ಕಂಟೈನ್‌ಮೆಂಟ್, ಸೀಲ್‌ಡೌನ್ ಪ್ರದೇಶಗಳಿಗೆ ಅಗತ್ಯ ವಸ್ತುಗಳ ವಿತರಣೆ ಬಿಬಿಎಂಪಿ ಹೊಣೆ: ಹೈಕೋರ್ಟ್
ಬೆಂಗಳೂರು ನಗರದ ಕಂಟೈನ್‍ಮೆಂಟ್ ವಲಯಗಳು ಮತ್ತು ಸೀಲ್‍ಡೌನ್ ಪ್ರದೇಶಗಳ ಜನರಿಗೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದು ಬಿಬಿಎಂಪಿ ಜವಾಬ್ದಾರಿ ಎಂದು ಹೈಕೋರ್ಟ್ ಹೇಳಿದೆ.
Published: 26th June 2020 01:47 PM | Last Updated: 26th June 2020 01:47 PM | A+A A-

ಕರ್ನಾಟಕ ಹೈ ಕೋರ್ಟ್
ಬೆಂಗಳೂರು: ಬೆಂಗಳೂರು ನಗರದ ಕಂಟೈನ್‍ಮೆಂಟ್ ವಲಯಗಳು ಮತ್ತು ಸೀಲ್‍ಡೌನ್ ಪ್ರದೇಶಗಳ ಜನರಿಗೆ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳನ್ನು ಪೂರೈಸುವುದು ಬಿಬಿಎಂಪಿ ಜವಾಬ್ದಾರಿ ಎಂದು ಹೈಕೋರ್ಟ್ ಹೇಳಿದೆ.
ಒಂದೊಮ್ಮೆ ಇದರಲ್ಲಿ ಬಿಬಿಎಂಪಿ ವಿಫಲವಾದಲ್ಲಿ ರಾಜ್ಯ ಸರ್ಕಾರ ವ್ಯವಸ್ಥೆ ಮಾಡಬೇಕು. ಇಲ್ಲವೇ ಬಿಬಿಎಂಪಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಸೂಚಿಸಿದೆ.
ಸೀಲ್‌ಡೌನ್ ಪ್ರದೇಶದಲ್ಲಿ ಅಗತ್ಯವಿರುವ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸದಿದ್ದಲ್ಲಿ ಸಾರ್ವಜನಿಕರ ಮೂಲಭೂತ ಹಕ್ಕಗಳು ಉಲ್ಲಂಘನೆಯಾಗಲಿವೆ. ಬಾಧಿತರು ಬಿಬಿಎಂಪಿಯಿಂದ ಪರಿಹಾರ ಕೇಳುವ ಹಕ್ಕು ಪಡೆದಿರುತ್ತಾರೆ. ಅಂತಹವರಿಗೆ ದೂರು ಸಲ್ಲಿಸುವ ವ್ಯವಸ್ಥೆಯನ್ನು ಕೂಡ ಬಿಬಿಎಂಪಿ ಕಲ್ಪಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.