ಪರಿಷ್ಕೃತ ಉಪನಗರ ರೈಲು ಯೋಜನೆಗೆ ಕೇಂದ್ರ ವಿತ್ತ ಸಚಿವಾಲಯ ಅನುಮೋದನೆ: ಪ್ರಧಾನಿ ಕಾರ್ಯಾಲಯದ ಒಪ್ಪಿಗೆ ಬಾಕಿ!

ಬೆಂಗಳೂರಿಗೆ ಪರಿಷ್ಕೃತ ಉಪನಗರ ರೈಲು ಯೋಜನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಅನುಮೋದನೆಗೊಂಡಿದ್ದು, ಅದನ್ನು ಕಾರ್ಯಗತಗೊಳಿಸುವ ನೋಡಲ್ ಏಜೆನ್ಸಿಯಿಂದ ಸಲ್ಲಿಸಲಾಗಿದೆ.148.17 ಕೀ. ಮೀ. ದೂರದ ಈ ಯೋಜನೆಗೆ 15.767 ಕೋಟಿ ವೆಚ್ಚ ಮಾಡಲಾಗುತ್ತಿದೆ.
ರೈಲಿನ ಚಿತ್ರ
ರೈಲಿನ ಚಿತ್ರ

ಬೆಂಗಳೂರು: ಬೆಂಗಳೂರಿಗೆ ಪರಿಷ್ಕೃತ ಉಪನಗರ ರೈಲು ಯೋಜನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ ಅನುಮೋದನೆಗೊಂಡಿದ್ದು, ಅದನ್ನು ಕಾರ್ಯಗತಗೊಳಿಸುವ ನೋಡಲ್ ಏಜೆನ್ಸಿಯಿಂದ ಸಲ್ಲಿಸಲಾಗಿದೆ.148.17 ಕೀ. ಮೀ. ದೂರದ ಈ ಯೋಜನೆಗೆ 15.767 ಕೋಟಿ ವೆಚ್ಚ ಮಾಡಲಾಗುತ್ತಿದೆ.

ರೈಲು ಬೋಗಿಗಳಿಗಾಗಿ ಹೆಚ್ಚುವರಿಯಾಗಿ 2. 855 ಕೋಟಿ ವೆಚ್ಚವಾಗುತ್ತಿದ್ದು,ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಉನ್ನತ ರೈಲ್ವೆ ಮೂಲಗಳು ಮತ್ತು ರಾಜ್ಯ ಸರ್ಕಾರದ ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ಈ ವಿಚಾರವನ್ನು ಖಚಿತಪಡಿಸಿದ್ದಾರೆ.

ಮೊದಲಿಗೆ ಉದ್ದೇಶಿಸಲಾಗಿದ್ದ 18.621 ಕೋಟಿ ವೆಚ್ಚದ ಯೋಜನಾ ವೆಚ್ಚವನ್ನು 15.767 ರೂ. ಗೆ ತಗ್ಗಿಸಿ ಪರಿಷ್ಕೃತ ವರದಿಯನ್ನು ಮೇ ತಿಂಗಳಲ್ಲಿ ಹಣಕಾಸು ಸಚಿವಾಲಯಕ್ಕೆ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್ ಪ್ರೈಸಸ್ (ಕೆ-ಆರ್ ಐಡಿಇ) ಸಲ್ಲಿಸಿತ್ತು. ಕೋಚ್ ಗಳಿಗಾಗಿ ಖಾಸಗಿವರನ್ನು ಕೂಡಾ ಈ ಯೋಜನೆಯಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳುವಂತೆ ಜನವರಿಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಶಿಫಾರಸು ಮಾಡಿತ್ತು.

ವರದಿಯನ್ನು ಹಣಕಾಸು ಸಚಿವಾಲಯ ರೈಲ್ವೆ ಮಂಡಳಿಗೆ ವಾಪಸ್ ಕಳುಹಿಸಿದೆ. ಇದನ್ನು ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಗೆ ಸಲ್ಲಿಸಲಾಗುವುದು,ಪ್ರಧಾನ ಮಂತ್ರಿ ಅನುಮೋದನೆ ನೀಡಿದರೆ ಈ ಯೋಜನೆ ಜಾರಿಯಾದಂತೆ ಎಂದು ರಾಜ್ಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಂದು ತಿಂಗಳೊಳಗೆ ಯೋಜನೆ ಜಾರಿಗೆ ಬರಲಿದೆ ಎಂದು ಬೆಂಗಳೂರು ಸಂಟ್ರಲ್ ಸಂಸದ ಪಿ.ಸಿ. ಮೋಹನ್ ಸ್ಪಷ್ಟಪಡಿಸಿದ್ದಾರೆ. ಸರ್ವೇ, ಭೂ, ಸ್ವಾಧೀನ ಮತ್ತಿತರ ಪ್ರಾಥಮಿಕ ಕಾರ್ಯಗಳು ಈಗಾಗಲೇ ಚಾಲನೆ ಹಂತದಲ್ಲಿದ್ದು, ಸಂಪೂರ್ಣ ವಿಶ್ವಾಸವಿರುವುದಾಗಿ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.

ಈ ಯೋಜನೆಯು ನಾಲ್ಕು ಕಾರಿಡಾರ್‌ಗಳನ್ನು ಒಳಗೊಳ್ಳಲಿದ್ದು, ವಿಮಾನ ನಿಲ್ದಾಣ ಮಾರ್ಗಕ್ಕೆ ಆದ್ಯತೆ ನೀಡಲಾಗುತ್ತಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ( ಬೆಂಗಳೂರು ಸಿಟಿ) ಯಶವಂತಪುರ- ಯಲಹಂಕ- ದೇವನಹಳ್ಳಿ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಬೈಯಪ್ಪನಹಳ್ಳಿ- ಬಾಣಸವಾಡಿ, ಲೊಟ್ಟೆಗೊಲ್ಲಹಳ್ಳಿ, ವೈಟ್ ಫೀಲ್ಡ್- ಯಶವಂತಪುರ- ಚಿಕ್ಕಬಾಣಾವಾರ
ಕೆಂಗೇರಿ- ಕಂಟೊನ್ಮೆಂಟ್- ವೈಟ್ ಫೀಲ್ಡ್ ಮತ್ತು ಬೈಯಪ್ಪನಹಳ್ಳಿ- ಚನ್ನಸಂದ್ರ- ಯಶವಂತಪುರ- ರಾಜನುಕುಂಟೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com