ಜುಲೈ 1 ರವರೆಗೆ ಕನಕಪುರದಲ್ಲಿ ಸ್ವಯಂ ಲಾಕ್ ಡೌನ್: ಡಿಕೆ ಶಿವಕುಮಾರ್ 

ಕನಕಪುರದಲ್ಲಿ ಕೊರೊನಾ ಸೋಂಕು‌‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ತಿಂಗಳಾಂತ್ಯದವರೆಗೆ ಇಡೀ‌ ಕನಕಪುರ ತಾಲ್ಲೂಕು ಸ್ವಯಂ‌‌ ಲಾಕ್‌ಡೌನ್ ಆಗಲಿದೆ.
ರಾಮನಗರದಲ್ಲಿ ಶಿವಕುಮಾರ್ ಸಭೆ
ರಾಮನಗರದಲ್ಲಿ ಶಿವಕುಮಾರ್ ಸಭೆ

ರಾಮನಗರ: ಕನಕಪುರದಲ್ಲಿ ಕೊರೊನಾ ಸೋಂಕು‌‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ತಿಂಗಳಾಂತ್ಯದವರೆಗೆ ಇಡೀ‌ ಕನಕಪುರ ತಾಲ್ಲೂಕು ಸ್ವಯಂ‌‌ ಲಾಕ್‌ಡೌನ್ ಆಗಲಿದೆ.ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು, ವ್ಯಾಪಾರಸ್ಥರು ಜೂನ್‍ 30ರವರೆಗೆ ಸ್ವಯಂ ಪ್ರೇರಿತ ಲಾಕ್‍ಡೌನ್‍ ವಿಧಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಭಾನುವಾರ ಕನಕಪುರದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್‍ ಅವರ ಸಮ್ಮುಖದಲ್ಲಿ ಕನಕಪುರ ನಗರದ ವ್ಯಾಪಾರಿ ಮಳಿಗೆಗಳ ಮಾಲೀಕರು ಮತ್ತು ವಿವಿಧ ಸಂಘ-ಸಂಸ್ಥೆಗಳು ತಮ್ಮ ಈ ನಿರ್ಧಾರವನ್ನು ಪ್ರಕಟಿಸಿದರು.

ಸಭೆಯಲ್ಲಿ ಮಾತನಾಡಿದ ಅವರು ಮುಂದಿನ 1 ನೇ ತಾರೀಖಿನವರೆಗೆ ಕ್ಷೇತ್ರದ ಜನ ಸೆಲ್ಫ್ ಕ್ವಾರಂಟೈನ್ ಆಗಬೇಕು.ನಗರದಲ್ಲಿ ಬಾರ್, ವೈನ್ ಶಾಪ್, ಮೆಡಿಕಲ್, ಚಿಕನ್, ಮಟನ್ ಶಾಪ್ಸ್, ದಿನಸಿ ಅಂಗಡಿಗಳು ಸೇರಿ ಜನರಿಗೆ ಅಗತ್ಯವಿರುವ ಅಂಗಡಿಮುಂಗಟ್ಟುಗಳು ತೆರೆಯಲು ಅವಕಾಶವಿದೆ. ಬೆಳಗ್ಗೆ 7 ರಿಂದ ರಾತ್ರಿ 11 ರವರೆಗೆ ತೆರೆಯಲು ಅವಕಾಶವಿದೆ.
ಉಳಿದ ಎಲ್ಲಾ ಅಂಗಡಿಗಳು ಸಹ ಬಂದ್ ಆಗಲಿವೆ ಎಂದು ತಿಳಿಸಿದರು.

ಇನ್ನು ಜನರಿಗಾಗಿ ತೆರೆಯುವ ಎಲ್ಲಾ ಅಂಗಡಿಗಳಲ್ಲಿಯೂ ಮಾಸ್ಕ್, ಸ್ಯಾನಿಟೈಜರ್ ಕಡ್ಡಾಯವಾಗಿ ಇರಬೇಕು. ಜಿಲ್ಲೆಯಲ್ಲಿ ಕ್ವಾರಂಟೈನ್ ಇರುವವರಿಗೆ ಗುಣಮಟ್ಟದ ಆಹಾರ ಕೊಡಬೇಕು. ಸರ್ಕಾರದಿಂದ ಒಬ್ಬರಿಗೆ 60 ರೂ ಸಿಗುತ್ತಿದೆ. ನಮ್ಮ ಡಿಕೆಎಸ್ ಚಾರಿಟೆಬಲ್ ಟ್ರಸ್ಟ್​ನಿಂದ 100 ರೂ ಕೊಡಲಾಗುತ್ತೆ. ಒಟ್ಟು160 ರೂಪಾಯಿಗೆ ಕ್ವಾರಂಟೈನ್​ನಲ್ಲಿರುವವರಿಗೆ
ಗುಣಮಟ್ಟದ ಆಹಾರ ಕೊಡಬೇಕು.

ಅಗತ್ಯವಿದ್ದರೆ ಕ್ವಾರಂಟೈನ್​ನಲ್ಲಿ ಇರುವವರಿಗೆ ಬೆಡ್ ಶೀಟ್​ಗಳನ್ನು ಸಹ ಕೊಡಲಾಗುತ್ತೆ ಎಂದರು. ಇನ್ನು ನಿಗದಿತ ಸಮಯದಲ್ಲಿ ಮದ್ಯ ಕೂಡಾ ಲಭ್ಯವಿರಲಿದೆ. ಆದರೆ ಸಾಮಾಜಿಕ ಅಂತರ ಕಾಪಾಡುವ ವ್ಯವಸ್ಥೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲೇ ಬೇಕು ಎಂದರು.

ಸರ್ಕಾರಿ ಕಚೇರಿ, ಸರ್ಕಾರಿ ಬಸ್‍ ಸೇವೆ, ಆರೋಗ್ಯ ಸೇವೆಗಳು ಮುಂದುವರೆಯಲಿ ಎಂದು ಸೂಚನೆ ನೀಡಿರುವ ಡಿಕೆ ಶಿವಕುಮಾರ್, ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತೊಂದರೆ ಆಗದಂತೆ ಕ್ರಮ‌ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನು ಈ ಲಾಕ್‌ಡೌನ್‌ಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಡಿ.ಕೆ ಶಿವಕುಮಾರ್, ಇದು ನಾವೇ ನಮಗಾಗಿ ತೆಗೆದುಕೊಂಡ ನಿರ್ಧಾರ. ಯಾವುದೇ ಗೊಂದಲ  ಬೇಡ. ಎಲ್ಲರೂ ಸಹರಿಸಿ ಎಂದು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com