ಬಾಗಲಕೋಟೆ: ಕುಂಭಕರ್ಣ ನಿದ್ರೆಯಲ್ಲಿದ್ದ ಅಧಿಕಾರಿಗಳಿಗೆ ಸಿಇಒ ಮಾನಕರ ಮಾತಿನ ಚಾಟಿ!

ಮಹಿಳೆಯರು ಹಾಗೂ ಯುವತಿಯರಿಗೆ ಹಂಚಿಕೆ ಮಾಡಲು ತರಿಸಲಾಗಿರುವ ೪ ಲಕ್ಷ  ಸ್ಯಾನಿಟರಿ ನ್ಯಾಪಕಿನ್‌ಗಳನ್ನು ಕಳೆದ ಜನವರಿಯಿಂದ ವಿತರಿಸದೇ ಕುಂಭಕರ್ಣ ನಿದ್ರೆಯಲ್ಲಿದ್ದ ಅಧಿಕಾರಿಗಳಿಗೆ ಜಿಪಂ. ಸಿಇಒ ಕಾರಣ ಕೇಳಿ ನೋಟಿಸ್ ನೀಡುವ ಮೂಲಕ ನಿದ್ರಾಭಂಗ ಮಾಡಿದ್ದಾರೆ.
ನ್ಯಾಪಕಿನ್ ಕಿಟ್‌ ವಿತರಿಸಿದ ಜಿಪಂ. ಸಿಇಒ ಗಂಗೂಬಾಯಿ ಮಾನಕರ. ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಿತರಿಸದೆ ಹಾಗೆ ಸಂಗ್ರಹಿಸಿಟ್ಟಿರುವ ಸ್ಯಾನಿಟರಿ ನ್ಯಾಪಕಿನ್ ಕಿಟ್‌ಗಳು.
ನ್ಯಾಪಕಿನ್ ಕಿಟ್‌ ವಿತರಿಸಿದ ಜಿಪಂ. ಸಿಇಒ ಗಂಗೂಬಾಯಿ ಮಾನಕರ. ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ವಿತರಿಸದೆ ಹಾಗೆ ಸಂಗ್ರಹಿಸಿಟ್ಟಿರುವ ಸ್ಯಾನಿಟರಿ ನ್ಯಾಪಕಿನ್ ಕಿಟ್‌ಗಳು.

ಬಾಗಲಕೋಟೆ: ಮಹಿಳೆಯರು ಹಾಗೂ ಯುವತಿಯರಿಗೆ ಹಂಚಿಕೆ ಮಾಡಲು ತರಿಸಲಾಗಿರುವ ೪ ಲಕ್ಷ  ಸ್ಯಾನಿಟರಿ ನ್ಯಾಪಕಿನ್‌ಗಳನ್ನು ಕಳೆದ ಜನವರಿಯಿಂದ ವಿತರಿಸದೇ ಕುಂಭಕರ್ಣ ನಿದ್ರೆಯಲ್ಲಿದ್ದ ಅಧಿಕಾರಿಗಳಿಗೆ ಜಿಪಂ. ಸಿಇಒ ಕಾರಣ ಕೇಳಿ ನೋಟಿಸ್ ನೀಡುವ ಮೂಲಕ ನಿದ್ರಾಭಂಗ ಮಾಡಿದ್ದಾರೆ.

ಮಹಿಳೆಯರು ಹಾಗೂ ಯುವತಿಯರಿಗೆ ಶುಚಿ ಯೋಜನೆಯಡಿ ಬರುವ ನ್ಯಾಪಕಿನ್ ಸಾನಿಟರಿಗಳನ್ನು ನಿಗದಿತ ಏಳು ದಿನಗಳ ಅವಧಿಯಲ್ಲಿ ವಿತರಿಸಬೇಕು ಎನ್ನುವ ನಿಯಮಾವಳಿ ಮೀರಿ ಸಂಬಂಧಿಸಿದ ಅಧಿಕಾರಿಗಳು ಬಾಗಲಕೋಟೆಯ ೫೦ ಹಾಸಿಗೆಯ ಆಸ್ಪತ್ರೆಯಲ್ಲಿರುವ ತಾಲೂಕು ಆಸ್ಪತ್ರೆಯಲ್ಲಿ  ವಿತರಿಸದೇ ಹಾಗೆ ಸಂಗ್ರಹಿಸಿಟ್ಟಿದ್ದರು.

