ಹೆಸರಾಂತ ಉದಯರಂಗ ಮೋಟಾರ್ಸ್ ಮಾಲೀಕ ನಿಧನ  

ಹೆಸರಾಂತ ಖಾಸಗಿ ರಸ್ತೆ ಸಾರಿಗೆ ಸಂಸ್ಥೆ ಉದಯರಂಗ ಮೋಟಾರ್ಸ್ ಮಾಲೀಕ ಎಂ ವಿ ಸುಬ್ರಮಣ್ಯ ಗುರುವಾರ ವಿಧಿವಶರಾಗಿದ್ದಾರೆ. ಅವರಿಗ 74 ವರ್ಷ ವಯಸ್ಸಾಗಿತ್ತು.

Published: 25th June 2020 06:33 PM  |   Last Updated: 26th June 2020 10:54 AM   |  A+A-


MV_Subramanya

ಉದಯ ರಂಗ ಬಸ್ ಮಾಲೀಕ ಎಂ.ವಿ. ಸುಬ್ರಮಣ್ಯ

Posted By : Nagaraja AB
Source : UNI

ಮೈಸೂರು/ಬೆಂಗಳೂರು: ಹೆಸರಾಂತ ಖಾಸಗಿ ರಸ್ತೆ ಸಾರಿಗೆ ಸಂಸ್ಥೆ ಉದಯರಂಗ ಮೋಟಾರ್ಸ್ ಮಾಲೀಕ ಎಂ ವಿ ಸುಬ್ರಮಣ್ಯ ಗುರುವಾರ ವಿಧಿವಶರಾಗಿದ್ದಾರೆ. ಅವರಿಗ 74 ವರ್ಷ ವಯಸ್ಸಾಗಿತ್ತು

ಮೈಸೂರು, ಚಾಮರಾಜನಗರ, ಕೊಳ್ಳೇಗಾಲ ಭಾಗದಲ್ಲಿ ಚಿರಪರಿಚಿತವಾಗಿರುವ, ಉದಯರಂಗ ಮೋಟಾರ್ಸ್ ಬೆಂಗಳೂರಿನಲ್ಲಿಯೂ ಕಳೆದೊಂದು ದಶಕದ ಹಿಂದೆ ವ್ಯವಹಾರವನ್ನು ವಿಸ್ತರಿಸಿತ್ತು.

ಮಳವಳ್ಳಿಯಲ್ಲಿ ಮಹಾಲಕ್ಷ್ಮಿ ಹಾಗೂ ರಾಜರಾಜೇಶ್ವರಿ ಚಿತ್ರ ಮಂದಿರದ ಮಾಲೀಕರು, ಪ್ರದರ್ಶಕರು ಹಾಗೂ ಹಂಚಿಕೆದಾರರೂ ಆಗಿದ್ದ ಸುಬ್ರಮಣ್ಯ ಅವರು, ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಿಗೆ ಫೈನಾನ್ಸ್ ಮಾಡಿದ್ದರು. ಹೀಗಾಗಿ ಅನೇಕ ಚಿತ್ರಗಳು ತೆರೆಕಂಡು ಯಶಸ್ಸು ಗಳಿಸಲು ಸಾಧ್ಯವಾಗಿತ್ತು.

ಸುಬ್ರಮಣ್ಯ ಅವರ ನಿಧನಕ್ಕೆ ದ್ವಾರಕೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಹಿರಿಯ ನಟರು ಕಂಬನಿ ಮಿಡಿದಿದ್ದಾರೆ.
 

Stay up to date on all the latest ರಾಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp