ಲಡಾಖ್ ಸಂಘರ್ಷ: ಚೀನಾದಲ್ಲಿರುವ ಕರ್ನಾಟಕದ ಯೋಗ ಶಿಕ್ಷಕರು ಹೇಳಿದ್ದೇನು..?

ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ನಡುವೆ ಸಂಘರ್ಷ ಸಂಭವಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಹದಗೆಟ್ಟಿದೆ. ಈ ಬೆಳವಣಿಗೆ ನಡುವಲ್ಲೇ ಭಾನುವಾರ ವಿಶ್ವದಾದ್ಯಂತ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಇದೀಗ ಚೀನಾದಲ್ಲಿರುವ ರಾಜ್ಯದ ಯೋಗ ಶಿಕ್ಷಕರ ಯೋಗಕ್ಷೇಮ ಕುರಿತು ಚಿಂತೆಗಳು ಆರಂಭವಾಗಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಲಡಾಖ್ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತದ ನಡುವೆ ಸಂಘರ್ಷ ಸಂಭವಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಹದಗೆಟ್ಟಿದೆ. ಈ ಬೆಳವಣಿಗೆ ನಡುವಲ್ಲೇ ಭಾನುವಾರ ವಿಶ್ವದಾದ್ಯಂತ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದ್ದು, ಇದೀಗ ಚೀನಾದಲ್ಲಿರುವ ರಾಜ್ಯದ ಯೋಗ ಶಿಕ್ಷಕರ ಯೋಗಕ್ಷೇಮ ಕುರಿತು ಚಿಂತೆಗಳು ಆರಂಭವಾಗಿವೆ. 

ಚೀನಾದಲ್ಲಿರುವ ಭಾರತೀಯ ಯೋಗಪಟುಗಳು ತಮ್ಮ ಪರಿಸ್ಥಿತಿ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಳಿಕ ಇಲ್ಲಿ ಯಾವುದೇ ರೀತಿಯ ಹಗೆತನದ ವರ್ತನೆಯಾಗಲೀ, ಸಾರ್ವಜನಿಕ ಆಕ್ರೋಶವಾಗಲೀ ವ್ಯಕ್ತವಾಗುವಂತರ ಪರಿಸ್ಥಿತಿಗಳು ಕಂಡು ಬಂದಿಲ್ಲ ಅಂತರ್ಜಾಲಗಳಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ. ಆದರೆ, ದೂರವಾಣಿ ಕರೆಗಳಲ್ಲಿ ನಾವು ಗಡಿ ವಿಚಾರ ಸಂಬಂಧ ಯಾರೊಬ್ಬರೊಂದಿಗು ಚರ್ಚೆ ನಡೆಸುತ್ತಿಲ್ಲ. ಪರಿಸ್ಥಿತಿ ನಿಯಂತ್ರಣ ತಪ್ಪಿದ್ದೇ ಆದರೆ, ಭಾರತದ ರಾಯಭಾರಿ ಅಧಿಕಾರಿಗಳು ನಮ್ಮನ್ನು ರಕ್ಷಣೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಚೀನಾ ಸೇರಿದಂತೆ ಇತರೆ ನೆರೆ ರಾಷ್ಟ್ರಗಳಲ್ಲಿ ರಾಜ್ಯ 500ಕ್ಕೂ ಹೆಚ್ಚು ಯೋಗಾಪಟುಗಳು ನೆಲೆಯೂರಿದ್ದಾರೆ. ಹಲವು ಜನರು ಮೈಸೂರು ಮೂಲದವರೇ ಆಗಿದ್ದು, ಅಲ್ಲಿನ ಜನತೆಗೆ ಯೋಗ ಹೇಳಿಕೊಡಿಸುವ ಕಾರ್ಯ ಮಾಡುತ್ತಿದ್ದಾರೆ. 

ಚೀನಾದಲ್ಲಿ ಯೋಗ ಹೇಳಿಕೊಡುತ್ತಿರುವ ರಾಮು (ಹೆಸರು ಬದಲಿಸಲಾಗಿದೆ) ಎಂಬುವವರು ಮಾತನಾಡಿ, ಯೋಗಾದಿಂದ ಉಸಿರಾಟ ಸಮಸ್ಯೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತಿದ್ದು, ಸಾಕಷ್ಟು ಜನರಿಗೆ ಇದರಿಂದ ಸಹಾಯಕವಾಗಿದೆ. ಚೀನಾ ಈಗಷ್ಟೇ ಕೊರೋನಾದಿಂದ ಚೇತರಿಸಿಕೊಳ್ಳುತ್ತಿದೆ. ಸಾಕಷ್ಟು ಜನರು ಮಾಸ್ಕ್ ಗಳಿಲ್ಲದೆಯೇ ಓಡಾಡಲು ಆರಂಭಿಸಿದ್ದಾರೆ. ಗಡಿ ಘರ್ಷಣೆ ಬಳಿಕ ಈ ಬಗ್ಗೆ ನಮ್ಮ ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ ಎಂದು ತಿಳಿಸಿದ್ದಾರೆ. 

ರಾಮು ಅವರ ಸಂಬಂಧಿ ವೆಂಕಟೇಶ್ ಎಂಬುವವರು ಮಾತನಾಡಿ, ಕಳೆದ ಮೂರು ದಿನಗಳಿಂದಲೂ ರಾಮು ಜೊತೆಗೆ ಸಂಪರ್ಕದಲ್ಲಿದ್ದೇವೆ. ಸುರಕ್ಷಿತವಾಗಿರುವಂತೆ ಸಲಹೆ ನೀಡುತ್ತಲೇ ಇದ್ದೇನೆ. ಉಭಯ ರಾಷ್ಟ್ರಗಳ ನಡುವೆ ಇರುವ ಪರಿಸ್ಥಿತಿ ಶೀಘ್ರಗತಿಯಲ್ಲಿ ಸರಿಹೋಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆಂದು ಹೇಳಿದ್ದಾರೆ. 

ಯೋಗ ಶಿಕ್ಷ ವಿವೇಕಾನಂದ ಎಂಬುವವರು ಮಾತನಾಡಿ, ಚೀನಾದಲ್ಲಿ ನೂರಾರು ಜನರು ಯೋಗ ಪದವಿ ಪಡೆದುಕೊಳ್ಳುತ್ತಿದ್ದಾರೆ. ಚೀನಾ ಹಾಗೂ ಇತರೆ ರಾಷ್ಟ್ರಗಳಲ್ಲಿ ಭಾರತೀಯರು ಸುರಕ್ಷಿತವಾಗಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com