ಜಿಪಂ. ಸಿಇಒ ಗಂಗೂಬಾಯಿ ಮಾನಕರ ಅವರು ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ನ್ಯಾಪಕಿನ್‌ಗಳನ್ನು ವಿತರಿಸದೇ ಅಧಿಕಾರಿಗಳು ಹಾಗೆ ಇಟ್ಟುಕೊಂಡಿರುವ ಅಂಶ ಬೆಳಕಿಗೆ ಬರುತ್ತಲೇ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟಗೆ ತೆಗೆದುಕೊಂಡಿದ್ದರು. ಜತೆಗೆ ೨೦೧೯-೨೦ನೇ ಸಾಲಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ನೀಡಲು ಬಂದಿದ್ದ ಆರೋಗ್ಯ ಕಿಟ್ ವಿತರಿಸಿಲ್ಲ ಎನ್ನುವ ಅಂಶವೂ ಬಯಲಾದ ತೀವ್ರ ಅಸಮಾಧಾನ ಹೊರ ಹಾಕಿದ್ದರು.

ಸ್ಯಾನಿಟರಿಗಳನ್ನು ವಿತರಸದೇ ಆಸ್ಪತ್ರೆಯಲ್ಲಿಯೇ ಇಟ್ಟುಕೊಂಡಿರುವ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿಇಒ ಅವರು ಏಕೆ ವಿತರಣೆ ಮಾಡಿಲ್ಲ ಎನ್ನುವ ಕುರಿತು ಕಾರಣ ಕೇಳಿ ನೋಟಿಸ್ ಕೂಡ ಜಾರಿ ಮಾಡಿದ್ದು, ಅಧಿಕಾರಿಗಳಲ್ಲಿ ಕಕ್ಕಾಬಿಕ್ಕಿಯನ್ನುಂಟು ಮಾಡಿದೆ.

ಶುಚಿ ಯೋಜನೆಯಡಿ ಮಹಿಳೆಯರಿಗೆ ಮತ್ತು ಯುವತಿಯರಿಗೆ ನೀಡುವ ಸ್ಯಾನಿಟರಿ ನ್ಯಾಪಕಿನ್‌ಗಳನ್ನು ನಿಗದಿತ ಅವಧಿಯೊಳಗೆ ವಿತರಣೆ ಮಾಡಬೇಕು. ಪ್ರತಿ ವರ್ಷ ಬರುವ ಸ್ಯಾನಿಟರಿ ನ್ಯಾಪಕಿನ್‌ಗಳನ್ನು ವಿತರಣೆಗೆ ವಿವಿಧ ಇಲಾಖೆಗೆ ಸರಬರಾಜು ಮಾಡಬೇಕು. ವಿತರಿಸದ ಬಗ್ಗೆ ಸೂಕ್ತ ದಾಖಲೆ ಇಡಬೇಕು. ಸರಬರಾಜು ಆದ ೭ ದಿನಗಳಲ್ಲಿ ಅವುಗಳ ವಿತರಣೆಗೆ ಕ್ರಮಕೈಗೊಳ್ಳಬೇಕು ಎನ್ನುವ ನಿಯಮಗಳನ್ನು ಅಧಿಕಾರಿಗಳು ಗಾಳಿಗೆ ತೂರಿರುವುದನ್ನು ಕಂಡು ಕೆಂಡಾಮಂಡಲವಾಗಿದ್ದ ಸಿಇಒ ಅವರು ಸೋಮವಾರ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ತುರ್ತು ಸಭೆ ಕರೆಯುವ ಮೂಲಕ ವಿವರ ಮಾಹಿತಿ ಪಡೆದು ಎಚ್ಚರಿಕೆ ನಿರ್ಲಕ್ಷಿತ ಅಧಿಕಾರಿಗಳಗೆ ಸೂಕ್ತ  ಎಚ್ಚರಿಕೆ ಕೂಡ ನೀಡಿದ್ದಾರೆ.

