ಕೊರೋನಾ ಎಫೆಕ್ಟ್: ಫೇಸ್ ಬುಕ್ ಲೈವ್ ನಲ್ಲಿ ವಧುವರರ ವಿವಾಹ, ವೈರಸ್ ತಡೆಗೆ ಸಾಮಾಜಿಕ ಬದ್ಧತೆ ಮೆರೆದ ಜೋಡಿಗಳು!

ಕೊರೋನಾ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವ ಆಹ್ವಾನಿತರ ಸಂಖ್ಯೆಯ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ನಡೆಯಲವಿರುವ ವಿವಾಹವೊಂದು ಫೇಸ್'ಬುಕ್ ನಲ್ಲಿ ನೇರ ಪ್ರಸಾರವಾಗಲಿದೆ.
ಮದುವೆ ಆಮಂತ್ರ ಪತ್ರಿಕೆ
ಮದುವೆ ಆಮಂತ್ರ ಪತ್ರಿಕೆ

ದಾವಣಗೆರೆ: ಕೊರೋನಾ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವ ಆಹ್ವಾನಿತರ ಸಂಖ್ಯೆಯ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ನಡೆಯಲವಿರುವ ವಿವಾಹವೊಂದು ಫೇಸ್'ಬುಕ್ ನಲ್ಲಿ ನೇರ ಪ್ರಸಾರವಾಗಲಿದೆ. 

ಈ ಮೂಲಕ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು ತಾವು ಇದ್ದಲ್ಲಿಂದಲೇ ಫೇಸ್'ಬುಕ್ ನಲ್ಲಿ ವೀಕ್ಷಿಸಿ ನಮ್ಮನ್ನು ಹರಿಸಿ, ಆಶೀರ್ವದಿಸಿ ಎಂದು ನವಜೋಡಿಯೊಂದು ಮನವಿ ಮುಖೇನ ಸಾಮಾಜಿಕ ಬದ್ಧತೆ ಮೆರೆದಿದೆ. 

ನಗರದ ಎನ್.ರಂಜಿತಾ ಮತ್ತು ಸಿ.ಎನ್.ನವೀನ್ ಶ್ರೀ ಕನ್ಯಾಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆರ್ಯ ವೈಶ್ಯ ಸಮಾಜದ ಸಂಪ್ರದಾಯದಂತೆ ವಿವಾಹವಾಗಲಿದ್ದಾರೆ. ಈ ಹಿಂದೆ ಿದ್ದ 2 ದಿನಗಳ ಕಾಲ ಮದುವೆ ಶಾಸ್ತ್ರಗಳು ಇರದೇ, ಒಂದೇ ದಿನ ಎಲ್ಲಾ ಸಂಪ್ರದಾಯಗಳನ್ನು ಆಚರಿಸಲು ಉಭಯ ಕುಟುಂಬಗಳು ನಿರ್ಧರಿಸಿವೆ. 

ಹೀಗಾಗಿ 50 ಜನರಿಗಿಂತ ಹೆಚ್ಚು ಜನ ಸೇರುತ್ತಿಲ್ಲ. ಬಂದ ಪ್ರತೀಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಜರ್ ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಮದುವೆ ಸಭಾಂಗಣ, ಊಟದ ಹಾಲ್ ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒತ್ತು ನೀಡಲಾಗುತ್ತಿದೆ, ಮಕ್ಕಳು, ವಯಸ್ಸಾದವರು ಮದುವೆಗೆ ಬರುತ್ತಿಲ್ಲ. ಅನ್ಯ ಊರಿನಿಂದಲೂ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು ಬರುತ್ತಿಲ್ಲ. ವೈರಸ್ ತಡೆಗಟ್ಟುವ ಸಲುವಾಗಿ ನವೀನ್-ರಂಜಿತಾ ಮದುವೆ ಸಮಾರಂಭವನ್ನು ಫೇಸ್'ಬುಕ್ ಲೈವ್ ಮಾಡಲಾಗುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com