ಧರ್ಮಲ್ ಸ್ರೀನಿಂಗ್
ಧರ್ಮಲ್ ಸ್ರೀನಿಂಗ್

ಗದಗ: ಪಿಯುಸಿ ಪರೀಕ್ಷೆಗಾಗಿ ಓಡೋಡಿ ಬಂದ ವಿದ್ಯಾರ್ಥಿಗೆ ಹೈ ಟೆಂಪರೇಚರ್‌, ಪ್ರತ್ಯೇಕ ಕೊಠಡಿಯ

ರಾಜ್ಯಾದ್ಯಂತ ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯಲ್ಲಿ ಕೆಲವೆಡೆ ಸಾಮಾಜಿಕ ಅಂತರ ನಿಯಮ ಪಾಲನೆಯಾಗದಿದ್ದರೆ, ಇನ್ನು ಕೆಲವು ಕಡೆ ವಿದ್ಯಾರ್ಥಿಗಳಿಗೆ ಸರಿಯಾಗಿ ಧರ್ಮಲ್ ಸ್ರೀನಿಂಗ್ ಮಾಡದೆಯೇ ಪರೀಕ್ಷೆಗೆ ಬಿಡಲಾಗಿದೆ.

ಗದಗ: ರಾಜ್ಯಾದ್ಯಂತ ಗುರುವಾರ ನಡೆದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಯಲ್ಲಿ ಕೆಲವೆಡೆ ಸಾಮಾಜಿಕ ಅಂತರ ನಿಯಮ ಪಾಲನೆಯಾಗದಿದ್ದರೆ, ಇನ್ನು ಕೆಲವು ಕಡೆ ವಿದ್ಯಾರ್ಥಿಗಳಿಗೆ ಸರಿಯಾಗಿ ಧರ್ಮಲ್ ಸ್ರೀನಿಂಗ್ ಮಾಡದೆಯೇ ಪರೀಕ್ಷೆಗೆ ಬಿಡಲಾಗಿದೆ.

ಈ ಮಧ್ಯೆ ಗದಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ, ಪರೀಕ್ಷೆಗೆ ತಡವಾಯಿತು ಎಂಬ ಕಾರಣಕ್ಕೆ ಪರೀಕ್ಷಾ ಕೇಂದ್ರಕ್ಕೆ ಓಡೋಡಿ ಬಂದಿದ್ದಾನೆ. ಓಡಿಬಂದ ಕಾರಣ ವಿದ್ಯಾರ್ಥಿಗೆ ಹೈ ಟೆಂಪರೇಚರ್‌ ಕಂಡು ಬಂದಿದ್ದು, ಪರೀಕ್ಷೆ ಬರೆಯಲು ಆತನಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ನಗರದ ಜೆಟಿ ಕಾಲೇಜ್‌ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಆಗಮಿಸಿದ ವಿದ್ಯಾರ್ಥಿಗೆ ಹೈ ಟೆಂಪರೇಚರ್‌ ಕಂಡು ಬಂದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿಗೆ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ವಿದ್ಯಾರ್ಥಿಗೆ ಕಾಲೇಜು ಸಿಬ್ಬಂದಿ ಧೈರ್ಯ ತುಂಬಿದ್ದಾರೆ.

ತಡವಾಯಿತು ಎಂಬ ಕಾರಣಕ್ಕೆ ವಿದ್ಯಾರ್ಥಿ ಪರೀಕ್ಷಾ ಕೇಂದ್ರಕ್ಕೆ ಓಡಿಬಂದ ಹಿನ್ನೆಲೆಯಲ್ಲಿ ಆತನಿಗೆ ಹೈ ಟೆಂಪರೇಚರ್‌ ಕಂಡು ಬಂದಿದೆ.  ಆತನಿಗೆ ಜ್ವರ ಅಥವಾ ಯಾವುದೇ ಕೊವಿಡ್-19 ಲಕ್ಷಗಳು ಇಲ್ಲ. ಕಂಟೈನ್ ಮೆಂಟ್ ಪ್ರದೇಶದಿಂದ ಬಂದ ಇತರ ಇಬ್ಬರು ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು ಎಂದು ಗದಗ ಜಿಲ್ಲಾಧಿಕಾರಿ ಎಂಜಿ ಹಿರೇಮಠ ಅವರು ತಿಳಿಸಿದ್ದಾರೆ.

ಇನ್ನು ಧಾರವಾಡದಲ್ಲಿ ಕಂಟೈನ್ ಮೆಂಟ್ ಪ್ರದೇಶದಿಂದ ಬಂದ ಇಬ್ಬರು ವಿದ್ಯಾರ್ಥಿಗಳಿಗೂ ಸಹ ಮುಂಜಾಗ್ರತಾ ಕ್ರಮವಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com