ಮೈಷುಗರ್ ಕಾರ್ಖಾನೆ ವಾರ್ಷಿಕ ಸಾಮಾನ್ಯ ಸಭೆ ವಿಫಲ!

ಮೈಷುಗರ್ ಕಾರ್ಖಾನೆಯಪುನರಾರಂಭ ಕುರಿತಂತೆ ಇಂದು ಮಂಡ್ಯದ ರೈತರು ಹಾಗೂ ಷೇರುದಾರರು 80ನೇ ವಾರ್ಷಿಕಸಾಮಾನ್ಯ ಸಭೆಯ ಆನ್‌ಲೈನ್ ವಿಡಿಯೋ ಸಂವಾದ ಅರ್ಧಕ್ಕೆ ಮೊಟಕುಗೊಳ್ಳುವ ಮೂಲಕ ವಿಫಲವಾಯಿತು.
ಮೈಷುಗರ್ ಕಾರ್ಖಾನೆ ವಾರ್ಷಿಕ ಸಾಮಾನ್ಯ ಸಭೆ ವಿಫಲ!
ಮೈಷುಗರ್ ಕಾರ್ಖಾನೆ ವಾರ್ಷಿಕ ಸಾಮಾನ್ಯ ಸಭೆ ವಿಫಲ!

ಮಂಡ್ಯ: ಮೈಷುಗರ್ ಕಾರ್ಖಾನೆಯಪುನರಾರಂಭ ಕುರಿತಂತೆ ಇಂದು ಮಂಡ್ಯದ ರೈತರು ಹಾಗೂ ಷೇರುದಾರರು 80ನೇ ವಾರ್ಷಿಕಸಾಮಾನ್ಯ ಸಭೆಯ ಆನ್‌ಲೈನ್ ವಿಡಿಯೋ ಸಂವಾದ ಅರ್ಧಕ್ಕೆ ಮೊಟಕುಗೊಳ್ಳುವ ಮೂಲಕ ವಿಫಲವಾಯಿತು.

ಸೋಮವಾರ ಬೆಳಿಗ್ಗೆ 11ಗಂಟೆಗೆ ನಿಗದಿಯಾಗಿದ್ದ ಸಭೆ 11.15ಕ್ಕೆ ಪ್ರಾರಂಭವಾಯಿತು. ಕಾರ್ಖಾನೆಯ ಛರ‍್ಮನ್ ಎಂ.ಮಹೇಶ್ವರರಾವ್ ನೇತೃತ್ವದಲ್ಲಿ ಮೂರುಕಡೆ ವಿಡಿಯೋ ಸಂವಾದ ಏರ್ಪಡಿಸಲಾಗಿತ್ತು. 

ಬೆಂಗಳೂರು ಪ್ರಧಾನ ಕಚೇರಿ, ಮೈಷುಗರ್ ಆವರಣ ಹಾಗೂ ಮೈಷುಗರ್ ಪ್ರೌಢಶಾಲೆಯಲ್ಲಿ ವಿಡಿಯೋ ಸಂವಾದಕ್ಕೆವ್ಯವಸ್ಥೆ ಮಾಡಲಾಗಿತ್ತು. ಮೂರು ಕಡೆ ಸಂವಾದ ಏರ್ಪಡಿಸಿದ್ದರಿಂದ ಯಾವ ಕಡೆ ಯಾರು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಅಲ್ಲದೆ, ಮಾತನಾಡುವ ಶಬ್ಧದಲ್ಲಿ ಸ್ಪಷ್ಠತೆ ಇಲ್ಲದ ಕಾರಣ ರೈತರು ಹಾಗೂ ಷೇರುದಾರರು ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿ ಕಾಟಾಚಾರದ ಸಂವಾದ ಬೇಕಾಗಿಲ್ಲ. ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಕಾರ್ಖಾನೆಯ ಛರ‍್ಮನ್ ಎಂ.ಮಹೇಶ್ವರರಾವ್‌ ಅವರು 2012-14ನೇ ಸಾಲಿನ ವಾರ್ಷಿಕಲೆಕ್ಕ ಮಂಡಿಸುತ್ತಿದ್ದರು. ಆದರೆ ಅವರ ಮಾತುಗಳು ಸ್ಪಷ್ಠವಾಗಿ ಕೇಳಿಸುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಹಾಗೂ ಷೇರುದಾರರು ನೀವು ಮಾತನಾಡುವುದು ಯಾರಿಗೂ ತಿಳಿಯುತ್ತಿಲ್ಲ. ಈ ಸಭೆಯನ್ನು ರದ್ದು ಮಾಡಿ, ನೇರವಾಗಿಯೇ ಎಲ್ಲ ಷೇರುದಾರರು ಹಾಗೂ ರೈತರನ್ನು ಒಂದೆಡೆ ಸೇರಿಸಿ ಸಭೆ ನಡೆಸುವಂತೆ ರೈತ ನಾಯಕಿ ಸುನಂದಜಯರಾಮ್, ಸಿ.ಕುಮಾರಿ, ಕೆ.ಬೋರಯ್ಯ, ಎಂ.ಬಿ.ಶ್ರೀನಿವಾಸ್, ಮುದ್ದೇಗೌಡ ಸೇರಿದಂತೆ ರೈತರು ಹಾಗೂ ಷೇರುದಾರರು ಸರ್ಕಾರ ಹಾಗೂ ಅಧಿಕಾರಿಗಳವಿರುದ್ಧ ಧಿಕ್ಕಾರ ಕೂಗಿ ಹೊರ ನಡೆದರು.

ಮೈಷುಗರ್ ಕಾರ್ಖಾನೆಯನ್ನು ಷೇರುದಾರರು ಸುಮಾರು 16 ಸಾವಿರ ಮಂದಿ ಇದ್ದು, ಇಂದಿನ ಸಾಮಾನ್ಯ ಸಭೆಯಲ್ಲಿಕೇವಲ 150 ಮಂದಿ ಮಾತ್ರ ಭಾಗಿಯಾಗಿದ್ದರು. ಅಲ್ಲದೆ, ಸಭೆಯ ನಂತರ ಒ ಅಂಡ್‌ ಎ ಗೆ ವಹಿಸುವ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ ಸಭೆ ಮೊಟಕುಗೊಂಡಿದ್ದರಿಂದ ಆ ಪ್ರಕ್ರಿಯೆಯೂ ಸ್ಥಗಿತಗೊಂಡಿತು.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com