ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಕೊಚ್ಚಿ ಹೋದ ವೃಷಭಾವತಿ ನದಿ ತಡೆಗೋಡೆ

ಗುರುವಾರ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಕೆಂಗೇರಿಯ ಮೈಲಸಂದ್ರ ವ್ಯಾಪ್ತಿಯಲ್ಲಿ ಕೆಂಗೇರಿ ಮೋರಿ (ವೃಷಭಾವತಿ ನದಿ) ಹಾಕಿದ್ದ ತಡೆಗೋಡೆ ಕುಸಿದ ಪರಿಣಾಮ ರಸ್ತೆಯ ಮೇಲೆ ನೀರು ನುಗ್ಗಿದೆ. ಹೀಗಾಗಿ, ಕೆಂಗೇರಿ ಸಮೀಪ ಭಾರೀ ಟ್ರಾಫಿಕ್​ ಜಾಮ್​ ಉಂಟಾಗಿತ್ತು.
ವೃಷಭಾವತಿ ನದಿ
ವೃಷಭಾವತಿ ನದಿ

ಬೆಂಗಳೂರು: ಗುರುವಾರ ಬೆಂಗಳೂರಲ್ಲಿ ಸುರಿದ ಭಾರೀ ಮಳೆಗೆ ಕೆಂಗೇರಿಯ ಮೈಲಸಂದ್ರ ವ್ಯಾಪ್ತಿಯಲ್ಲಿ ಕೆಂಗೇರಿ ಮೋರಿ (ವೃಷಭಾವತಿ ನದಿ) ಹಾಕಿದ್ದ ತಡೆಗೋಡೆ ಕುಸಿದ ಪರಿಣಾಮ ರಸ್ತೆಯ ಮೇಲೆ ನೀರು ನುಗ್ಗಿದೆ. ಹೀಗಾಗಿ, ಕೆಂಗೇರಿ ಸಮೀಪ ಭಾರೀ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ನಿನ್ನೆ ಮಧ್ಯಾಹ್ನದಿಂದ ಸುರಿದ ಮಳೆಗೆ ವೃಷಭಾವತಿ ನದಿ ಉಕ್ಕಿ ಹರಿದಿತ್ತು. ಕೆಂಗೇರಿಯ ದುಬಾಸಿಪಾಳ್ಯ ಬಳಿ ನದಿಯ ಹರಿವಿನ ರಭಸಕ್ಕೆ ತಡೆಗೋಡೆ ಕೊಚ್ಚಿಹೋಗಿದೆ. ತಡೆಗೋಡೆ ಕೊಚ್ಚಿಹೋದ ಪರಿಣಾಮ ಮೈಸೂರು ರಸ್ತೆಗೆ ನೀರು ಹರಿದಿದ್ದು, ರಸ್ತೆಯ ಒಂದು ಭಾಗ ಕುಸಿತವಾಗಿದೆ.

ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ವೃಷಭಾವತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಯಿತು. ನೀರಿನ ರಭಸಕ್ಕೆ ಕೆಂಗೇರಿ ಸಮೀಪ ಹೆದ್ದಾರಿಗೆ ಹೊಂದಿಕೊಂಡಿರುವ ನದಿಯ ತಡೆಗೋಡೆ ಸಂಜೆ 5.30ರ ವೇಳೆಗೆ ಸುಮಾರು 300 ಮೀಟರ್‌ ಉದ್ದ ಕುಸಿದಿದೆ. ತಡೆಗೋಡೆ ಕುಸಿದಿರುವ ಕಡೆ ರಸ್ತೆಯೂ ಬಿರುಕು ಬಿಟ್ಟು ಆತಂಕ ಸೃಷ್ಟಿಯಾಗಿತ್ತು. ನೀರು ಹೆಚ್ಚಿನ ಪ್ರಮಾಣದಲ್ಲಿ  ಹೆದ್ದಾರಿ ಮೇಲೆ ಹರಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ಥವಾಗಿತ್ತು.

ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿದ್ದಾರೆ. ನೀರಿನ ಹರಿವು ಕಡಿಮೆಯಾಗದೇ ದುರಸ್ಥಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ. ರಾತ್ರಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com