ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣ: ಅಂತರ ರಾಜ್ಯ ಪ್ರಯಾಣ ಮಾರ್ಗಸೂಚಿಯಲ್ಲಿ ಬದಲಾವಣೆ

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ  ಅಂತರ ರಾಜ್ಯ ಪ್ರಯಾಣ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದೆ. ತಮಿಳುನಾಡು ಹಾಗೂ ನವದೆಹಲಿಯಿಂದ ಬರುವ ಪ್ರಯಾಣಿಕರಿಗೆ 3 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. 
ಪ್ರಯಾಣಿಕರ ಸಾಂದರ್ಭಿಕ ಚಿತ್ರ
ಪ್ರಯಾಣಿಕರ ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ  ಅಂತರ ರಾಜ್ಯ ಪ್ರಯಾಣ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಲಾಗಿದೆ. ತಮಿಳುನಾಡು ಹಾಗೂ ನವದೆಹಲಿಯಿಂದ ಬರುವ ಪ್ರಯಾಣಿಕರಿಗೆ 3 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. 

ಸೇವಾ ಸಿಂಧು ಆಫ್ ನಲ್ಲಿ ಹೆಸರು ನೋಂದಾಯಿಸಿರುವ ಪ್ರಯಾಣಿಕರು ಹೆಸರು, ವಿಳಾಸ, ಮೊಬೈಲ್ ನಂಬರ್ ನೀಡಬೇಕಾಗುತ್ತದೆ. ವ್ಯವಹಾರ ಉದ್ದೇಶದ ಪ್ರಯಾಣಿಕರು , ಕರ್ನಾಟಕದಲ್ಲಿರುವ ವ್ಯಕ್ತಿಯ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ನೀಡಬೇಕಾಗುತ್ತದೆ. ಕರ್ನಾಟಕದ ಮೂಲಕ ಬೇರೆ ರಾಜ್ಯಗಳಿಗೆ ತೆರಳುವವರು ತಲುಪಿಸಬೇಕಾಗಿರುವ ರಾಜ್ಯದ ವಿಳಾಸವನ್ನು ನೀಡಬೇಕಾಗುತ್ತದೆ.

ಯಾವುದೇ ರಾಜ್ಯದಿಂದ ಬಂದ ಪ್ರಯಾಣಿಕರಿಗೆ ಕೋವಿಡ್-19 ಲಕ್ಷಣಗಳು ಕಂಡುಬಂದರೆ,  ಕೋವಿಡ್-ಕೇರ್ ಸೆಂಟರ್ ನಲ್ಲಿ 7 ದಿನ ಐಸೋಲೇಷನ್ ನಲ್ಲಿ ಇರಬೇಕಾಗುತ್ತದೆ. ಕೂಡಲೇ ಪರೀಕ್ಷೆ ಮಾಡಿಸಬೇಕು, ಒಂದು ವೇಳೆ ಪಾಸಿಟಿವ್ ಕಂಡುಬಂದರೆ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗುವುದು, ನಗೆಟಿವ್ ಬಂದರೆ ಮುಂದಿನ ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಹಾರಾಷ್ಟ್ರದಿಂದ ಬಂದವರು 7 ದಿನ, ತಮಿಳುನಾಡು ಹಾಗೂ ನವದೆಹಲಿಯಿಂದ ಬಂದಂತಹ ಪ್ರಯಾಣಿಕರು ಮೂರು ದಿನಗಳ ಕಾಲ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಬೇಕಾಗುತ್ತದೆ ಎಂದು ಸೂಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com