ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ

ಮೋದಿ 5 ಬಾರಿ ಚೀನಾಕ್ಕೆ ಹೋಗಿ ಬಂದಿದ್ದಾರೆ, ಏನು ಪ್ರಯೋಜನ, ಯೋಧರ ಬಲಿದಾನಕ್ಕೆ ಯಾರು ಹೊಣೆ: ಕಾಂಗ್ರೆಸ್ ಪ್ರಶ್ನೆ

ಭಾರತ-ಚೀನಾ ಗಡಿ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ, ಪ್ರಧಾನಿ ಮೋದಿಯವರು ಏಕೆ ಯಾವ ಕಠಿಣ ಕ್ರಮಕ್ಕೂ ಮುಂದಾಗುತ್ತಿಲ್ಲ ಎಂಬ ಆರೋಪಗಳು ಪ್ರತಿಪಕ್ಷ ಕಾಂಗ್ರೆಸ್ ನಿಂದ ಕೇಳಿಬರುತ್ತಿದೆ.

ಬೆಂಗಳೂರು:ಭಾರತ-ಚೀನಾ ಗಡಿ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಏನು ಮಾಡುತ್ತಿದೆ, ಪ್ರಧಾನಿ ಮೋದಿಯವರು ಏಕೆ ಯಾವ ಕಠಿಣ ಕ್ರಮಕ್ಕೂ ಮುಂದಾಗುತ್ತಿಲ್ಲ ಎಂಬ ಆರೋಪಗಳು ಪ್ರತಿಪಕ್ಷ ಕಾಂಗ್ರೆಸ್ ನಿಂದ ಕೇಳಿಬರುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 2014ರಿಂದ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಚಿನ್ ಪಿಂಗ್ 18 ಬಾರಿ ಸಭೆ ನಡೆಸಿದ್ದಾರೆ. ಚೀನಾ ದೇಶಕ್ಕೆ ಮೋದಿಯವರು 5 ಬಾರಿ ಹೋಗಿ ಬಂದಿದ್ದಾರೆ, ಕಳೆದ 70 ವರ್ಷಗಳಲ್ಲಿ ಇಷ್ಟೊಂದು ಸಲ ಚೀನಾಕ್ಕೆ ಭೇಟಿ ನೀಡಿದ ಬೇರೊಬ್ಬ ಪ್ರಧಾನಿಯಿಲ್ಲ. ಶಾಂತಿ, ಸೌಹಾರ್ದತೆ ಒಪ್ಪಂದದ ಭಾಗವಾಗಿ ಹಲವು ದ್ವಿಪಕ್ಷೀಯ ಒಪ್ಪಂದ ಮತ್ತು ಶಿಷ್ಟಾಚಾರಗಳಿಗೆ ಮೋದಿ ಸಹಿ ಹಾಕಿ ಬಂದಿದ್ದಾರೆ. ಆದರೆ ಇದರಿಂದ ಸಿಕ್ಕಿದ ಫಲಿತಾಂಶವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

1967ರ ನಂತರ ನಡೆದ ಭಾರತ-ಚೀನಾ ಗಡಿ ಸಂಘರ್ಷದಲ್ಲಿ ಹಿಂದೆಂದೂ ಕಂಡಿರದಷ್ಟು ಸಾವು-ನೋವು ಈ ಬಾರಿಯಾಗಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಸೈನಿಕರ ವೀರ ತ್ಯಾಗ, ಬಲಿದಾನಕ್ಕೆ ಯಾರು ಹೊಣೆ ಎಂದು ಕಾಂಗ್ರೆಸ್ ಕೇಳಿದೆ.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ಸೈನ್ಯಾಧಿಕಾರಿಗಳು ಮತ್ತು ಸೈನಿಕರನ್ನು ನೆನೆದು ನಾನು ಅನುಭವಿಸುತ್ತಿರುವ ನೋವನ್ನು ಪದಗಳ ಮೂಲಕ ಹೇಳಲು ಸಾಧ್ಯವಿಲ್ಲ.ಅವರಿಗೆ ನನ್ನ ಶ್ರದ್ಧಾಂಜಲಿ ಅರ್ಪಿಸುತ್ತಾ, ಅವರ ಎಲ್ಲಾ ಪ್ರೀತಿಪಾತ್ರರ ದುಃಖದಲ್ಲಿ ನಾವೂ ಭಾಗಿಗಳು, ಅವರೊಂದಿಗೆ ನಾವಿರುತ್ತೇವೆ ಎಂದು ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದರು.

Related Stories

No stories found.

Advertisement

X
Kannada Prabha
www.kannadaprabha.com