ತಜ್ಞರ ವರದಿ ಬರುವವರೆಗೂ ಆನ್'ಲೈನ್ ಶಿಕ್ಷಣ ಮುಂದುವರೆಸಿ: ಸರ್ಕಾರಕ್ಕೆ ಹೈ ಸೂಚನೆ

ತಜ್ಞರ ಸಮಿತಿಯು ಅಭಿಪ್ರಾಯ ಪಡೆಯುವ ಮುನ್ನವೇ ರಾಜ್ಯದಲ್ಲಿ ಒಂದರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಆನ್'ಲೈನ್ ಶಿಕ್ಷಣ ನಿಷೇಧಿಸಿದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರ ಹೀಗೆ ಪೂರ್ಣ ಪ್ರಮಾಣದ ನಿಷೇಧ ಹೇರಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಚಾಟಿ ಬೀಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಜ್ಞರ ಸಮಿತಿಯು ಅಭಿಪ್ರಾಯ ಪಡೆಯುವ ಮುನ್ನವೇ ರಾಜ್ಯದಲ್ಲಿ ಒಂದರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಆನ್'ಲೈನ್ ಶಿಕ್ಷಣ ನಿಷೇಧಿಸಿದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಸರ್ಕಾರ ಹೀಗೆ ಪೂರ್ಣ ಪ್ರಮಾಣದ ನಿಷೇಧ ಹೇರಿ ಆದೇಶ ಹೊರಡಿಸಿರುವುದು ಸರಿಯಲ್ಲ ಎಂದು ಚಾಟಿ ಬೀಸಿದೆ. 

ರಾಜ್ಯ ಸರ್ಕಾರದ ಆದೇಶ ರದ್ದು ಕೋರಿ ಅನುಮಿತಾ ಶರ್ಮಾ ಸೇರಿ ಅನೇಕ ಮಂದಿ ಪೋಷಕರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರ ಕಾರ್ಯ ವೈಖರಿಯನ್ನು ಟೀಕಿಸಿತು. 

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಆನ್'ಲೈನ್ ಶಿಕ್ಷಣ ವಿಚಾರವನ್ನು ಪರಾಮರ್ಶಿಸಲು ಬೆಂಗಳೂರು ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ಮಾಜಿ ಡೀನ್ ಎಂ.ಕೆ.ಶ್ರೀಧರ್ ನೇತೃತ್ವದಲ್ಲಿ 13 ಮಂದಿಯ ಸಮಿತಿ ರಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com