ಮೂರು ತಿಂಗಳ ನಂತರ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಸೇವೆ ಪುನರ್ ಆರಂಭ

ಮೂರು ತಿಂಗಳ ಬಳಿಕ ಸೋಮವಾರದಿಂದ ಮಿಂಟೋ ಕಣ್ಣಿನ ಆಸ್ಪತ್ರೆ ಸೇವೆಯನ್ನು ಪುನರ್ ಆರಂಭಿಸಿದೆ. 
ಕಣ್ಣು ಪರೀಕ್ಷೆಯ ಸಾಂದರ್ಭಿಕ ಚಿತ್ರ
ಕಣ್ಣು ಪರೀಕ್ಷೆಯ ಸಾಂದರ್ಭಿಕ ಚಿತ್ರ

ಬೆಂಗಳೂರು: ಮೂರು ತಿಂಗಳ ಬಳಿಕ ಸೋಮವಾರದಿಂದ ಮಿಂಟೋ ಕಣ್ಣಿನ ಆಸ್ಪತ್ರೆ ಸೇವೆಯನ್ನು ಪುನರ್ ಆರಂಭಿಸಿದೆ. 
ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಬೆಂಗಳೂರು ವೈದ್ಯಕೀಯ ಕಾಲೇಜ್ ಸಂಶೋಧನಾ ಸಂಸ್ಥೆಯಡಿಯಲ್ಲಿ ಬರುವ ಆಸ್ಪತ್ರೆಗಳು ಕೋವಿಡ್ ಯೇತರ ರೋಗಿಗಳಿಗೂ ಚಿಕಿತ್ಸೆ ನೀಡದೆ ಬಾಗಿಲು ಹಾಕಿದ್ದರಿಂದ ಆರ್ಥಿಕವಾಗಿ ಹಿಂದುಳಿದ ಸಮುದಾಯದವರಿಗೆ ತೀವ್ರ ತೊಂದರೆಯಾಗಿತ್ತು.

ಕೋವಿಡ್ ಯೇತರ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯದೆ ಹಿಂದುಳಿದ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರಿಂದ ಸೇವೆಯನ್ನು ಪುನರ್ ಆರಂಭಿಸಲು ನಿರ್ಧರಿಸಿದ್ದೇವೆ. ಮೊದಲ ಹಂತದಲ್ಲಿ ಮಿಂಟೋ ಕಣ್ಣಿನ ಆಸ್ಪತ್ರೆ ಆರಂಭವಾಗಲಿದೆ. ಎರಡನೇ ಹಂತದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಹೊರ ರೋಗಿ. ಚರ್ಮ,ಮೂಳೆರೋಗ ಮತ್ತು ಇಎನ್ ಟಿ ವಿಭಾಗವನ್ನುಆರಂಭಿಸುತ್ತೇವೆ. ಆದಾಗ್ಯೂ, ಸರ್ಜರಿ ಮಾಡುವುದಿಲ್ಲ ಎಂದು ಬಿಎಂಸಿಆರ್ ಐ ನಿರ್ದೇಶಕಿ ಮತ್ತು ಡೀನ್ ಡಾ. ಸಿ. ಆರ್ . ಜಯಂತಿ ತಿಳಿಸಿದ್ದಾರೆ.

ಸೋಮವಾರ 40 ರೋಗಿಗಳು ಮಿಂಟೋ ಕಣ್ಣಿನ ಆಸ್ಪತ್ರೆಗೆ ಬಂದಿದ್ದಾರೆ. ಸಿಬ್ಬಂದಿಗಳು ಸೂಕ್ತ ಮುಂಜಾಗ್ರತೆ ವಹಿಸಿದ್ದಾರೆ.ಒಬ್ಬ ರೋಗಿ ಮರಳಿದ ನಂತರ ಡಾಕ್ಟರ್ ಭೇಟಿಗೆ ಸ್ವಲ್ಪ ವಿರಾಮ ನೀಡಲಾಗುವುದು, ಮುಂದಿನ ರೋಗಿಗೆ ಅವಕಾಶ ನೀಡುವಾಗ ಸ್ಥಳವನ್ನು ಸ್ಯಾನಿಟೈಸ್ ಮಾಡಲಾಗುವುದು ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತ್ ರಾಥೋಡ್ ಹೇಳಿದರು.

ರೋಗಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗಿದೆ. ಪ್ರಸ್ತುತ 300 ಹಾಸಿಗೆ ಸಾಮರ್ಥ್ಯದ ಮಿಂಟೋ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲು ಇರಿಸಲಾಗಿದೆ .ಆದಾಗ್ಯೂ,ಈವರೆಗೂ ಯಾವುದೇ ರೋಗಿ ದಾಖಲಾಗಿಲ್ಲ ಎಂದು ಅವರು ತಿಳಿಸಿದರು.

ಮುಂಜಾಗ್ರತಾ ಕ್ರಮಗಳು
* ಪ್ರವೇಶದಲ್ಲಿ ಮೊದಲಿಗೆ ರೋಗಿಗಳನ್ನು ತಪಾಸಣೆ ಮಾಡಲಾಗುವುದು
* ರೋಗಿಗಳ ದಾಖಲೆಗಳನ್ನು ಸಂಗ್ರಹಿಸಲಾಗುವುದು
* ರೋಗಿಗಳ ಲಕ್ಷಣಗಳನ್ನು ಉಲ್ಲೇಖಿಸಲಾಗುವುದು
* ಒಂದು ವೇಳೆ ರೋಗಿಗಳು ಕಂಟೈನ್ ಮೆಂಟ್ ವಲಯದಿಂದ ಬಂದಿದ್ದರೆ ಅಥವಾ ಲಕ್ಷಣಗಳು ಕಂಡುಬಂದಿದ್ದರೆ ಅಂತವರನ್ನು ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com