ಇದು ಪಾರ್ಕಿಂಗ್ ಅಲ್ಲ, ವರ್ಶಿಪ್ ಆನ್ ವ್ಹೀಲ್ಸ್: ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಚರ್ಚ್'ನಿಂದ ವಿಶಿಷ್ಟ ಆರಾಧನೆ

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿರುವ ಚರ್ಚ್'ನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ವಿಶಿಷ್ಟ ಶೈಲಿಯಲ್ಲಿ ಪಾರ್ಥನೆ ಸಲ್ಲಿಸಲಾಯಿತು. 
ಕಾರಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಜನರು,
ಕಾರಿನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಜನರು,

ಬೆಂಗಳೂರು: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ನಗರದಲ್ಲಿರುವ ಚರ್ಚ್'ನಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ವಿಶಿಷ್ಟ ಶೈಲಿಯಲ್ಲಿ ಪಾರ್ಥನೆ ಸಲ್ಲಿಸಲಾಯಿತು.
 
ನಗರದ ಹೆಬ್ಬಾಳದ ಬೆತೆಲ್ ಎಜಿ ಚರ್ಚ್ ನಲ್ಲಿ ವಿಶಿಷ್ಟವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯವಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ಹಾಗೂ ಕಾರುಗಳಲ್ಲಿ ಬಂದ ಭಕ್ತಾದಿಗಳು ತಮ್ಮ ತಮ್ಮ ವಾಹನಗಳಲ್ಲಿಯೇ ಕುಳಿತು ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡರು. ವರ್ಶಿಪ್ ಆನ್ ವ್ಹೀಲ್ಸ್ ಎಂಬ ಹೆಸರಿನಲ್ಲಿ ಜನರು ಪ್ರಾರ್ಥನೆ ಸಲ್ಲಿಸಿದರು. 

ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದವರಿಗೆ ಬೆಳಗ್ಗೆ 7 ಗಂಟೆ ಮತ್ತು ಸಂಜೆ 5 ಹಾಗೂ ಕಾರುಗಳಲ್ಲಿ ಬಂದಿದ್ದವರಿಗೆ ಬೆಳಿಗ್ಗೆ 9 ಮತ್ತು ಸಂಜೆ 7 ಗಂಟೆಗೆ ಪ್ರಾರ್ಥನೆ ಸಮಯ ನಿಗದಿಪಡಿಸಲಾಗಿತ್ತುಯ ಯಾವುದೇ ವಾಹನ ಸೌಲಭ್ಯವಿಲ್ಲದವರು ಬೆಳಿಗ್ಗೆ 11 ಮತ್ತು ಮಧ್ಯಾಹ್ನ 1 ಚರ್ಚಿನ ಒಳಭಾಗದಲ್ಲಿ ನಡೆದ ಪ್ರಾರ್ಥನಾ ಕೂಟದಲ್ಲಿ ಭಾಗವಿಸಿದ್ದರು. 

ಪ್ರಾರ್ಥನಾ ಕೂಡದಲ್ಲಿ ಹೆಚ್ಚಿನ ದಟ್ಟಣೆ ಆಗಬಾರದು ಎಂಬ ಉದ್ದೇಶದಿಂದ ಚರ್ಚ್ನ ವೆಬ್ ಸೈಟ್ ಮತ್ತು ಯೂಟ್ಯೂಬ್, ಫೇಸ್ ಬುಕ್ ನಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ಪ್ರಾರ್ಥನಾ ಕೂಟದ ನೇರ ಪ್ರಸಾರ ಕೂಡ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com