ಬೆಂಗಳೂರು: ಸಿಲಿಕಾನ್ ಸಿಟಿಯ ಐಪಿಎಸ್ ಅಧಿಕಾರಿಗೂ ವಕ್ಕರಿಸಿದ ಕೊರೋನಾ

ಇತ್ತೀಚೆಗೆ ಕೊರೋನಾ ವಾರಿಯರ್ ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಐಪಿಎಸ್ ಅಧಿಕಾರಿಗೂ ಕೊರೋನಾ ಆವರಿಸುವಲ್ಲಿ ಯಶಸ್ವಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಕೊರೋನಾ ವಾರಿಯರ್ ಪೊಲೀಸರಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದೀಗ ಐಪಿಎಸ್ ಅಧಿಕಾರಿಗೂ ಕೊರೋನಾ ಆವರಿಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ(ಕೆಎಸ್‌ಆರ್‌ಪಿ)ಯ ಕಮಾಂಡೆಂಟ್‌ ಆಗಿ ಸೇವೆ ಸಲ್ಲಿಸುತ್ತಿರುವ 46 ವರ್ಷದ ಐಪಿಎಸ್‌ ಅಧಿಕಾರಿಯೋರ್ವರಿಗೆ ಮಂಗಳವಾರ ರಾತ್ರಿ ಕೊರೊನಾ ಸೋಂಕು ಇರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ತಕ್ಷಣವೇ ಅವರನ್ನು ನಗರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ‌ನೀಡಲಾಗುತ್ತಿದೆ.

ಆಸ್ಟಿನ್ ಕ್ವಾಟರ್ಸ್ ನಲ್ಲಿದ್ದ ಅವರಿಗೆ ಉಸಿರಾಟ ತೊಂದರೆ, ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಕೋವಿಡ್-19 ಪರೀಕ್ಷೆ ಗೆ ಒಳಪಡಿಸಲಾಗಿತ್ತು.

ಕೆಎಸ್​​ಆರ್​​​ಪಿಯಲ್ಲಿ ರಾಜ್ಯಾದ್ಯಂತ 62 ಸಿಬ್ಬಂದಿಗೆ ಪಾಸಿಟಿವ್​​ ಬಂದಿದೆ. ಅದರಲ್ಲಿ ಬೆಂಗಳೂರಿನಲ್ಲೇ 11 ಸಿಬ್ಬಂದಿ ಇದ್ಧಾರೆ.

ಎರಡು ದಿನಗಳ ಹಿಂದೆಯಷ್ಟೇ ಪೊಲೀಸ ಕಾನ್ಸ್​ಟೇಬಲ್​ ಒಬ್ಬರಿಗೆ ಕೊರೋನಾ ಬಂದ ಪರಿಣಾಮ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆಯೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಈಗ ಹಿರಿಯ ಐಪಿಎಸ್ ಅಧಿಕಾರಿಗೆ ಕೊರೋನಾ ಬಂದಿದ್ದರಿಂದ ಉಳಿದ ಸಿಬ್ಬಂದಿಗೆ ಭೀತಿ ಶುರುವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com