ಟೊಯೋಟಾ ಕಿರ್ಲೋಸ್ಕರ್ ಬಿಡದಿ ಪ್ಲಾಂಟ್ ನ 2 ಸಿಬ್ಬಂದಿಗೆ ಕೊರೋನಾ, ಇತರೆ ಸಿಬ್ಬಂದಿಗೂ ಸೋಂಕಿನ ಭೀತಿ

ಮಾರಕ ಕೊರೋನಾ ವೈರಸ್ ದಿನಗಳೆದಂತೆ ತನ್ನ ಕರಾಳ ಮುಖದ ಪ್ರದರ್ಶನ ಮಾಡುತ್ತಿದ್ದು, ಇಂದು ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಇಬ್ಬರು ಸಿಬ್ಬಂದಿಗೆ ಸೋಂಕು ಒಕ್ಕರಿಸಿದೆ. ಇದರಿಂದಾಗಿ ಸಂಸ್ಥೆಯ ಇತರೆ ಸಿಬ್ಬಂದಿಗಳಿಹೂ ಸೋಂಕು ಭೀತಿ ಶುರುವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ದಿನಗಳೆದಂತೆ ತನ್ನ ಕರಾಳ ಮುಖದ ಪ್ರದರ್ಶನ ಮಾಡುತ್ತಿದ್ದು, ಇಂದು ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಇಬ್ಬರು ಸಿಬ್ಬಂದಿಗೆ ಸೋಂಕು ಒಕ್ಕರಿಸಿದೆ. ಇದರಿಂದಾಗಿ ಸಂಸ್ಥೆಯ ಇತರೆ ಸಿಬ್ಬಂದಿಗಳಿಹೂ ಸೋಂಕು ಭೀತಿ ಶುರುವಾಗಿದೆ.

ಈ ಬಗ್ಗೆ ಟೊಯೋಟಾ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ಇಬ್ಬರು ಸಿಬ್ಬಂದಿಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನಲೆಯಲ್ಲಿ ಘಟಕದಲ್ಲಿನ ಸಿಬ್ಬಂದಿಗಳ ಸಂಖ್ಯೆಯನ್ನು ಇಳಿಕೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಂಸ್ಥೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದ್ದು, ಸ್ಯಾನಿಟೈಸೇಷನ್ ಮಾಡಿಸಲಾಗಿದೆ ಎಂದು ಹೇಳಿದೆ. ಇಬ್ಬರು ಸಿಬ್ಬಂದಿಗಳ ಪೈಕಿ ಓರ್ವ ಸಿಬ್ಬಂದಿ ಜೂನ್ 7 ರಂದು ಕೊನೆಯ ಬಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು, ಮತ್ತೋರ್ವ ಸಿಬ್ಬಂದಿ ಜೂನ್ 16ರಂದು ಕೆಲಸ ಮಾಡಿದ್ದರು. 

ಪ್ರಸ್ತುತ ಸಿಬ್ಬಂದಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ. ಸೋಂಕು ಪೀಡಿತ ಸಿಬ್ಬಂದಿಗಳ ಕುಟುಂಬದೊಂದಿಗೆ ಸಂಸ್ಥೆ ನಿರಂತರ ಸಂಪರ್ಕದಲ್ಲಿದ್ದು, ನೈತಿಕ ನೆರವು ನೀಡಲಾಗುತ್ತಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಸಿಬ್ಬಂದಿಗಳು ಸೋಂಕಿಗೆ ತುತ್ತಾಗಿರುವುದರಿಂದ ಇತರೆ ಸಿಬ್ಬಂದಿಗಳು ಆತಂಕ ಪಡುವ ಅಗತ್ಯವಿಲ್ಲ. ಸಂಸ್ಥೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸಾಕಷ್ಟು ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಮತ್ತು ಕೋಲ್ಕತಾ ಘಟಕಗಳಲ್ಲಿನ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಕೊರೋನಾ ಲಾಕ್ ಡೌನ್ ಬಳಿಕ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಮೇ 26ರಂದು ಘಟಕಕ್ಕ ಪುನರ್ ಚಾಲನೆ ನೀಡಲಾಗಿತ್ತು.

ಕಳೆದ ತಿಂಗಳು ಹುಂಡೈ ಮೋಟಾರ್ ಇಂಡಿಯಾ ಮತ್ತು ಮಾರುತಿ ಸುಜುಕಿ ಸಂಸ್ಛೆಗಳ ಚೆನ್ನೈ ಮತ್ತು ಮನೇಸಾರ್ ಘಟಕದಲ್ಲಿನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ಹಬ್ಬಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com