ಮೈಸೂರು: ಬೀದಿನಾಯಿಗಳಿಗೆ ವಿಷ ಹಾಕಿದ ಕಿಡಿಗೇಡಿಗಳು, 5 ನಾಯಿಗಳ ಸಾವು

ನಗರದಲ್ಲಿ ಕಿಡಿಗೇಡಿಗಳು ಬೀದಿನಾಯಿಗಳಿಗೆ ವಿಷ ಹಾಕಿರುವ ದಾರುಣ ಘಟನೆ ನಡೆದಿದ್ದು. ವಿಷಾಹಾರ ಸೇವಿಸಿದ 13 ನಾಯಿಗಳ ಪೈಕಿ 5 ನಾಯಿಗಳು ಸಾವನ್ನಪ್ಪಿ, 8 ನಾಯಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 
ಅಸ್ವಸ್ಥಗೊಂಡಿರುವ ಬೀದಿ ನಾಯಿ
ಅಸ್ವಸ್ಥಗೊಂಡಿರುವ ಬೀದಿ ನಾಯಿ

ಮೈಸೂರು: ನಗರದಲ್ಲಿ ಕಿಡಿಗೇಡಿಗಳು ಬೀದಿನಾಯಿಗಳಿಗೆ ವಿಷ ಹಾಕಿರುವ ದಾರುಣ ಘಟನೆ ನಡೆದಿದ್ದು. ವಿಷಾಹಾರ ಸೇವಿಸಿದ 13 ನಾಯಿಗಳ ಪೈಕಿ 5 ನಾಯಿಗಳು ಸಾವನ್ನಪ್ಪಿ, 8 ನಾಯಿಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. 

ಮೈಸೂರಿನ ಟಿ ಕೆ. ಲೇಔಟ್ ನಲ್ಲಿ ಘಟನೆ ನಡೆದಿದೆ. ಒಟ್ಟು 13 ನಾಯಿಗಳು ವಿಷಾಹಾರ ಸೇವಿಸಿದ್ದು, ಈಗಾಗಲೇ ಐದು ನಾಯಿಗಳು ಸಾವನ್ನಪ್ಪಿವೆ. 

ಸ್ಥಳೀಯ ಪ್ರಾಣಿದಾಯ ಸಂಘದ ಹೋರಾಟಗಾರರು ಘಟನೆಗೆ ಆಕ್ರೋಷ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಕೇವಲ ಐದು ನಾಯಿಗಳಷ್ಟೇ ಸಿಕ್ಕಿವೆ. ಅವುಗಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ನಾಯಿಗಳು ನಾಪತ್ತೆಯಾಗಿವೆ ಎಂದು ಹೇಳಿದ್ದಾರೆ. 

ವಿಷ ಹಾಕಿದ ಬಳಿಕ ಕಿಡಿಗೇಡಿಗಳು ನಾಯಿಗಳನ್ನು ಹೂತುಹಾಕಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ. 

ಬೀದಿಗಳಿಗೆ ಆಗಾಗ ಚುಚ್ಚುಮದ್ದುಗಳನ್ನು ನೀಡಲಾಗುತ್ತಿತ್ತು. ಎಲ್ಲಾ ನಾಯಿಗಳು ಆರೋಗ್ಯಕರ ಹಾಗೂ ಸ್ನೇಹಯುತವಾಗಿದ್ದವು. ಮಕ್ಕಳನ್ನಾಗಲೀ, ವಾಹನಗಳ ಹಿಂದೆಯಾಗಲೀ ಓಡುತ್ತಿರಲಿಲ್ಲ. 2ನೇ ಅಡ್ಡ ರಸ್ತೆಯಲ್ಲಿ ಎರಡು ನಾಯಿಗಳು ಸತ್ತು ಬಿದ್ದಿದ್ದವು. ಮತ್ತೆರಡು ನಾಯಿಗಳು ಮತ್ತೊಂದು ಬೀದಿಯಲ್ಲಿ ಸತ್ತಿದ್ದವು ಎಂದು ಪ್ರತೀನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ವ್ಯಕ್ತಿಯೊಬ್ಬರು ಹೇಳಿದ್ದಾರೆ. 

ಬುಧವಾರ ಸಂಜೆ 3.50ರ ಸುಮಾರಿಗೆ ಘಟನೆ ನಡೆದಿದೆ ಎಂಬ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಸ್ಥಳಕ್ಕೆ ಪಶುವೈದ್ಯರನ್ನು ರವಾನಿಸಲಾಗಿತ್ತು. ಈ ವೇಳೆ ಎರಡು ನಾಯಿಗಳ ಸ್ಥಿತಿ ಗಂಭೀರವಾಗಿತ್ತು. ಬಳಿಕ ಆಸ್ಪತ್ರೆ ಕರೆತರುವಷ್ಟರಲ್ಲಿ ಅವು ಸಾವನ್ನಪ್ಪಿದ್ದವು. ಈಗಲೂ ಕೆಲ ನಾಯಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಪಿಎಫ್ಎ ಮ್ಯಾನೇಜಿಂಗ್ ಟ್ರಸ್ಟೀ ಸವಿತಾ ನಾಗಭೂಷಣ್ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com