ಉದ್ಯಮಿ ಹತ್ಯೆ: ತಲಘಟ್ಟಪುರ ಪೊಲೀಸರಿಂದ ಐವರ ಬಂಧನ

ಆಸ್ತಿಗಾಗಿ ಮಗ ಹಾಗೂ ತಮ್ಮನೇ ಸಂಚು ರೂಪಿಸಿ ಸುಪಾರಿ ಕೊಟ್ಟು ಬಳ್ಳಾರಿ ಮೂಲದ ಗಣಿ ಉದ್ಯಮಿಯನ್ನು ಭೀಕರವಾಗಿ ಕೊಲೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಘಟ್ಟಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಸ್ತಿಗಾಗಿ ಮಗ ಹಾಗೂ ತಮ್ಮನೇ ಸಂಚು ರೂಪಿಸಿ ಸುಪಾರಿ ಕೊಟ್ಟು ಬಳ್ಳಾರಿ ಮೂಲದ ಗಣಿ ಉದ್ಯಮಿಯನ್ನು ಭೀಕರವಾಗಿ ಕೊಲೆ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಘಟ್ಟಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಬ್ಬಲಾಳ ಮುಖ್ಯರಸ್ತೆ, ರಾಯಲ್‍ಫಾಮ್ಸ್ ಬಡಾವಣೆಯಲ್ಲಿ ವಾಸವಾಗಿದ್ದ ಸಿಂಗನಮಲ್ಲ ಮಾಧವ ಅವರನ್ನು ಸುಫಾರಿ ಕೊಟ್ಟು ನಾಲ್ಕು ತಿಂಗಳ ಹಿಂದೆ ಕೊಲೆ ಮಾಡಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋವಾ ರಾಜ್ಯದ ಮಡಂಗಾವ್ ನಗರ ನಿವಾಸಿ ಹಾಗೂ ಸಣ್ಣಪುಟ್ಟ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ರಿಯಾಜ್ ಅಬ್ದುಲ್ಲಾ ಶೇಖ್ ಅಲಿಯಾಸ್ ಗೋವಾ ರಿಯಾಜ್(40), ಬೆಂಗಳೂರು ಯಲಹಂಕ ಕೋಗಿಲು ಕ್ರಾಸ್ ನಿವಾಸಿ ಮೊಬೈಲ್ ಸರ್ವೀಸ್ ಕೆಲಸ ಮಾಡುತ್ತಿದ್ದ ಶಹಭಾಜ್(23), ಗೋವಾದ ಮಡಂಗಾವ್‍ನ್ ಕಾರ್ಪೆಂಟರ್ ಶಾರೂಖ್ ಮನ್ಸೂರ್(24), ಯಶವಂತಪುರದ ಬಿ.ಕೆ.ನಗರ ನಿವಾಸಿ ಆಟೋ ಡ್ರೈವರ್ ಆದಿಲ್(28), ಎಂಬ ಐವರನ್ನು ಬಂಧಿಸಲಾಗಿದೆ,

ಶಾಮಣ್ಣಗಾರ್ಡನ್ ನಿವಾಸಿ ಕಾರ್ಪೆಂಟರ್ ಸಲ್ಮಾನ್(24) ಅವರುಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸುಫಾರಿ ನೀಡಿದಂತಹ ಮೃತ ಸಿಂಗನಮಲ್ಲ ಮಾಧವರವರ ಕಿರಿಯ ಪುತ್ರ ಹರಿಕೃಷ್ಣ, ಸೋದರ ಶಿವರಾಮ್ ಪ್ರಸಾದ್ ಅವರುಗಳು ತಲೆಮರೆಸಿಕೊಂಡಿದ್ದು,  ಅವರಿರುವ ಸ್ಥಳ ಪತ್ತೆಯಾಗಿದೆ ಶೀಘ್ರವೇ ಅವರನ್ನು ಬಂಧಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರಾವ್ ತಿಳಿಸಿದ್ದಾರೆ.

ಮೃತ ಮಾಧವ ಅವರು ಬಳ್ಳಾರಿಯವರಾಗಿದ್ದು, ಸುಮಾರು  2000 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿತ್ತು. 100 ಕೋಟಿ ರೂ. ಮೌಲ್ಯಕ್ಕೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದರು

ಇದರಿಂದ ಸಿಟ್ಟಾಗಿದ್ದ ಹರಿಕೃಷ್ಣ ಮತ್ತು ತಮ್ಮ ಶಿವರಾಮ್ ಪ್ರಸಾದ್ ಅವರು ಮಾಧವನನ್ನು ಕೊಲೆ ಮಾಡಲು ಎರಡು ತಂಡಗಳಿಗೆ ಸುಫಾರಿ ಕೊಟ್ಟಿದ್ದರು. ಆ ಎರಡೂ ತಂಡಗಳಿಂದ ಕೊಲೆ ಮಾಡುವಲ್ಲಿ ವಿಳಂಬವಾಗಿತ್ತು. ಹೀಗಾಗಿ 3ನೇ ತಂಡದ ಮುಖ್ಯಸ್ಥ ರಿಯಾಜ್‍ಗೆ 25 ಲಕ್ಷ ರೂ. ಮೊತ್ತದ ಸುಫಾರಿ ನೀಡಿದ್ದರು. ತಂಡದಲ್ಲಿದ್ದ 5 ಆರೋಪಿಗಳು ತಲಾ 5 ಲಕ್ಷ ಹಂಚಿಕೊಳ್ಳುವ ಮಾತುಕತೆಯಾಗಿತ್ತು.

ಏಳುವರೆ ಲಕ್ಷ ರೂ. ಮುಂಗಡ ಕೂಡ ಪಾವತಿಯಾಗಿತ್ತು. ಮಾಧವನ ಚಲನವಲನಗಳ ಮೇಲೆ ನಿಗಾವಹಿಸಿದ್ದ ಆರೋಪಿಗಳು ಫೆ.14ರಂದು ಮಧ್ಯಾಹ್ನ 1.30ರ ಸುಮಾರಿಗೆ ರಾಯಲ್ ಫಾಮ್ರ್ಸ್ ಲೇಔಟ್ ಗೇಟ್ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com