ನಮ್ಮ ಮಕ್ಕಳಿಗೆ ಆನ್ ಲೈನ್ ನಲ್ಲಿ ಪಾಠ ಬೇಕು, ಸರ್ಕಾರ ಅನುಮತಿ ಕೊಡಲಿ ಎಂದು ಹೇಳುತ್ತಿದ್ದಾರೆ ಬೆಂಗಳೂರು ಪೋಷಕರು!

ಕೊರೋನಾ ವೈರಸ್ ಸಮಸ್ಯೆಯಿಂದಾಗಿ ಪ್ರಸಕ್ತ ವರ್ಷ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಮನೆಗಳಲ್ಲಿ ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಶಾಲೆ ಆರಂಭವಾದರೆ ಕಳುಹಿಸಲೂ ಭೀತಿ ಎಂಬ ಸಂದಿಗ್ಧದಲ್ಲಿ ಪೋಷಕರಿದ್ದಾರೆ. ಇನ್ನು ನಗರ ಪ್ರದೇಶಗಳಲ್ಲಂತೂ ಪೋಷಕರಿಗೆ ಮಕ್ಕಳನ್ನು ನೋಡಿಕೊಳ್ಳುವುದು ಹರಸಾಹಸವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಕೊರೋನಾ ವೈರಸ್ ಸಮಸ್ಯೆಯಿಂದಾಗಿ ಪ್ರಸಕ್ತ ವರ್ಷ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಇಂತಹ ಸಂದರ್ಭದಲ್ಲಿ ಮನೆಗಳಲ್ಲಿ ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಶಾಲೆ ಆರಂಭವಾದರೆ ಕಳುಹಿಸಲೂ ಭೀತಿ ಎಂಬ ಸಂದಿಗ್ಧದಲ್ಲಿ ಪೋಷಕರಿದ್ದಾರೆ. ಇನ್ನು ನಗರ ಪ್ರದೇಶಗಳಲ್ಲಂತೂ ಪೋಷಕರಿಗೆ ಮಕ್ಕಳನ್ನು ನೋಡಿಕೊಳ್ಳುವುದು ಹರಸಾಹಸವಾಗಿದೆ.

ಏನೂ ಕಲಿಸದೆ ಇರುವುದಕ್ಕಿಂತ ಇ-ಲರ್ನಿಂಗ್ ಉತ್ತಮ ಎಂದು ಶಾಲೆಯ ಮಾಲೀಕರು, ಪೋಷಕರು, ಶಿಕ್ಷಣ ತಜ್ಞರು ಅಭಿಪ್ರಾಯಕ್ಕೆ ಬಂದಿದ್ದು ಟ್ವಿಟ್ಟರ್ ಮತ್ತು ಇತರ ಸೋಷಿಯಲ್ ಮೀಡಿಯಾಗಳ ಮೂಲಕ ಹೇಳಿಕೊಳ್ಳುತ್ತಿದ್ದಾರೆ. ಪೋಷಕರ ವಿರೋಧದ ನಂತರ ಆನ್ ಲೈನ್ ತರಗತಿಗಳನ್ನು ನಿಷೇಧ ಮಾಡಿದ ನಂತರ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಈ ರೀತಿಯ ವ್ಯತಿರಿಕ್ತ ಅಭಿಪ್ರಾಯ ಬರುತ್ತಿದೆ.

