ರಾಜ್ಯ ಸರ್ಕಾರ ಆದೇಶ ನೀಡದಿದ್ದರೂ, ಆನ್'ಲೈನ್ ತರಗತಿ ಆರಂಭಿಸಿರುವ ಹಲವು ಖಾಸಗಿ ಶಾಲೆಗಳು

5ನೇ ತರಗತಿಯವರೆಗೂ ಆನ್'ಲೈನ್ ತರಗತಿ ನಡೆಸಬಾರದು ಎಂದು ಸರ್ಕಾರವೇ ಆದೇಶ ನೀಡಿದ್ದರೂ, ನಗರದಲ್ಲಿರುವ ಹಲವು ಖಾಸಗಿ ಶಾಲೆಗಳು ಆನ್'ಲೈನ್ ನಲ್ಲಿ ತರಗತಿಗಳು ಆರಂಭಿಸಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 5ನೇ ತರಗತಿಯವರೆಗೂ ಆನ್'ಲೈನ್ ತರಗತಿ ನಡೆಸಬಾರದು ಎಂದು ಸರ್ಕಾರವೇ ಆದೇಶ ನೀಡಿದ್ದರೂ, ನಗರದಲ್ಲಿರುವ ಹಲವು ಖಾಸಗಿ ಶಾಲೆಗಳು ಆನ್'ಲೈನ್ ನಲ್ಲಿ ತರಗತಿಗಳು ಆರಂಭಿಸಿರುವ ಬೆಳವಣಿಗೆಗಳು ಕಂಡು ಬರುತ್ತಿವೆ. 

ಆನ್'ಲೈನ್ ತರಗತಿ ನಡೆಸದಿರುವಂತೆ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಇದನ್ನು ತಮ್ಮ ಲಾಭವಾಗಿ ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ಶಾಲೆಗಳು, ಸರ್ಕಾರದ ಆದೇಶ ತಮಗೆ ತಲುಪಿಲ್ಲ ಎಂಬ ಕಾರಣ ನೀಡಿ, ಆನ್'ಲೈನ್ ನಲ್ಲಿ ತರಗತಿಗಳನ್ನು ಮುಂದುವರೆಸುತ್ತಿವೆ. 

ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆದೇಶ ಅಧಿಕೃತವಾಗಿ ತ್ವರಿತಗತಿಯಲ್ಲಿ ಹೊರಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಆನ್'ಲೈನ್ ತರಗತಿ ನಿರ್ಧಾರ ಕೈಗೊಂಡ ದಿನವೇ ಇಲಾಖೆಯು ಆದೇಶ ಬಿಡುಗಡೆ ಮಾಡುವಂತೆ ಹಾಗೂ ಮುಂದಿನ ಹಂತಗಳಲ್ಲಿ ಆನ್'ಲೈನ್ ತರಗತಿ ಕುರಿತಂತೆ ಸಮಿತಿ ರಚಿಸಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಆದರೆ, ಆದೇಶ ಹೊರಡಿಸುವಲ್ಲಿ ಅಧಿಕಾರಿಗಳು ತಡ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ. 

ಆದೇಶ ಬಿಡುಗಡೆಗೆ ತಡ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಹಲವು ಅಧಿಕಾರಿಗಳು ಎರಡನೇ ಶನಿವಾರ, ಭಾನುವಾರ, ರಜಾ ದಿನ ಎಂಬ ಕಾರಣಗಳನ್ನು ನೀಡುತ್ತಿದ್ದಾರೆ. 

ಇನ್ನು ಖಾಸಗಿ ಶಾಲೆಗಳು ಸರ್ಕಾರ ಆದೇಶ ಕೈತಲುಪಿಲ್ಲದ ಕಾರಣ, ಆನ್'ಲೈನ್ ತರಗತಿಗಳನ್ನು ಮುಂದುವರೆಸುತ್ತಿರುವುದಾಗಿ ತಿಳಿಸುತ್ತವೆ. ಖಾಸಗಿ ಶಾಲೆ ಹಾಗೂ ಸರ್ಕಾರದ ಆದೇಶಗಳ ಮಧ್ಯೆ ಪೋಷಕರು ಸಂಕಷ್ಟ ಅನುಭವಿಸುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com