ವಿಜಯಪುರ: ತಂಗಿಯನ್ನು ಪರೀಕ್ಷೆಗೆ ಕರೆದೊಯ್ದಿದ್ದ ಸಹೋದರ ಸಾವು, ಪೊಲೀಸರ ಲಾಠಿ ಏಟಿನಿಂದ ಸಾವು?

ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಸಹೋದರ ಸಾವನ್ನಪ್ಪಿದ್ದಾನೆ.
ಸಾಗರ್
ಸಾಗರ್

ವಿಜಯಪುರ: ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ವಿಶ್ವಚೇತನ ಪರೀಕ್ಷಾ ಕೇಂದ್ರಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆಗೆಂದು ತಂಗಿಯನ್ನು ಕರೆತಂದಿದ್ದ ಸಹೋದರ ಸಾವನ್ನಪ್ಪಿದ್ದಾನೆ. 

19 ವರ್ಷದ ಯುವಕ ಸಾಗರ ಚಲವಾದಿ ಮೃತ ದುರ್ದೈವಿ. ತಂಗಿಯನ್ನು ಪರೀಕ್ಷೆಗೆ ಕಳುಹಿಸಿ ಪರೀಕ್ಷೆ ಮುಗಿಯುವವರೆಗೂ ಶಾಲೆಯ ಬಳಿಯೇ ಕಾದು ಕುಳಿತ್ತಿದ್ದಾನೆ. 

ಸ್ವಲ್ಪ ಸಮಯದ ನಂತರ ತಂಗಿಗೆ ನಕಲು ಚೀಟಿ ಕೊಡಲು ಹೋಗುತ್ತಿದ್ದಾಗ ಪೊಲೀಸರು ಆತನನ್ನು ಬೆನ್ನಟ್ಟಿದ್ದಾರೆ. ಸಾಗರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪೊಲೀಸರು ಕಂಡು ಹೆದರಿ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಇಲಾಖೆ ಹೇಳಿದೆ. 

ಆದರೆ ಸಾಗರ್ ಕುಟುಂಬಸ್ಥರು ಮಾತ್ರ ಪೊಲೀಸರು ಲಾಠಿಯಿಂದ ಹೊಡೆದ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದಾರೆ. ಇನ್ನು ಪ್ರತ್ಯಕ್ಷದರ್ಶಿಯೊಬ್ಬ ಪರೀಕ್ಷಾ ಕೇಂದ್ರದ ಹೊರಗಡೆ ನಾವು ಕಾದು ಕುಳಿತಿದ್ದೇವು. ಆಗ ಪೊಲೀಸರು ಇಲ್ಲಿ ಕೂರಬಾರದು ಹೋಗಿ ಎಂದು ಹೇಳಿದರು. 

ಅದಕ್ಕೆ ನಾವು ಎಂದು ಬೈಕ್ ಹತ್ತಿ ಹೋಗುತ್ತಿದ್ದ ಪೇದೆಯೊಬ್ಬರು ನನ್ನ ಕಾಲಿಗೆ ಲಾಠಿಯಿಂದ ಹೊಡೆದರು. ನಂತರ ನನ್ನ ಹಿಂದೆ ಕುಳಿತಿದ್ದ ಸಾಗರ್ ಬೆನ್ನಿಗೆ ಹೊಡೆದರು. ಆಗ ಆತ ನೋವಿನಿಂದ ಕೆಳಗಡೆ ಬಿದ್ದ. ನಂತರ ಆವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆವು ಎಂದು ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com