ಬೆಂಗಳೂರು: ವರ್ಷದಿಂದ ಫಲಿತಾಂಶಕ್ಕಾಗಿ ಕಾಯುತ್ತಿರುವ 20 ಸಾವಿರ ಉದ್ಯೋಕಾಂಕ್ಷಿಗಳ ಬದುಕು ಅತಂತ್ರ

ಒಂದು ವರ್ಷದ ಹಿಂದೆ ಸರಿಯಾಗಿ 20 ಸಾವಿರ  ಅಭ್ಯರ್ಥಿಗಳು ಲೋಕೋಪಯೋಗಿ ಇಲಾಖೆಯ ಎಂಜಿನೀಯರಿಂಗ್ ಹುದ್ದೆಗಳ ನೇಮಕಾತಿಗಾಗಿ  ಕೆಪಿಎಸ್ ಸಿ ಮೂಲಕ ಪರೀಕ್ಷೆ ಬರೆದಿದ್ದರು. ಆದರೆ ಸದ್ಯ ಕಾನೂನಾತ್ಮಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅಡ್ವೋಕೇಟ್ ಜನರಲ್ ಅವರ ಸಲಹೆ ಕೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಒಂದು ವರ್ಷದ ಹಿಂದೆ ಸರಿಯಾಗಿ 20 ಸಾವಿರ  ಅಭ್ಯರ್ಥಿಗಳು ಲೋಕೋಪಯೋಗಿ ಇಲಾಖೆಯ ಎಂಜಿನೀಯರಿಂಗ್ ಹುದ್ದೆಗಳ ನೇಮಕಾತಿಗಾಗಿ  ಕೆಪಿಎಸ್ ಸಿ ಮೂಲಕ ಪರೀಕ್ಷೆ ಬರೆದಿದ್ದರು. ಆದರೆ ಸದ್ಯ ಕಾನೂನಾತ್ಮಕ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅಡ್ವೋಕೇಟ್ ಜನರಲ್ ಅವರ ಸಲಹೆ ಕೇಳಿದೆ.

ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ 870 ಎಂಜಿನಿಯರಿಂಗ್ ಹುದ್ದೆಗಳಿಗಾಗಿ ಮಾರ್ಚ್ 19 ರಂದು ಅರ್ಜಿ ಆಹ್ವಾನಿಸಲಾಗಿತ್ತು.  570 ಸಹಾಯಕ ಎಂಜಿನೀಯರ್, ಮತ್ತು 300 ಜ್ಯೂನಿಯರ್ ಎಂಜಿನೀಯರ್ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸಿತ್ತು.

ಜುಲೈ ತಿಂಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು, ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಂಜಿನೀಯರಿಂಗ್ ನೇಮಕಾತಿ ಸೇರಿದಂತೆ ಹಲವು ನಿರ್ಧಾರಗಳನ್ನು ರದ್ದುಗೊಳಿಸಲಾಯಿತು. ನವೆಂಬರ್ ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಅನುಮೋದಿಸಲಾಗಿತ್ತು. ಡಿಸೆಂಬರ್ ತಿಂಗಳಿನಲ್ಲಿ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ಮಂಡಳಿ ಮೊರೆ ಹೋಗಿದ್ದರು.

ಏತನ್ಮಧ್ಯೆ, ರಾಜ್ಯ ಸರ್ಕಾರ ಈ ವರ್ಷದ ಜನವರಿಯಲ್ಲಿ ಕೆಪಿಎಸ್ಸಿ ಮೂಲಕ 925 ಎಂಜಿನಿಯರ್ ಹುದ್ದೆಗಳಿಗೆ  ಅರ್ಜಿ ಆಹ್ವಾನಿಸಿತ್ತು. ಆದರೆ ಮಾರ್ಚ್ ನಲ್ಲಿ ಕಳೆದ ಜೂನ್ ನಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಪರವಾಗಿ ತೀರ್ಪು ನೀಡಿತ್ತು. ಜೊತೆಗೆ ಸರ್ಕಾರದ ಹೊಸ ಆದೇಶವನ್ನು  ಅಸಿಂಧುಗೊಳಿಸಿತ್ತು.

ಆದರೆ ಕೊರೋನಾ ಸಮಸ್ಯೆಯಿಂದಾಗಿ ಅಭ್ಯರ್ಥಿಗಳಿಗೆ ಏನು ಮಾಡಬೇಕು ಎಂಬುದು ತಿಳಿಯದೇ ಕಂಗಲಾಗಿದ್ದಾರೆ. ಹಲವು ಅಭ್ಯರ್ಥಿಗಳು ಸಿಎಂ ಯಡಿಯೂರಪ್ಪ ಮತ್ತು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ,

ಖಾಸಗಿ ಕಂಪನಿಗಳಲ್ಲಿ ಕೆಲಸ ಕೇಳಲು ಹೋದರೇ ಅನುಭವ ಕೇಳುತ್ತಾರೆ. ಇನ್ನು ಲೋಕೋಪಯೋಗಿ ಇಲಾಖೆಯಲ್ಲಿ ಎಂಜಿನೀಯರ್ ಗಳ ಕೊರತೆಯಿದೆ, 1400 ಜ್ಯೂನಿಯರ್  ಎಂಜಿನೀಯರ್ ಗಳ ಪೈಕಿ ನಮಗೆ 600 ಜೆಇ ಗಳ ಅವಶ್ಯಕತೆಯಿದೆ, ಅವರಿಲ್ಲದೇ ನಮಗೆ ಫೀಲ್ಡ್ ವರ್ಕ್ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಎಟಿ ಆದೇಶದ ನಂತರ ಸರ್ಕಾರ ಹೈಕೋರ್ಟ್ ಕದ ತಟ್ಟಿದೆ, ಅಭ್ಯರ್ಥಿಗಳು ಕೂಡ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com