ಸರ್ಕಾರದ ಅನುಮತಿ ಇಲ್ಲದೆಯೇ ಕಾರ್ಖಾನೆ ಮುಚ್ಚಲು ಸಾಧ್ಯವಿಲ್ಲ, ಕಾರ್ಮಿಕರನ್ನು ತೆಗೆದುಹಾಕುವವರ ವಿರುದ್ಧ ಕ್ರಮ: ಸಚಿವ ಹೆಬ್ಬಾರ್

100ಕ್ಕಿಂತಲೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳು ಸರ್ಕಾರ ಅನುಮತಿ ಇಲ್ಲದೆಯೇ ಮುಚ್ಚುವಂತಿಲ್ಲ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಸೋಮವಾರ ಹೇಳಿದ್ದಾರೆ. 
ಶಿವರಾಮ್ ಹೆಬ್ಬಾರ್
ಶಿವರಾಮ್ ಹೆಬ್ಬಾರ್

ಬೆಳಗಾವಿ: 100ಕ್ಕಿಂತಲೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಖಾನೆಗಳು ಸರ್ಕಾರ ಅನುಮತಿ ಇಲ್ಲದೆಯೇ ಮುಚ್ಚುವಂತಿಲ್ಲ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಅವರು ಸೋಮವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರದ ಗಮನಕ್ಕೆ ತರದೆ, ಅನುಮತಿ ಪಡೆಯದೆಯೇ ಕಾರ್ಖಾನೆಗಳು ಬಾಗಿಲು ಮುಚ್ಚುವಂತಿಲ್ಲ. ಲಾಕ್'ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ಸಾಕಷ್ಟು ಕಾರ್ಖಾನೆಗಳು, ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿರುವ ಕುರಿತು ದೂರುಗಳು ಬಂದಿವೆ. ಇಂತ ಕಾರ್ಖಾನೆಗಳನ್ನು ಗುರ್ತಿಸಿ, ಪಟ್ಟಿ ಮಾಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ಈ ಮೂಲಕ ಕಾರ್ಮಿಕರಿಗೆ ನ್ಯಾಯ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಪ್ರತೀಯೊಬ್ಬ ಕಾರ್ಮಿಕನಿಗೂ ರೂ.5,000ದಂತೆ ಸರ್ಕಾರ ಪರಿಹಾರ ನೀಡಲಿದೆ. 85,000 ಕಾರ್ಮಿಕರ ಪೈಕಿ ಈಗಾಗಲೇ 60,000 ಕಾರ್ಮಿಕರಿಗೆ ಇದರಿಂದ ಲಾಭವಾದಂತಾಗಿದೆ. ಉಳಿದವರ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಪರಿಹಾರ ವಿಸ್ತರಣೆ ಮಾಡಲಿದ್ದಾರೆಂದು ತಿಳಿಸಿದ್ದಾರೆ. 

ಇಲಾಖೆಯಲ್ಲಿ ಈ ವರೆಗೂ 7.80 ಲಕ್ಷ ಕಾರ್ಮಿಕರ ಪೈಕಿ 3.34 ಲಕ್ಷ ಕಾರ್ಮಿಕರ ಕುರಿತು ಮಾಹಿತಿ ಇದೆ. ಉಳಿದವರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಕಾರ್ಮಿಕರ ಕಲ್ಯಾಣಕ್ಕಾಗಿ ರೂ.1000 ಮೀಸಲಿಡಲಾಗುತ್ತದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com