ಹದಿಹರೆಯದ ಹೆಣ್ಣು ಮಕ್ಕಳು ಋತುಕಾಲದ ಸಮಯದಲ್ಲಿ ಶುಚಿತ್ವವಿಲ್ಲದ ಅಭ್ಯಾಸಗಳಿಂದ ಉಂಟಾಗಬಹುದಾದ ಸೋಂಕುಗಳಿಂದ ಶಾಲೆಗೆ ಗೈರು ಹಾಜರಾಗುವುದು ಹಾಗೂ ತಮ್ಮ ದೈನಂದಿನ ಆರ್ಥಿಕ, ಕೌಟುಂಬಿಕ ಚಟುವಟಿಕೆಗಳಿಂದ ದೂರ ಉಳಿಯುವ ಕಾರಣಕ್ಕಾಗಿ ಸ್ಯಾನಿಟರಿ ನ್ಯಾಪಕಿನ್‌ಗಳ ಬಳಕೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರ ಶುಚಿ ಯೋಜನೆ ರೂಪಿಸಿದ್ದು, ಇದನ್ನು ಸರಿಯಾಗಿ ಅನುಷ್ಠಾನಗೊಳಿಸದಿರುವ ಅಧಿಕಾರಿಗಳ ವಿರುದ್ದ ಸಭೆಯಲ್ಲಿ ಹರಿಹಾಯ್ದ ಸಿಇಒ ಅವರು ಈಗಾಗಲೇ ಬಂದ ದಾಸ್ತಾನುಗಳನ್ನು ಇಲಾಖಾವಾರು ಸರಬರಾಜು ಮಾಡಬೇಕು. ಸರಬರಾಜು ಆದ ತಕ್ಷಣ ವಿತರಣೆಗೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ಶುಚಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ ತೋರಿದ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಬಿ.ಜಿ.ಹುಬ್ಬಳ್ಳಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ದಾಸ್ತಾನು ಇರುವುದು ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎನ್ನುವ ಖಡಕ್  ಎಚ್ಚರಿಕೆ ಕೂಡ ನೀಡಿದ್ದಾರೆ.

ಅಧಿಕಾರಿಗಳ ತುರ್ತು ಸಭೆಯಲ್ಲಿಯೇ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಇಲಾಖೆಗೆ ದಾಸ್ತಾನುಗಳನ್ನು ವಿತರಿಸುವ ಕೆಲಸ ಕೂಡ ನಡೆಯಿತು ಎನ್ನುವುದು ಗಮನಾರ್ಹ.

ಸರಕಾರದ ಯೋಜನೆಗಳನ್ನು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಳಂಬ ನೀತಿ ಅನುಸರಿಸಿದಲ್ಲಿ ಸಂಬAಧ ಪಟ್ಟ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತಗೊಳ್ಳುತ್ತಾರೆ. ಸರ್ಕಾರ ಜಾರಿಗೆ ತರುವ ಯೋಜನೆಗಳೂ ಸರಿಯಾಗಿ ಅನುಷ್ಠಾನಗೊಳ್ಳದೇ ವಿಫಲವಾಗುತ್ತವೆ. ಸರ್ಕಾರ ಜಾರಿಗೆ ತರುವ ಯೋಜನೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಜನತೆಗೆ ಮುಟ್ಟಿಸುವ ಕೆಲಸ ಮಾಡಿದಾಗ ಅವು ಸಾರ್ಥಕತೆ ಪಡೆದುಕೊಳ್ಳಲಿವೆ ಎನ್ನುವ ನೀತಿ ಪಾಠವನ್ನು ಸಿಇಒ ಸಭೆಯಲ್ಲಿ ಬೋಧಿಸಿದರು.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com