ನಿನ್ನೆ ಟ್ವಿಟ್ಟರ್ ನಲ್ಲಿ ಅಪರಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ #righttolearn ಎಂಬ ಹ್ಯಾಶ್ ಟಾಗ್ ನಡಿ 25 ಸಾವಿರಕ್ಕೂ ಹೆಚ್ಚು ಟ್ವೀಟ್ ಗಳು ಬಂದಿದ್ದವು. ದೀಪು ಚಂದ್ರನ್ ಎಂಬ ಪೋಷಕಿಗೆ ತಮ್ಮ 2ನೇ ತರಗತಿಯಲ್ಲಿ ಓದುತ್ತಿರುವ ಮಗನಿಗೆ ಆನ್ ಲೈನ್ ಕ್ಲಾಸ್ ರದ್ದಾಗಿದ್ದು ಬೇಸರವಾಗಿದೆ. ಸರ್ಕಾರ ಮಕ್ಕಳನ್ನು ಉದ್ಧಾರ ಮಾಡುವ ಬದಲು ಕಳಪೆ ಗುಣಮಟ್ಟಕ್ಕೆ ತಳ್ಳುತ್ತಿದೆ. ಆನ್ ಲೈನ್ ಶಿಕ್ಷಣ ಸೌಲಭ್ಯ ಪಡೆಯಲು ಸಾಧ್ಯವಾಗದ ಮಕ್ಕಳ ಪೋಷಕರಿಂದ ಬರುವ ಟೀಕೆಗಳನ್ನು ತಪ್ಪಿಸಲು ಹೀಗೆ ಮಾಡಿದೆ ಎಂದು ಆರೋಪಿಸಿದ್ದಾರೆ.

ಖಾಸಗಿ ಕೋಚಿಂಗ್ ನೀಡುವವರಿಗೆ, ಟ್ಯೂಷನ್ ಮಾಡುವವರಿಗೆ ಸರ್ಕಾರ ಅನುಮತಿ ಕೊಟ್ಟಿರುವಾಗ ಪೂರ್ವ ಪ್ರಾಥಮಿಕ ತರಗತಿಗಳನ್ನು ಆನ್ ಲೈನ್ ನಲ್ಲಿ ಏಕೆ ನಡೆಸಬಾರದು, 2030ಕ್ಕೆ ಡಿಜಿಟಲ್ ಸಾಕ್ಷರತೆ ಗುರಿ ತಲುಪಬೇಕೆಂದು ಸರ್ಕಾರ ಹೇಳುತ್ತಿದೆ. ಹೀಗಿರುವಾಗ ಇ-ಲರ್ನಿಂಗ್, ಆನ್ ಲೈನ್ ಶಿಕ್ಷಣಕ್ಕೆ ಏಕೆ ಒತ್ತು ನೀಡಬಾರದು, ಸರ್ಕಾರದ ಆದೇಶದಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ನಮಗೆ ಬಂದಿದೆ ಎಂದು ದ ಗ್ರೀನ್ ಸ್ಕೂಲ್ ಬೆಂಗಳೂರು ಮತ್ತು ದ ಬೆಂಗಳೂರು ಸ್ಕೂಲ್ ವೈಟ್ ಫೀಲ್ಡ್ ನಿರ್ದೇಶಕಿ ಉಷಾ ಐಯ್ಯರ್ ಹೇಳುತ್ತಾರೆ.

ಮನೆಯಲ್ಲಿ ಎಷ್ಟು ಹೊತ್ತು ಕಾಲ ಮಕ್ಕಳನ್ನು ಶಾಲಾ ವಾತಾವರಣದಲ್ಲಿ ಹೇಳಿಕೊಡುವುದು, ಅಷ್ಟಕ್ಕೂ ಒಂದು ಗಂಟೆಗಿಂತ ಹೆಚ್ಚು ಕಾಲ ಆನ್ ಲೈನ್ ನಲ್ಲಿ ಕ್ಲಾಸ್ ಮಾಡುವುದಿಲ್ಲ, ನನ್ನ ಮಗಳು ಶಾಲೆ, ಶಿಕ್ಷಕಿಯರು, ಸ್ನೇಹಿತರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾಳೆ ಎಂದು 3ನೇ ತರಗತಿಯಲ್ಲಿ ಓದುತ್ತಿರುವ ಮಗುವಿನ ತಾಯಿ ಅನುಷಾ ಮಾಧವನ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com