರದೇಶದಲ್ಲಿ ಪತ್ತೆ!

ಮಂಡ್ಯ ಮೂಲದ ವ್ಯಕ್ತಿ ಕೋಲಾರದ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ, ಆತನಿಗೆ ಕೊರೋನಾ ಪರೀಕ್ಷೆ ಮಾಡಲಾಗಿ ಆತನಿಗೆ ಕೊರೋನಾ ಪಾಸಿಟಿವ್ ಬಂದಿತ್ತು, ಅದಾದ ನಂತರ ಆತ ಚಿಕಿತ್ಸೆಗೆ ದಾಖಲಾಗದೇ ಜೂನ್ 6ರಂದು ಫೋನ್ ಸ್ವಿಚ್ಚ್ ಆಪ್ ಮಾಡಿ ನಾಪತ್ತೆಯಾಗಿದ್ದ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಜೂನ್ 6 ರಂದು ಕೋಲಾರದಿಂದ ನಾಪತ್ತೆಯಾಗಿದ್ದ ಕೊರೋನಾ ಸೋಂಕಿತ ವ್ಯಕ್ತಿ ಬುಧವಾರ ಆಂಧ್ರಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದಾನೆ.

ಜೂನ್ 3ರಂದು ಕೊರರೋನಾ ಪರೀಕ್ಷೆ ಮಾಡಿಸಿಕೊಂಡಿದ್ದ ವ್ಯಕ್ತಿ ಕೊರೋನಾ ಪೀಡಿತನಾಗಿದ್ದ ಎಂದು ಕೆಜಿಎಫ್ ಎಸ್ ಪಿ ಕಾರ್ತಿಕ್ ರೆಡ್ಡಿ, ಕೋಲಾರ ಎಸ್ ಪಿ ಸುಜೀತಾ ಸಲ್ಮಾನ್ ಹೇಳಿದ್ದಾರೆ.

ಮಂಡ್ಯ ಮೂಲದ ವ್ಯಕ್ತಿ ಕೋಲಾರದ ಹೋಟೆಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ, ಆತನಿಗೆ ಕೊರೋನಾ ಪರೀಕ್ಷೆ ಮಾಡಲಾಗಿ ಆತನಿಗೆ ಕೊರೋನಾ ಪಾಸಿಟಿವ್ ಬಂದಿತ್ತು, ಅದಾದ ನಂತರ ಆತ ಚಿಕಿತ್ಸೆಗೆ ದಾಖಲಾಗದೇ ಜೂನ್ 6ರಂದು ಫೋನ್ ಸ್ವಿಚ್ಚ ಆಪ್ ಮಾಡಿ ನಾಪತ್ತೆಯಾಗಿದ್ದ.

ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ದೂರು ದಾಖಲಿಸಿದ್ದರು. ಪೊಲೀಸರು 10 ಮಂದಿ ಪೊಲೀಸರ ತಂಡ ರಚಿಸಿದ್ದರು, ಈ ತಂಡ ರೋಗಿಯನ್ನು ಆಂಧ್ರ ಪ್ರದೇಶದ ವೆಂಕಟಗಿರಿ ಕೋಟಾ ಬಳಿ ಪತ್ತೆ ಹಚ್ಚಿದೆ. ಆತನನ್ನು ಸ್ಥಳೀಯ ಕೋವಿದ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ ಆತನ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕದ ಬಗ್ಗೆ ವಿವರವಾದ ಮಾಹಿತಿ ಪಡೆದು ಎಲ್ಲರನ್ನು ಕ್ವಾರಂಟೈನ್ ಗೆ ಒಳಪಡಿಸುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com