ನಾಳೆಯಿಂದ ಸಾರಿಗೆ ಸಂಸ್ಥೆ ಎಸಿ ಬಸ್‍ಗಳ ಸಂಚಾರ ಪ್ರಾರಂಭ 

ಬೆಂಗಳೂರು: ಕೊರೋನಾ ಸೋಂಕಿನ ಭೀತಿಯಿಂದಾಗಿ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಎಸಿ ಬಸ್ ಸಂಚಾರವನ್ನುನಿಲ್ಲಿಸಿದ್ದ ಕೆ ಎಸ್ ಆರ್ ಟಿ ಸಿ ಸಂಸ್ಥೆ ಮೊದಲ ಹಂತವಾಗಿ ನಾಳೆಯಿಂದ 8 ಜಿಲ್ಲೆಗಳಿಗೆ ಸಂಚಾರ ಸೇವೆ ಪುನರಾರಂಭಿಸಲಿದೆ.
ಕೆಎಸ್‌ಆರ್‌ಟಿಸಿ ಎಸಿ ಬಸ್
ಕೆಎಸ್‌ಆರ್‌ಟಿಸಿ ಎಸಿ ಬಸ್

ಬೆಂಗಳೂರು: ಬೆಂಗಳೂರು: ಕೊರೋನಾ ಸೋಂಕಿನ ಭೀತಿಯಿಂದಾಗಿ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಎಸಿ ಬಸ್ ಸಂಚಾರವನ್ನುನಿಲ್ಲಿಸಿದ್ದ ಕೆ ಎಸ್ ಆರ್ ಟಿ ಸಿ ಸಂಸ್ಥೆ ಮೊದಲ ಹಂತವಾಗಿ ನಾಳೆಯಿಂದ 8 ಜಿಲ್ಲೆಗಳಿಗೆ ಸಂಚಾರ ಸೇವೆ ಪುನರಾರಂಭಿಸಲಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಮೊದಲ ಹಂತದಲ್ಲಿ ಬೆಂಗಳೂರಿನಿಂದ ಕೆಲ ನಿಗದಿತ ಸ್ಥಳಗಳಿಗೆಸಂಚಾರ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂದು ತಿಳಿಸಿದೆ .

ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ ಶಿವಮೊಗ್ಗ , ವಿರಾಜಪೇಟೆಗೆ ಬೆಂಗಳೂರಿನಿಂದ ಕೆ ಎಸ್ ಆರ್ ಟಿ ಸಿಯ ಎಸಿ ಬಸ್ ಸಂಚಾರ ಆರಂಭವಾಗಲಿದೆ.

ಹವಾ ನಿಯಂತ್ರಿತ ಸಾರಿಗಗಳಲ್ಲಿ ಮಾರ್ಗಸೂಚಿಯ ಅನ್ವಯ 24 ರಿಂದ 25 ಸೆಂಟಿಗ್ರೇಡ್ ತಾಪಮಾನವನ್ನು ನಿರ್ವಹಿಸಲಿದೆ. ಆದರೆ ಕೊರೋನಾ ಮುಂಜಾಗ್ರತಾ ಕ್ರಮವಾಗಿ ಈ ಮೊದಲು ಎಸಿ ಬಸ್ ಗಳಲ್ಲಿ ನೀಡಲಾಗುತ್ತಿದ್ದಂತೆ ಹೊದಿಕೆಗಳನ್ನು ನೀಡಲಾಗುವುದಿಲ್ಲ. ಹೀಗಾಗಿ ಪ್ರಯಾಣಿಕರೇ ತಮ್ಮ ಹೊದಿಕೆಗಳನ್ನು ತಾವೇ ತರುವಂತೆ ಸಂಸ್ಥೆ ಕೋರಿಕೊಂಡಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com