ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆ ರಕ್ತದ ಕೊರತೆ: ರಕ್ತದಾನದ ಮೂಲಕ ಸಮಸ್ಯೆ ನಿವಾರಣೆಗೆ ಮುಂದಾದ ವೈದ್ಯರು!

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಮತ್ತೊಂದು ದಿಕ್ಕಿನಲ್ಲಿಯೂ ತಮ್ಮ ನಿರಂತರ ಹೋರಾಟ ನಡೆಸಿದ್ದಾರೆ. ವಿವಿಧ ರೋಗಿಗಳಿಗೆ ಎದುರಾಗುವ ರಕ್ತದ ಕೊರತೆಯನ್ನು ಸಹ ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಮತ್ತೊಂದು ದಿಕ್ಕಿನಲ್ಲಿಯೂ ತಮ್ಮ ನಿರಂತರ ಹೋರಾಟ ನಡೆಸಿದ್ದಾರೆ. ವಿವಿಧ ರೋಗಿಗಳಿಗೆ ಎದುರಾಗುವ ರಕ್ತದ ಕೊರತೆಯನ್ನು ಸಹ ಅವರು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. ಲಾಕ್ ಡೌನ್ ಆಗಿದ್ದ ಕಾರಣ , ಕಳೆದ ಕೆಲವು ತಿಂಗಳುಗಳಿಂದ ಯಾವುದೇ ರಕ್ತದಾನ ಶಿಬಿರಗಳು ನಡೆದಿಲ್ಲ ಮತ್ತು ನಗರದಾದ್ಯಂತ ಬ್ಲಡ್ ಬ್ಯಾಂಕುಗಳು ತೀವ್ರ ರಕ್ತದ ಕೊರತೆ ಎದುರಿಸಿದೆ.

ಜೂನ್ 6 ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೇವಲ ಆರು ಬ್ಯಾಗ್ ರಕ್ತ ಮಾತ್ರವೇ ಇತ್ತು. ಇದರ ಮಹತ್ವವನ್ನರಿತ ಸ್ಥಳೀಯ ವೈದ್ಯರೊಬ್ಬರು , ಆಸ್ಪತ್ರೆಯ ಇತರ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ರಕ್ತದಾನ ಮಾಡಲು ಮುಂದಾದರು. ಆಸ್ಪತ್ರೆಗೆ ರಕ್ತದ ಅಗತ್ಯವಿಲ್ಲದಿದ್ದರೂ, ಇದು ಗೊತ್ತುಪಡಿಸಿದ ಕೋವಿಡ್ -19 ಆಸ್ಪತ್ರೆಯಾಗಿ ಮಾರ್ಪಟ್ಟಿರುವುದರಿಂದ, ಇತರ ಆಸ್ಪತ್ರೆಗಳಿಂದ ಬೇಡಿಕೆ ಹೆಚ್ಚಿತ್ತು

ವೈದ್ಯರನ್ನು ಎಚ್ಚರಿಸಿದ ಕ್ಷಣ, ಅವರು ಗುಂಪುಗಳನ್ನು ರಚಿಸಿ ರಕ್ತದಾನ ಮಾಡಲು ನಿರ್ಧರಿಸಿದರು. ಕಳೆದ ವಾರದಲ್ಲಿ, ವಿಕ್ಟೋರಿಯಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಸುಮಾರು 35-40 ಪಿಂಟ್ ರಕ್ತವನ್ನು ಸಂಗ್ರಹಿಸಿದೆ.

ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಡಾ.ನಂದೀಶ್ ಕುಮಾರ್ ಎಸ್ ಈ ಬಗ್ಗೆ ವಿವರಿಸಿದ್ದಾರೆ.  “ನಮಗೆ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಇದೆ ಎಂದು ತಿಳಿದುಬಂದಿದೆ, ಕೇವಲ ಆರು ಬ್ಯಾಗ್ ನಷ್ಟು ಮಾತ್ರವೇ ರಕ್ತವಿದ್ದಿತ್ತು. ಗರ್ಭಾವಸ್ಥೆಯಲ್ಲಿ ರಕ್ತಹೀನತೆ ಅಥವಾ ತಾಯಿ, ಮಕ್ಕಳ ರೋಗ್ಯ ಪ್ರಕರಣಗಳಿಗೆ ರಕ್ತದ ಅಗತ್ಯವಿರುವ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಹ ರಕ್ತದ ಕೊರತೆಯಾಗಿತ್ತು. ರಕ್ತದಾನ ಶಿಬಿರಗಳು ನಡೆಯದ ಕಾರಣ ಇನ್ನೂ ಅನೇಕ ಆಸ್ಪತ್ರೆಗಳು ರಕ್ತದ ಕೊರತೆಯನ್ನು ಎದುರಿಸುತ್ತಿವೆ. ಆದ್ದರಿಂದ, ನಾವು ಗುಂಪುಗಳನ್ನು ರಚಿಸಿ ದಾನದ ಮೂಲಕ ಮುಂದೆ ನಡೆಸಿದ್ದೇವೆ. ಬ್ಲಡ್ ಬ್ಯಾಂಕ್‌ನಲ್ಲಿ ಈಗ ಸ್ವಲ್ಪ ಸ್ಟಾಕ್ ಹೆಚ್ಚಾಗಿರುವುದು ನಮಗೆ ಸಂತಸ ತಂದಿದೆ."

ಕರ್ನಾಟಕ ರೆಸಿಡೆಂಟ್ ವೈದ್ಯರ ಸಂಘದ ಅಧ್ಯಕ್ಷ ಡಾ. ದಯಾನಂದ್ ಸಾಗರ್ ಮಾತನಾಡಿ, “ಥಲಸ್ಸೆಮಿಯಾ, ಹಿಮೋಫಿಲಿಯಾ, ದೀರ್ಘಕಾಲದ ಕಾಯಿಲೆಗಳು, ಡೆಂಗ್ಯೂ ಅಥವಾ ಬೇರಾವುದೇ  ಸೋಂಕುಗಳಿಗೆ ರೋಗಿಗಳಿಗೆ ಸಾಕಷ್ಟು ರಕ್ತ ಬೇಕು. ಕೊರತೆ ಇದೆ ಎಂದು ನಮಗೆ ತಿಳಿದಾಗ, ರಕ್ತದಾನ ಶಿಬಿರವನ್ನು ನಡೆಸಬೇಕೆಂದು ನಾವು ಯೋಚಿಸಿದ್ದೇವೆ. ಆದರೆ ಜನಸಂದಣಿಯ ಸಾಧ್ಯತೆಯಿಂದಾಗಿ ನಾವು ಬೇರೆ ತೀರ್ಮಾನಕ್ಕೆ ಬರಬೇಕಾಗಿದೆ. ಹಾಗಾಗಿ ನಾವುಗಳೇ ರಕ್ತದಾನ ಮಾಡಲು ತೀರ್ಮಾನಿಸಿದ್ದೇವೆ" ಎಂದರು.

“ಕೋವಿಡ್ -19 ಕರ್ತವ್ಯದಲ್ಲಿರುವ ವೈದ್ಯರಿಗೆ ರಕ್ತದಾನ ಮಾಡಲು ಅನುಮತಿ ಇಲ್ಲ. ಆದರೆ ತಮ್ಮ ಸರದಿಯನ್ನು ಪೂರ್ಣಗೊಳಿಸಿದ ನಂತರ ಅವರೂ ಈಗ ಮುಂದೆ ಬರುತ್ತಿದ್ದಾರೆ. ಎಲ್ಲಾ ರೆಸಿಡೆಂಟ್ ವೈದ್ಯರು ಸಹ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಳೆದ ವಾರದಲ್ಲಿ 20 ಕ್ಕೂ ಹೆಚ್ಚು ವೈದ್ಯರು ರಕ್ತದಾನ ಮಾಡಿದ್ದಾರೆ, ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com