ಕೆ.ಆರ್. ಮಾರ್ಕೆಟ್, ಕಲಾಸಿಪಾಳ್ಯ 14 ದಿನಗಳ ಕಾಲ ಸಂಪೂರ್ಣ ಬಂದ್: ಬಿಬಿಎಂಪಿ ಆದೇಶ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಸದಾ ಜನ ದಟ್ಟಣೆ ಹಾಗೂ ವ್ಯಾಪಾರ- ವಹಿವಾಟಿನಿಂದ ಕೂಡಿರುತ್ತಿದ್ದ ಕಲಾಸಿಪಾಳ್ಯ ಮತ್ತು ಕೆಆರ್ ಮಾರ್ಕೆಟ್ ನ್ನು 14 ದಿನಗಳ ಕಾಲ ಬಂದ್ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ ಆದೇಶ ಹೊರಡಿಸಿದೆ.
ಕೆಆರ್ ಮಾರ್ಕೆಟ್
ಕೆಆರ್ ಮಾರ್ಕೆಟ್

ಬೆಂಗಳೂರು:  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವಂತೆ ಸದಾ ಜನ ದಟ್ಟಣೆ ಹಾಗೂ ವ್ಯಾಪಾರ- ವಹಿವಾಟಿನಿಂದ ಕೂಡಿರುತ್ತಿದ್ದ ಕಲಾಸಿಪಾಳ್ಯ ಮತ್ತು ಕೆಆರ್ ಮಾರ್ಕೆಟ್ ನ್ನು 14 ದಿನಗಳ ಕಾಲ ಬಂದ್ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬುಧವಾರ ಆದೇಶ ಹೊರಡಿಸಿದೆ.

ಟೌನ್ ಹಾಲ್ ಸರ್ಕಲ್, ಜೆ. ಸಿ. ನಗರ. ಎಎಂ ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಕೆ ಆರ್ ಮಾರ್ಕೆಟ್ ಜಂಕ್ಷನ್, ಸರ್ವೀಸ್ ರಸ್ತೆ, ತರಗುಪೇಟೆ ರಸ್ತೆ, 2 ಮತ್ತು 4ನೇ ಮುಖ್ಯರಸ್ತೆ, ಟಿಪ್ಪು ಸುಲ್ತಾನ್ ಪ್ಯಾಲೇಸ್ ರಸ್ತೆ, ಭಾಷ್ಯಂ ರಸ್ತೆ, ಶ್ರೀನಿವಾಸ್ ಮಂದಿರ ರಸ್ತೆ, ಕಿಲ್ಲಾರಿ ರಸ್ತೆ ಅಂಜನೇಯ ದೇವಾಲಯ ಸ್ಟ್ರೀಟ್, ಸಂಕಲ್ ಪೇಟೆ ರಸ್ತೆ ಮತ್ತು ಎಸ್ ಜೆಪಿ ರಸ್ತೆಯನ್ನು ಸೀಲ್ ಡೌನ್ 
ಮಾಡಲಾಗಿದೆ.

ಹೆಚ್ಚಿನ ಆರ್ಥಿಕ ಚಟುವಟಿಕೆ ಹಾಗೂ ಪಾದಚಾರಿ ಮಾರ್ಗದ ಕಾರಣ ಸಾಮಾಜಿಕ ಅಂತರ ಪಾಲನೆ ಕಷ್ಟಸಾಧ್ಯವಾಗುತ್ತಿದೆ. ಈ ಮಾರುಕಟ್ಟೆಯಲ್ಲಿ ಜನರ ಚಲನ ವಲನ ಹಾಗೂ ವಾಹನ ಸಂಚಾರ ನಿರ್ವಹಣೆಯೂ ಆಗುತ್ತಿಲ್ಲ. ಆದ್ದರಿಂದ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೀಲ್ ಡೌನ್ ಮಾಡುವುದು ಅಗತ್ಯವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಈ ಪ್ರದೇಶದಲ್ಲಿ ರೆಸ್ಟೋರೆಂಟ್, ಹೋಟೆಲ್ ಗಳು ಮತ್ತು ಬೀದಿ ಬದಿ ವ್ಯಾಪಾರ, ಸ್ಥಳೀಯ ಶಾಪ್ , ದಿನಸಿ ಅಂಗಡಿ ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ- ವಾಣಿಜ್ಯವನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಲಾಗಿದೆ.

ಧಾರ್ಮಿಕ ಸ್ಥಳಗಳು, ಹೂವಿನ ಮಾರ್ಕೆಟ್, ಮದ್ಯ ಅಂಗಡಿಗಳು ಮತ್ತು ಮತ್ತಿತರ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ನ್ಯೂಸ್ ಪೇಪರ್, ತರಕಾರಿ, ದಿನಸಿ, ಮಾಂಸದ ಅಂಗಡಿ ಮತ್ತಿತರ ಅತ್ಯವಶ್ಯಕ ಸೇವೆಗಳಿಗೆನಿಯಮಗಳು ಅನ್ವಯವಾಗುವುದಿಲ್ಲ. ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳು, ಆಸ್ಪತ್ರೆಗಳು, ಮೆಡಿಕಲ್ ಸ್ಟೋರಿ ಮತ್ತು ಕ್ಲಿನಿಕ್ ಗಳಿಗೆ ವಿನಾಯಿತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com