ಕೊರೋನಾದಿಂದ ಹಡಗಿನಲ್ಲಿ ಲಾಕ್: ಹೃದಯಾಘಾತದಿಂದ ಅಡುಗೆಯಾತ ಸಾವು!

ಮಹಾಮಾರಿ ಕೊರೋನಾದಿಂದ ಕಳೆದ 100 ದಿನಗಳಿಂದ ಯುನೈಟೆಡ್ ಕಿಂಗ್‌ಡಂನ ಟಿಲ್ಬರಿ ಬಂದರಿನಲ್ಲಿ ಸಿಲುಕಿದ್ದ ಎಂವಿ ಆಸ್ಟೋರಿಯಾ ಹಡಗಿನಲ್ಲಿ ಅಡಿಗೆ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಹಾಮಾರಿ ಕೊರೋನಾದಿಂದ ಕಳೆದ 100 ದಿನಗಳಿಂದ ಯುನೈಟೆಡ್ ಕಿಂಗ್‌ಡಂನ ಟಿಲ್ಬರಿ ಬಂದರಿನಲ್ಲಿ ಸಿಲುಕಿದ್ದ ಎಂವಿ ಆಸ್ಟೋರಿಯಾ ಹಡಗಿನಲ್ಲಿ ಅಡಿಗೆ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಗಳವಾರ ರಾತ್ರಿ ಆಸ್ಟೋರಿಯಾ ಸಿಬ್ಬಂದಿಯನ್ನು ಮತ್ತೊಂದು ಹಡಗು ವಾಸ್ಕೋ ಡಾ ಗಾಮಾಕ್ಕೆ ಸ್ಥಳಾಂತರಿಸಲಾಗಿತ್ತು. ಈ ವೇಳೆ 43 ವರ್ಷದ ಬಾಲಾಜಿ ಕೃಷ್ಣಕುಮಾರ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 

100 ದಿನಗಳಿಂದ ಹಡಗಿನಲ್ಲಿ ಲಾಕ್ ಆಗಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು, ಚೆನ್ನೈನ ತಂಬರಂನಲ್ಲಿ ತಮ್ಮ ಕುಟುಂಬವನ್ನು ಸೇರಲು ಹಪಹಪಿಸುತ್ತಿದ್ದರು ಎಂದು ಸಿಬ್ಬಂದಿ ಸದಸ್ಯರು ತಿಳಿಸಿದ್ದಾರೆ. 

ಮಾರ್ಚ್ 9ರಿಂದ 168 ಸಿಬ್ಬಂದಿ ಎಸೆಕ್ಸ್‌ನಲ್ಲಿ ಸಿಕ್ಕಿಬಿದ್ದಿದ್ದು, ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವಂತೆ ಪದೇ ಪದೇ ಮನವಿ ಮಾಡಲಾಗಿತ್ತು. ಗೋವಾ, ಕೇರಳ, ಮಹಾರಾಷ್ಟ್ರ, ನವದೆಹಲಿ ಮತ್ತು ತಮಿಳುನಾಡಿನ ಅಡುಗೆಯವರು, ಬಾರ್‌ಟೆಂಡರ್‌ಗಳು ಮತ್ತು ಭದ್ರತಾ ಸಿಬ್ಬಂದಿ ಹಡಗಿನಲ್ಲಿ ಸಿಲುಕಿದ್ದಾರೆ ಎಂದು ಜೂನ್ 3ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿ ಭಿತ್ತರವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com