ಅಳಿಸಿ ಹೋಗುತ್ತಿರುವ ಕ್ವಾರಂಟೈನ್ ಸ್ಟ್ಯಾಂಪ್: ಅಧಿಕಾರಿಗಳಿಗೆ ಶುರುವಾಯ್ತು ಹೊಸ ತಲೆನೋವು

ವ್ಯಕ್ತಿಯೊಬ್ಬರು ಹೋಂ ಕ್ವಾರಂಟೈನ್ ನಲ್ಲಿದ್ದಾರೆಂದರೆ ಅವರನ್ನು ಕಂಡು ಹಿಡಿಯಲು ಇರುವ ಏಕೈಕ ಮಾರ್ಗವೆಂದರೆ, ಕೈಗಳ ಮೇಲಿರುವ ಸ್ಟ್ಯಾಂಪ್. ಆದರೆ, ಅಂತಹ ಸ್ಟ್ಯಾಂಪನ್ನೇ ಅಳಿಸುತ್ತಿರುವ ಕೆಲವರು ಸ್ವತಂತ್ರವಾಗಿ ರಸ್ತೆಗಳಲ್ಲಿ ಓಡಾಡಲು ಆರಂಭಿಸುತ್ತಿದ್ದಾರೆ. ಇಂತಹ ಬೆಳವಣಿಗೆ ಇದೀಗ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವ್ಯಕ್ತಿಯೊಬ್ಬರು ಹೋಂ ಕ್ವಾರಂಟೈನ್ ನಲ್ಲಿದ್ದಾರೆಂದರೆ ಅವರನ್ನು ಕಂಡು ಹಿಡಿಯಲು ಇರುವ ಏಕೈಕ ಮಾರ್ಗವೆಂದರೆ, ಕೈಗಳ ಮೇಲಿರುವ ಸ್ಟ್ಯಾಂಪ್. ಆದರೆ, ಅಂತಹ ಸ್ಟ್ಯಾಂಪನ್ನೇ ಅಳಿಸುತ್ತಿರುವ ಕೆಲವರು ಸ್ವತಂತ್ರವಾಗಿ ರಸ್ತೆಗಳಲ್ಲಿ ಓಡಾಡಲು ಆರಂಭಿಸುತ್ತಿದ್ದಾರೆ. ಇಂತಹ ಬೆಳವಣಿಗೆ ಇದೀಗ ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 

ಹೋಮ್ ಕ್ವಾರಂಟೈನ್ ನಲ್ಲಿರುವ ಜನರ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಹಾಗೂ ಅವರ ಕೈಗಳ ಮೇಲಿನ ಮುದ್ರೆಯ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಲ ಪ್ರಕಱಣಗಳಲ್ಲಿ ಜನರು ಕೈಗಳ ಮೇಲಿರುವ ಸ್ಟ್ಯಾಂಪ್ ಗಳನ್ನು ಅಳಿಸಿ ರಸ್ತೆಗಳಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಇಂತಹ ಪ್ರಕರಣಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಇದೊಂದು ಅತ್ಯಂತ ಗಭೀರ ವಿಚಾರವಾಗಿದ್ದು, ಈಗಾಗಲೇ ಮುದ್ರೆ ಹಾಕರು ಶಾಹಿ ಪೂರೈಸುತ್ತಿರುವ ಮೈಸೂರು ಪೈಂಟ್ಸ್ ಮತ್ತು ವಾರ್ನಿಶ್ ಆ್ಯಂಡ್ ಕೊರೆಸ್ ಕಂಪನಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕಂಪನಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಗುಣಮಟ್ಟದ ಶಾಹಿ ಪೂರೈಸುತ್ತಿರುವುದಾಗಿ ತಿಳಿಸಿದೆ. ಚುನಾವಣೆ ಸಂದರ್ಭದಲ್ಲಿ ಪೂರೈಕೆ ಮಾಡಲಾಗುತ್ತಿರುವ ಶಾಹಿಯನ್ನೇ ಈಗಲೂ ಪೂರೈಸುತ್ತಿದ್ದು, ಶಾಹಿ ಗುಣಮಟ್ಟದ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. 

ಕರ್ನಾಟಕ ಸರ್ಕಾರಕ್ಕೆ ಮೈಸೂರು ಪೈಂಟ್ಸ್ 10,000 ಶಾಹಿ ಬಾಟಲಿಗಳನ್ನು ಪೂರೈಕೆ ಮಾಡಿದೆ. “ ಶಾಹಿಯ ಗುಣಮಟ್ಟದ ತಪಾಸಣೆಗೆ ಇದೀಗ ಸಮಯವಿಲ್ಲ. ಕೈಯಲ್ಲಿ ಶಾಯಿ ಎಷ್ಟು ದಿನ ಉಳಿಯುತ್ತದೆ ಎಂಬುದು ವ್ಯಕ್ತಿಯ ಚರ್ಮದ ಪ್ರಕಾರವನ್ನು ಆಧರಿಸಿರುತ್ತದೆ ಕಂಪನಿ ಹೇಳಿದೆ. 

ಕ್ವಾರಂಟೈನ್ ನಲ್ಲಿರುವವರನ್ನು ತಪಾಸಣೆ ಮಾಡಲು ಆರೋಗ್ಯಾಧಿಕಾರಿಗಳು ತೆರಳಿದಾಗಲೆಲ್ಲಾ ಆಗಾಗ ಮರು ಸ್ಟ್ಯಾಂಪ್ ಹಾಕುತ್ತಲೇ ಇರುತ್ತಾರೆ. ಕೆಲ ಸಂದರ್ಭದಲ್ಲಿ ಮನೆಕೆಲಸ ಹೆಚ್ಚಾಗಿ ಮಾಡುವವರಿಗೆ ಸ್ಟ್ಯಾಂಪ್ ಅಳಿಸಿಹೋಗುವ ಸಂದರ್ಭವಿರುತ್ತದೆ. ಕೆಲವರಿಗೆ ಕ್ವಾರಂಟೈನ್ ಅವಧಿ ಪೂರ್ಣಗೊಂಡರೂ ಮುದ್ರೆ ಹೋಗುವುದಿಲ್ಲ.  ಕೆಲವರು ಎನಾಮೆಲ್ ರಿಮೂವರ್ ಬಳಕೆ ಮಾಡಿ ಸ್ಟ್ಯಾಂಪ್ ಅಳಿಸುವ ಕೆಲಸ ಮಾಡುತ್ತಿದ್ದಾರೆ. ಇದೇ ರೀತಿಯ ತಂತ್ರಗಳನ್ನೇ ಚುನಾವಣೆ ಸಂದರ್ಭದಲ್ಲಿಯೂ ಮಾಡುತ್ತಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾರ್ಯಗಳು ನಡೆಯುತ್ತಿದೆ. ಜನರೇ ಸರ್ಕಾರದ ಕಣ್ಣುಗಳಾಗಬೇಕು. ಇಂತಹ ಕಾರ್ಯಗಳಿಗೆ ಜನರೇ ಆಸ್ಪದ ನೀಡಬಾರದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com