ಬೆಂಗಳೂರು: ನಭೋಮಂಡಲದಲ್ಲಿ ಗೋಚರಿಸಿದ ವರ್ಷದ ಮೊದಲ ವಿಸ್ಮಯ ಕಂಕಣ ಸೂರ್ಯಗ್ರಹಣ

ರಾಜ್ಯದ ಹಲವೆಡೆ ವರ್ಷದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ಗೋಚರವಾಗಿದೆ. ಬೆಳಿಗ್ಗೆ 10ಗಂಟೆ 5 ನಿಮಿಷಕ್ಕೆ ಆರಂಭಗೊಂಡ ಈ ಸೂರ್ಯಗ್ರಹಣ ಮಧ್ಯಾಹ್ನ 1.31ರವರೆಗೆ ಗೋಚರಿಸಿದೆ. 

Published: 21st June 2020 12:51 PM  |   Last Updated: 21st June 2020 01:03 PM   |  A+A-


Solar Eclipse 2020 as seen in the skies of Bengaluru

ಬೆಂಗಳೂರು ನಗರದಲ್ಲಿ ಗೋಚರಗೊಂಡಿರುವ ಸೂರ್ಯಗ್ರಹಣ

Posted By : Manjula VN
Source : Online Desk

ಬೆಂಗಳೂರು: ರಾಜ್ಯದ ಹಲವೆಡೆ ವರ್ಷದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ಗೋಚರವಾಗಿದೆ. ಬೆಳಿಗ್ಗೆ 10ಗಂಟೆ 5 ನಿಮಿಷಕ್ಕೆ ಆರಂಭಗೊಂಡ ಈ ಸೂರ್ಯಗ್ರಹಣ ಮಧ್ಯಾಹ್ನ 1.31ರವರೆಗೆ ಗೋಚರಿಸಿದೆ. 

ಉಡುಪಿ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮುಂಬಾರು ಅಬ್ಬರಿಸುತ್ತಿದ್ದು, ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇರುವುದರಿಂದ ಸೂರ್ಯ ಮೋಡದ ಮರೆಯಿಂದ ಆಗಾಗ ಹೊರಬಂದು ಕಾಣಿಸುತ್ತಿದ್ದಾರೆ. 

ಬೆಳಿಗ್ಗೆ 10 ಗಂಟೆ 5 ನಿಮಿಷಕ್ಕೆ ಆರಂಭವಾದ ವಿಸ್ಮಯ ಕಂಕಣ ಸೂರ್ಯಗ್ರಹಣವನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡುತ್ತಿದ್ದಾರೆ. 

ಕಳೆದ ಡಿಸೆಂಬರ್ 26 ಕಂಕಣ ಸೂರ್ಯಗ್ರಹಣ ಹಾಗೂ ಇಂದಿನ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹದ್ದಾಗಿದ್ದು, ಹತ್ತು ವರ್ಷಗಳಲ್ಲೊಮ್ಮೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದರೆ ಇನ್ನು ಮತ್ತೆ ಈ ಕಂಕಣ ಸೂರ್ಯಗ್ರಹಣ 2064ಕ್ಕೆ ಕಾಣಿಸಿಕೊಳ್ಳುತ್ತದೆ ಎಂದು ಭೌತ ವಿಜ್ಞಾನಿಗಳು ಹೇಳಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

Stay up to date on all the latest ರಾಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp